ETV Bharat / state

ಬಾಗೇಪಲ್ಲಿಯಲ್ಲಿ ಅಗ್ನಿ ಆಕಸ್ಮಿಕ: ಕೋಟ್ಯಂತರ ರೂ. ಮೌಲ್ಯದ ಕ್ರಿಮಿನಾಶಕ, ಬಿತ್ತನೆ ಬೀಜಗಳು ಸುಟ್ಟು ಭಸ್ಮ

ಪ್ರಜಿತ ಆಗ್ರೋ ಸೆಂಟರ್ ನಲ್ಲಿ ಇಂದು ಬೆಳಗಿನಜಾವ ಸುಮಾರು 4 ಗಂಟೆ ಸಮಯದಲ್ಲಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಮತ್ತು ಗೋಡೌನ್ ನಲ್ಲಿದ್ದ ಕ್ರಿಮಿನಾಶಕ ಔಷಧಿಗಳು, ಬಿತ್ತನೆ ಬೀಜನೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.‌

author img

By

Published : Apr 26, 2020, 9:04 AM IST

Accidental fire sterilizer, sowing seeds Burn in Bagepalli
ಕ್ರಿಮಿನಾಶಕ, ಬಿತ್ತನೆ ಬೀಜಗಳು ಸುಟ್ಟು ಭಸ್ಮ

ಬಾಗೇಪಲ್ಲಿ: ಆಗ್ರೋ ಸೆಂಟರ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕ್ರಿಮಿನಾಶಕ ಔಷಧಿಗಳು, ಬಿತ್ತನೆ ಬೀಜಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಚೇಳೂರು ಗ್ರಾಮದಲ್ಲಿ ನಡೆದಿದೆ.

ಚೇಳೂರು ಗ್ರಾಮದ ರಾಮಸುಬ್ಬು ಅವರ ಪ್ರಜಿತ ಆಗ್ರೋ ಸೆಂಟರ್ ನಲ್ಲಿ ಇಂದು ಬೆಳಗಿನಜಾವ ಸುಮಾರು 4 ಗಂಟೆ ಸಮಯದಲ್ಲಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಮತ್ತು ಗೋಡೌನ್ ನಲ್ಲಿದ್ದ ಕ್ರಿಮಿನಾಶಕ ಔಷಧಿಗಳು, ಬಿತ್ತನೆ ಬೀಜನೆಗಳು ಸುಮಾರು 90% ರಷ್ಟು ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.‌

ಮುಂಗಾರು ಪ್ರಾರಂಭ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಹಾಗಾಗಿ ಸುಮಾರು ಒಂದು ಕೋಟಿಗೂ ಹೆಚ್ಚು ಬಂಡವಾಳದ ಬಿತ್ತನೆ ಬೀಜ ಮತ್ತು ಕ್ರಿಮಿನಾಶಕ ಔಷಧಿಗಳನ್ನು ಶೇಖರಿಸಲಾಗಿತ್ತು. ಈಗ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ದಿಕ್ಕೇ ತೋಚದಂತಾಗಿದೆ ಎಂದು ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಅಂಗಡಿ ಪಕ್ಕದಲ್ಲಿಯೇ ಜ್ಯುವೆಲ್ಲರಿ ಇದ್ದು, ಬೆಂಕಿ ತನ್ನ ಅಂಗಡಿಗೂ ವ್ಯಾಪಿಸುವುದನ್ನ ಅರಿತ ಅಂಗಡಿ‌ ಮಾಲೀಕ ಚಿನ್ನಭರಣಗಳನ್ನು ಸ್ಥಳಾಂತರ ಮಾಡಿ ತನ್ನ ಅಂಗಡಿಗೂ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಅಗ್ನಿಯನ್ನು ನಂದಿಸಿ, ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ. ಸ್ಥಳಕ್ಕೆ ಚೇಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.