ETV Bharat / state

ಕಾಂಗ್ರೆಸ್​ ಪಕ್ಷದಲ್ಲಿದ್ದರೂ ನನ್ನ ರಾಜಕೀಯ ಗುರು ದೇವೇಗೌಡರು: ಜಮೀರ್ ಅಹ್ಮದ್ - ETV Bharat Kannada

ನನ್ನ ಮತ್ತು ಒಕ್ಕಲಿಗರ ನಡುವೆ ಏನೂ ಇಲ್ಲ. ನನ್ನನ್ನು ರಾಜಕೀಯಕ್ಕೆ ಕಳುಹಿಸಿದ್ದೇ ಒಕ್ಕಲಿಗ ಗುರುಗಳು. ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಹೇಳಿದಂತೆ 2002ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಹಾವೇರಿಯಲ್ಲಿ ಜಮೀರ್​ ಹೇಳಿದ್ದಾರೆ.

b-z-zameer-ahmed-khan
ಜಮೀರ್ ಅಹ್ಮದ್
author img

By

Published : Jul 25, 2022, 6:53 PM IST

ಹಾವೇರಿ : ಎಲ್ಲ ಜಾತಿಯವರ ಪರ ಇರೋ ಪಕ್ಷ ಅಂದರೆ ಅದು ಕಾಂಗ್ರೆಸ್. ಇಡೀ ದೇಶದಲ್ಲಿ ಜಾತಿ ಮತ ಅಂತ ಬಿಟ್ಟು ಉತ್ತಮ ಆಡಳಿತ ಕೊಡುವುದು ಕಾಂಗ್ರಸ್​ ಮಾತ್ರ. ಬಿಜೆಪಿಯವರು ಮತಗಳ ನಡುವೆ ಸಂಘರ್ಷ ತಂದು ಅಧಿಕಾರ ಪಡೆಯುತ್ತಾರೆ ಅಷ್ಟೇ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರೋಕೆ ಕಾರಣವೆ ಒಕ್ಕಲಿಗರು. ನಾನು ರಾಜಕೀಯಕ್ಕೆ ಬರಲು ಮುಸ್ಲಿಂ ಗುರುಗಳಲ್ಲ ಕಾರಣ,2002ರಲ್ಲಿ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನನ್ನು ರಾಜಕೀಯಕ್ಕೆ ಸೇರಿಸಿದ್ದು, ಸ್ವಾಮೀಜಿಗಳ ಆದೇಶದ ಮೇರೆಗೆ ನಾನು ಜನತಾದಳಕ್ಕೆ ಹೋದೆ. ವಿಜಯನಗರ, ಚುಂಚನಗಿರಿ ಮಠದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇರುತ್ತಿದೆ. ನನ್ನ ಸ್ವಾಮೀಜಿಗಳ ಸಂಬಂಧ ಏನು ಅಂತಾ ಮಠದಲ್ಲಿ ಹೋಗಿ ಕೇಳಿ ಎಂದರು.

ಕಾಂಗ್ರೆಸ್​ ಪಕ್ಷದಲ್ಲಿದ್ದರೂ ನನ್ನ ರಾಜಕೀಯ ಗುರು ದೇವೇಗೌಡರು

ನಾನು ಕಾಂಗ್ರೆಸ್​ನಲ್ಲಿದ್ದರೂ ನನ್ನ ರಾಜಕೀಯ ಗುರು ಒಕ್ಕಲಿಗರಾದ ದೇವೇಗೌಡರು. ನನಗೆ 2005ರ ಉಪ ಚುನಾವಣೆಯಲ್ಲಿ ಸ್ಥಾನ ಕೊಟ್ಟು ಗೆಲ್ಲಿಸಿದವರು ಗೌಡರು. ನಾನು ಒಕ್ಕಲಿಗರ ಬಗ್ಗೆ ಏನು ಮಾತಾಡಿದ್ದೇನೆ ನೀವೇ ಹೇಳಿ ಎಂದು ಜಮೀರ್ ಪ್ರಶ್ನಿಸಿದರು.

ಸಿ ಟಿ ರವಿ ಮತ್ತು ಅಶೋಕ್​ ಟೀಕೆಗೆ ಉತ್ತರಿಸಿ, ಬಿಜೆಪಿಯವರಿಗೆ ಅಧಿಕಾರದ ಆಸೆನ ಇಲ್ಲವೇ, ಸಿ ಟಿ ರವಿ ಮತ್ತು ಅಶೋಕ್​ ನಡುವೆಯೇ ಸ್ಪರ್ಧೆ ಇದೆ. ಬಿಜೆಪಿಯವರು ದೇಶವನ್ನು ಹಾಳು ಮಾಡ್ತಿದ್ದಾರೆ. ಸಿ.ಟಿ.ರವಿಯವರಿಗೆ ಹಿಂದೂ, ಮುಸಲ್ಮಾನ ಯಾರೂ ಬೇಕಾಗಿಲ್ಲ. ಅವರಿಗೆ ಬೇಕಿರೋದು ಖುರ್ಚಿ ಮತ್ತು ಅಧಿಕಾರ ಎಂದು ಜಮೀರ್ ಅಹ್ಮದ್ ತಿರುಗೇಟು ನೀಡಿದರು.

ಇದನ್ನೂ ಓದಿ : ಮುಂದಿನ ಸಿಎಂ ಸಿದ್ದರಾಮಯ್ಯ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ: ಜಮೀರ್ ಅಹ್ಮದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.