ಹಾನಗಲ್ (ಹಾವೇರಿ) : ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಹಾನಗಲ್ ಪಟ್ಟಣದ ಪಾರ್ವತವ್ವ ದಾಸರ (55) ಮೃತ ದುರ್ದೈವಿಯಾಗಿದ್ದು, ತಮ್ಮ ಜಮೀನಿನಲ್ಲಿ ಗೋವಿನ ಜೋಳ ತೆಗೆಯಲು ಹೋದಾಗ ಇವರಿಗೆ ಹಾವು ಕಚ್ಚಿದೆ. ತಕ್ಷಣ ಕುಟುಂಬಸ್ಥರು ಮಹಿಳೆಯನ್ನ ಹಾನಗಲ್ ತಾಲೂಕಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದು, ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.