ಹಾವೇರಿ: ಕೊರೊನಾ ವೈರಸ್ನಿಂದಾಗಿ ರೈತರು ಬೆಳೆದ ಕೃಷಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ದೇವಿಹೊಸೂರಿನ ಗಣೇಶ ಸಿದಪ್ಪ ಕೋಡಮಗ್ಗಿ ಎಂಬ ರೈತ, ಎರಡು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ನಾಶ ಮಾಡಿದ್ದಾನೆ.
ಇನ್ನೇನು ಫಸಲು ಕೈಗೆ ಬರುತ್ತೆ ಎನ್ನುವಷ್ಟರಲ್ಲಿ ಮೆಣಸಿನಕಾಯಿಗೆ ಬೆಲೆ ಇಲ್ಲದೆ, ವ್ಯಾಪಾರಸ್ಥರು ಕೊಳ್ಳುತ್ತಿಲ್ಲ. ಹಾಗಾಗಿ ನಾಶ ಮಾಡುತ್ತಿರುವುದಾಗಿ ರೈತ ಗಣೇಶ ತಿಳಿಸಿದ್ದಾರೆ.