ಹಾನಗಲ್ (ಹಾವೇರಿ): ತಾಲೂಕಿನ ಆಡೂರ ಗ್ರಾಮದಲ್ಲಿರುವ ಗುಡ್ಡದಯ್ಯಜ್ಜನ ಕಾರ್ಣಿಕೋತ್ಸವ ಅದ್ಧೂರಿಯಾಗಿ ನಡೆಯಿತು."ಮುತ್ತರತ್ನ ಸಮೃದ್ಧಲೇ ಫರಾಕ್" ಎಂದು ಗೋರವಯ್ಯಜ್ಜ ಕಾರ್ಣಿಕ ನುಡಿಗಳನ್ನ ನುಡಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಸಾಗರದ ಮಧ್ಯೆ ಬಿಲ್ಲನ್ನು ಏರಿದ ಗೋರವಯ್ಯಜ್ಜ ಮುತ್ತುರತ್ನ ಸಮೃದ್ಧಲೇ ಪರಾಕ್ ಎಂದು ನುಡಿದು ಕೆಳಗಿಳಿದರು. ಅಜ್ಜಯ್ಯನ ವಾಣಿ ಕೇಳಿದ ಜನತೆ ನಾಡಿನ ಎಲ್ಲಾ ಬೆಳೆಗಳು ಸಮೃದ್ಧವಾಗಿ ಬರುತ್ತವೆ, ಬೆಳೆದ ಫಸಲು ಸಮಾನಾಗಿ ಬರುತ್ತೆ, ಮುಂದೆ ಯಾವುದೇ ತೊಂದರೆ ಇಲ್ಲವೆಂದು ವ್ಯಾಖ್ಯಾನಿಸಿದರು.
ಆಡೂರಿನ ಗುಡ್ದದಲ್ಲಿ ವರ್ಷಕ್ಕೆ ಎರಡು ಬಾರಿ ಕಾರ್ಣಿಕೋತ್ಸವ ಜರುಗುತ್ತೆ. ಈ ಸಮಯದಲ್ಲಿ ಆದ ಕಾರ್ಣಿಕದ ಮೇಲೆ ಬೆಳೆದ ಫಸಲು ಅವಲಂಬಿಸಿರುತ್ತೆ ಎಂದು ಇಲ್ಲಿನ ಹಿರಿಯರು ತಿಳಿಸಿದರು.