ETV Bharat / state

ಮೈಕ್ರೋ ಫೈನಾನ್ಸ್: ಮಹಿಳೆಯರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ

ಮೈಕ್ರೋ ಫೈನಾನ್ಸ್ ಮೂಲಕ ಮಹಿಳೆಯರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಪ್ರಕರಣ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೈಕ್ರೋ ಫೈನಾನ್ಸ್
ಮೈಕ್ರೋ ಫೈನಾನ್ಸ್
author img

By ETV Bharat Karnataka Team

Published : Dec 28, 2023, 1:52 PM IST

ಹಾವೇರಿ: ಮೈಕ್ರೋ ಫೈನಾನ್ಸ್ ಮಹಿಳೆಯರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಹಾವೇರಿ ಜಿಲ್ಲೆಯ ಹಿರೇಕೆರೂರರಲ್ಲಿ ಕೇಳಿಬಂದಿದೆ.

ಹಿರೇಕೆರೂರು ವಿದ್ಯಾ ನಗರದಲ್ಲಿರುವ ಖಾಸಗಿ ಮೈಕ್ರೋ ಫೈನಾನ್ಸ್‌ ಸಂಸ್ಥೆಯಿಂದ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಪ್ರಭಾರ ಕೇಂದ್ರ ವ್ಯವಸ್ಥಾಪಕ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕ ಜೊತೆಗೂಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಮಹಿಳಾ ಗ್ರಾಹಕರಿಗೆ ಸಂಬಂಧಿಸಿದ 3.38 ಕೋಟಿ ರೂಪಾಯಿ ವಂಚನೆಯನ್ನು ಈ ಇಬ್ಬರು ಸಿಬ್ಬಂದಿ ಮಾಡಿರುವ ಆರೋಪದಡಿ ಹಿರೇಕೆರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಭಾರ ಕೇಂದ್ರ ವ್ಯವಸ್ಥಾಪಕ ಶಿವಾನಂದಪ್ಪ ದ್ಯಾವನಕಟ್ಟೆ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕ ಬಸವರಾಜಯ್ಯ ಎಂಬವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪ್ರತಿ ಮಹಿಳೆಯರಿಗೆ 1.25 ಲಕ್ಷದವರೆಗೂ ಸಾಲ ನೀಡಲಾಗಿತ್ತು. ಮಹಿಳಾ ಸದಸ್ಯರ ದಾಖಲೆಗಳನ್ನು ಬಳಸಿಕೊಂಡು ಆರೋಪಿಗಳು ಹಣ ವಂಚನೆ ಮಾಡಿದ್ದಾರೆ. 376 ಮಹಿಳಾ ಸದಸ್ಯರಿಗೆ 643 ನಕಲಿ ಸಾಲಗಳನ್ನು ನೀಡಿ ವಂಚಿಸಿದ್ದಾರೆ. ಒಟ್ಟು 4.16 ಕೋಟಿ ರೂಪಾಯಿ ಸಾಲ ಪಡೆದುಕೊಂಡಂತೆ ನಕಲಿ ದಾಖಲೆ ಸೃಷ್ಟಿಸಿಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ಸಾಲವನ್ನು ತಾವೇ ಪಡೆದುಕೊಂಡು ಕಂತಿನ ಹಣವನ್ನು ತಾವೇ ಸಂಸ್ಥೆಗೆ ಜಮೆ ಮಾಡುತ್ತಿದ್ದರು. ನಕಲಿ ಸಾಲದ 87.33 ಲಕ್ಷವನ್ನು ಮಾತ್ರ ಜಮಾ ಮಾಡಿ ಉಳಿದ ಹಣ ದುರುಪಯೋಗ ಪಡಿಸಿಕೊಂಡಿದ್ದರು. ಕಚೇರಿಯಲ್ಲಿ ನಕಲಿ ಕ್ಯಾಶ್ ಬುಕ್‌ ತಯಾರಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆಯರಿಗೆ ಗೊತ್ತಿಲ್ಲದೆ ಅವರ ಹೆಸರಲ್ಲಿ ವಂಚನೆ ಮಾಡಿರುವುದು ಮಹಿಳಾ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕೊಪ್ಪಳ: ಜೋರಾಗಿ ಕಿರುಚಿ ಬ್ಯಾಂಕ್​ ಕಳ್ಳತನ ತಪ್ಪಿಸಿದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.