ಹಾವೇರಿ: ಜಿಲ್ಲೆ ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲ ಬಗೆಹರಿದಿದೆ. ಬಿಜೆಪಿ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪೂಜಾರ ಹೆಸರು ಅಂತಿಮವಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದ ಆಕಾಂಕ್ಷಿಗಳು ಸ್ವಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ.
![Ranebennuru](https://etvbharatimages.akamaized.net/etvbharat/prod-images/kn-hvr-03-ticket-finale-7202143_15112019104425_1511f_1573794865_3.jpg)
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಮೊದಲು ಬಿಜೆಪಿ ಅಭ್ಯರ್ಥಿಯ ಹೆಸರಿನ ಪಟ್ಟಿಯಲ್ಲಿ ಆರ್ ಶಂಕರ್ ಹೆಸರು ಕೇಳಿಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್, ಆರ್ ಶಂಕರ್ಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ಅರುಣ್ ಕುಮಾರ್ ಪೂಜಾರ್, ಡಾ.ಬಸವರಾಜ ಕೇಲಗಾರ, ಸಚಿವ ಈಶ್ವರಪ್ಪ ಪುತ್ರ ಕಾಂತೇಶ, ಪ್ರಕಾಶ ಬುರಡೀಕಟ್ಟಿ ಸೇರಿ ಹಲವರು ರೇಸ್ನಲ್ಲಿದ್ದರು. ಅನರ್ಹ ಶಾಸಕ ಆರ್.ಶಂಕರ್ಗೆ ಟಿಕೆಟ್ ನೀಡೋದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಟಿಕೆಟ್ ಹಂಚಿಕೆ ಕಗ್ಗಂಟಾಗಿತ್ತು. ಇದೀಗ ಸಿಎಂ ಯಡಿಯೂರಪ್ಪ ಅವರು, ಅರುಣ್ ಕುಮಾರ್ ಪೂಜಾರ ಹೆಸರನ್ನು ಪ್ರಕಟಿಸಿದ್ದಾರೆ.
ಅರುಣ್ ಕುಮಾರ್ ಪೂಜಾರ, 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ನ ಕೋಳಿವಾಡ ವಿರುದ್ಧ ಸೋಲುಂಡಿದ್ದರು.