ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ. ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ ಹರಿಜನ ಮತ್ತು ದುಂಡಪ್ಪ ಹಲ್ಲೆಗೊಳಗಾದವರು.
ಟೋಲ್ ಗೇಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿದ್ದ ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ ಮತ್ತು ಶಿವಕುಮಾರ ಹಲ್ಲೆ ಮಾಡಿದ ಆರೋಪಿಗಳು. ಘಟನೆಯಲ್ಲಿ ಒಬ್ಬ ಕಾನ್ಸ್ಟೇಬಲ್ ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿ ಮುಂದೆ (ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ) ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ಕುರ್ಕುರೆ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು. ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಟ್ಟಿಗೆಯಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರವಾದಿಗೆ ಅಪಮಾನ: ಅಲ್ ಖೈದಾದಿಂದ ಭಾರತದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಬೆದರಿಕೆ!