ಹಾವೇರಿ: ಕೃಷಿ ಉಪಕರಣ ಪೂರೈಕೆದಾರರೊಬ್ಬರಿಂದ ಹತ್ತು ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಸಹಾಯಕ ಕೃಷಿ ನಿರ್ದೇಶಕ ಎಸಿಬಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.
ರಾಣೇಬೆನ್ನೂರು ಮೂಲದ ಮಂಜುನಾಥ ಎಂಬುವರು ರೈತರಿಗೆ ಕೃಷಿ ಉಪಕರಣ ಪೂರೈಕೆ ಮಾಡಿದ್ರು. ಅದಕ್ಕೆ ಸಂಬಂಧಿಸಿದ ಒಂದು ಲಕ್ಷ ತೊಂಬತ್ತಾರು ಸಾವಿರ ರೂ. ಹಣದ ಚೆಕ್ ನೀಡಲು ಸಹಾಯಕ ಕೃಷಿ ನಿರ್ದೇಶಕ ಅಮೃತೇಶ್ ಹತ್ತು ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ. ಈ ವೇಳೆ ದಾಳಿ ನಡೆಸಿದ ಎಸಿಬಿ ಪೊಲೀಸರು ಅಮೃತೇಶನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಈ ಸಂಬಂಧ ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.