ಹಾವೇರಿ: ರಾಜ್ಯದ ಮುಖ್ಯಮಂತ್ರಿ, ಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ರು ಸಹಿತ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಖಂಡನೀಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರರಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶೆಟ್ಟರ್ ಪಕ್ಷದಲ್ಲಿ ಉನ್ನತ ಮುಖಂಡರ ಮನವೊಲಿಕೆಗೆ ಸಹ ಸ್ಪಂದಿಸಿಲ್ಲ ಎಂದು ತಿಳಿಸಿದರು. ಬಿಜೆಪಿ ಪಕ್ಷ ಶೆಟ್ಟರ್ಗೆ ರಾಜ್ಯದ ಉನ್ನತ ಸ್ಥಾನ ಕೊಟ್ಟಿದೆ. ಆದರೂ ಸಹಿತ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ ಅಂದ್ರೆ ಶೆಟ್ಟರ್ಗೆ ಮುಖ್ಯಮಂತ್ರಿ ಮಾಡ್ತೆವಿ ಅಂತಾ ಕಾಂಗ್ರೆಸ್ ನವರು ಹೇಳಿರಬಹುದು ಅಥವಾ ದೇಶದ ಪ್ರಧಾನಿ ಮಾಡ್ತೇವಿ ಅಂತಾ ಕಾಂಗ್ರೆಸ್ ಮುಖಂಡರು ಹೇಳಿರಬಹುದು" ಎಂದು ಬಿ.ಸಿ. ಪಾಟೀಲ್ ಲೇವಡಿ ಮಾಡಿದರು.
ಕಾಂಗ್ರೆಸ್ ನವರು ಶೆಟ್ಟರ್ಗೆ ದೇಶದ ಪ್ರಧಾನಿ ಮಾಡಬಹುದೆಂದು ಹೇಳಿರಬಹುದು: "ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಅಧೋಗತಿಗೆ ಬಂದಿದೆ. ಕಾಂಗ್ರೆಸ್ ಯಾರು ಬರ್ತಿರಾ ಬನ್ನಿ ಬನ್ನಿ ಅಂತಾ ಟಿಕೆಟ್ ಹಿಡ್ಕೊಂಡ್ ನಿಂತಿರುವದು ಬಸ್ಸ್ಟ್ಯಾಂಡ್ ನಲ್ಲಿ ಸಾರ್ವಜನಿಕರನ್ನ ಗಾಡಿ ಮಾಲೀಕರು ಕೂಗಿ ಕೂಗಿ ಹತ್ತಿಸಿಕೊಳ್ಳವಂತಿದೆ ಎಂದು ಪಾಟೀಲ್ ವ್ಯಂಗ್ಯವಾಡಿದರು. ಲಕ್ಷ್ಮಣ ಸವದಿ, ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಖಂಡನೀಯ. ಸವದಿಯನ್ನ ಸೋತಿದ್ರು ಸಹ ಡಿಸಿಎಂ ಮಾಡಿ ಎಂಎಲ್ಸಿ ಮಾಡಲಾಯಿತು. ಕುಮಟಳ್ಳಿ ಸೇರಿದಂತೆ 17 ಜನ ಪಕ್ಷ ಬಿಟ್ಟು ಬಂದಿದಕ್ಕೆ ಇವರು ಡಿಸಿಎಂ ಆಗಿದ್ದರು. ಇದನ್ನೆಲ್ಲಾ ಸವದಿಯವರು ತಿಳಿದುಕೊಂಡು ಪಕ್ಷದಲ್ಲಿ ಇರಬೇಕಿತ್ತು" ಎಂದರು.
"ಅಲ್ಲದೇ ಧರ್ಮೇಂದ್ರ ಪ್ರಧಾನ, ಅಮಿತ್ ಶಾ ಕೂಡ ಶೆಟ್ಟರ್ ಜೊತೆ ಮಾತನಾಡಿದ್ದರು. ನಿಮಗೆ ಕೇಂದ್ರದ ಸಚಿವ ಸ್ಥಾನ ಕೊಡ್ತೀವಿ ಅಂತಲೂ ಹೇಳಿದ್ದರು. ಇಷ್ಟೆಲ್ಲಾ ಹೇಳಿದ್ರು ಸಹಿತ ಶೆಟ್ಟರ್ ರಾಜೀನಾಮೆ ಕೊಟ್ಟು ಹೋಗಿದ್ದು ನೋಡಿದ್ರೆ ಶೆಟ್ಟರ್ ಅವರನ್ನ ಬಹುಶಃ ಕಾಂಗ್ರೆಸ್ ನವರು ದೇಶದ ಪ್ರಧಾನಿ ಮಾಡಬಹುದೆಂದು ಹೇಳಿರಬಹುದು" ಎಂದು ವ್ಯಂಗ್ಯವಾಡಿದರು. ಅವರು ಬುಲೆಟ್ ಬೈಕ್ ಬಿಟ್ಟು ಬುಲ್ಡೋಜರ್ ಹತ್ತಬೇಕು, ಅದನ್ನು ಬಿಟ್ಟು ಸ್ಪ್ಲೆಂಡರ್ ಬೈಕ್ ಹತ್ತಿದ್ದಾರೆ ಎಂದರು.
ಇದನ್ನೂ ಓದಿ: ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಜೊತೆಯಲ್ಲಿದೆ: ಮುಖ್ಯಮಂತ್ರಿ ಬೊಮ್ಮಾಯಿ
ನಾಳೆ ಇನ್ನು ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ಹಿರೇಕೆರೂರಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಈ ವೇಳೆ ಬಿಜೆಪಿ ಉಪಧ್ಯಕ್ಷ ವಿಜಯೇಂದ್ರ, ಸಂಸದ ಶಿವಕುಮಾರ್ ಉದಾಸಿ ಭಾಗವಹಿಸಲಿದ್ದಾರೆ ಎಂದು ಪಾಟೀಲ್ ತಿಳಿಸಿದರು. ಬೆಳಗ್ಗೆ 10 ಗಂಟೆಯಿಂದ ಹಿರೇಕೆರೂರ ಪಟ್ಟಣದಲ್ಲಿ ರೋಡ್ ಶೋ ಮಾಡಿ ನಂತರ ಮಧ್ಯಾಹ್ನ 1 ಗಂಟೆಗೆ ಹಿರೇಕೆರೂರ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ ಬಿ ಫಾರಂ ಪಡೆದ ಶೆಟ್ಟರ್; ಹೈಕಮಾಂಡ್ ಘೋಷಣೆಗೂ ಮುನ್ನವೇ ಕೈ ಅಭ್ಯರ್ಥಿಯಾಗಿ ಆಯ್ಕೆ
ಇದನ್ನೂ ಓದಿ: 'ಕೈ' ಹಿಡಿದ ಶೆಟ್ಟರ್; ಲಿಂಗಾಯತ ಮತದಾರರನ್ನು ಕಟ್ಟಿ ಹಾಕಲು ಕಮಲ ಕಲಿಗಳ ರಣತಂತ್ರ, ನಾಳೆ ಹುಬ್ಬಳ್ಳಿಗೆ ನಡ್ಡಾ..