ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಗೂಗಲ್ ರಕ್ತ ಸೈನಿಕರ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ರಕ್ತದಾನಿ ನಿಮಗೆ ಸಿಗುತ್ತಾರೆ. ಒಂದು ಬಾರಿ ಅಲ್ಲ, ಹಲವು ಬಾರಿ ರಕ್ತದಾನ ಮಾಡುವ ಮೂಲಕ ಇಲ್ಲಿಯ ಯುವಕರು ಜೀವ ದಾನಿಗಳಾಗಿದ್ದಾರೆ. ಈ ರಕ್ತದಾನಿಗಳ ತವರೂರು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ಪಶು ಆಸ್ಪತ್ರೆ ವೈದ್ಯರಿಂದ ನಾಯಿಗೆ ರಕ್ತ ಹಾಕಿಸುವಂತೆ ಸಲಹೆ : ಗರ್ಭಿಣಿ ನಾಯಿಗೆ ಅವಶ್ಯವಿದ್ದ ರಕ್ತವನ್ನು ಆರೋಗ್ಯವಂತ ಶ್ವಾನದಿಂದ ಅದರ ಮಾಲೀಕ ಕೊಡಿಸುವ ಮೂಲಕ ಪ್ರಾಣಿಪ್ರೇಮ ಮೆರೆದಿದ್ದಾರೆ. ಇಲ್ಲಿಯ ಜಿಪ್ಸಿ ಹೆಸರಿನ ಎರಡು ತಿಂಗಳ ಗರ್ಭಿಣಿ ನಾಯಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಜಿಪ್ಸಿಯನ್ನ ಪಶು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಜಿಪ್ಸಿ ರಕ್ತದ ಕೊರತೆಯಿಂದ ಬಳಲುತ್ತಿದೆ, ರಕ್ತ ಹಾಕಿಸಿದರೆ ಒಳ್ಳೆಯದು ಎಂದು ತಿಳಿಸಿದ್ದರು.
ಇದನ್ನೂ ಓದಿ : ಭಟ್ಕಳ ಮತ್ತು ಶಿರಸಿಯಲ್ಲಿ ಎಸ್ಡಿಪಿಐನಿಂದ ಅಭ್ಯರ್ಥಿ ಘೋಷಣೆ : ಕಾಂಗ್ರೆಸ್ ಮತ್ತು ಬಿಜೆಪಿಗೆ ಸೆಡ್ಡು
ಜಿಮ್ಮಿ ಹೆಸರಿನ ನಾಯಿ ಸಾಕುತ್ತಿದ್ದ ವೈಭವ ಪಾಟೀಲ್‌ಗೆ ಈ ಕುರಿತ ಮಾಹಿತಿ ತಿಳಿಯುತ್ತಿದ್ದಂತೆ ಜಿಪ್ಸಿಗೆ ರಕ್ತ ನೀಡಲು ಮುಂದಾಗಿದ್ದಾರೆ. ತಮ್ಮ ನೆಚ್ಚಿನ ನಾಯಿ ಜಿಮ್ಮಿಯಿಂದ ಜಿಪ್ಸಿಗೆ ರಕ್ತದಾನ ಮಾಡಿಸಿದ್ದಾರೆ.
ಇದನ್ನೂ ಓದಿ : ದಶಪಥ ಹೆದ್ದಾರಿ ಮಂಡ್ಯ ಜಿಲ್ಲೆಯ ಜನರಿಗೆ ಮಾರಣಾಂತಿಕ : ಹೆಚ್. ಡಿ. ಕುಮಾರಸ್ವಾಮಿ
ರಕ್ತದಾನ ಕೊರತೆ ನಿವಾರಣೆಗೆ ಸ್ನೇಹಮೈತ್ರಿ ಗ್ರೂಪ್ : ತೀವ್ರ ರಕ್ತದ ಕೊರತೆಯಿಂದ ಬಳಲುತ್ತಿದ್ದ ಜಿಪ್ಸಿಗೆ ರಕ್ತ ಹಾಕುತ್ತಿದ್ದಂತೆ ಚೇತರಿಸಿಕೊಂಡಿದೆ. ಜಿಪ್ಸಿಯ ಮಾಲೀಕ ರಕ್ತದಾನ ಮಾಡಿಸಿದ ಜಿಮ್ಮಿಯ ಮಾಲೀಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮನುಷ್ಯ ಮನುಷ್ಯರ ನಡುವೆ ರಕ್ತದ ಕೊರತೆಯಾದಾಗ ಬೇಕಾಗುವ ರಕ್ತದ ಕೊರತೆ ನೀಗಿಸಲು ಅಕ್ಕಿ ಆಲೂರಿನಲ್ಲಿ ಈ ಸ್ನೇಹಮೈತ್ರಿ ರಕ್ತದಾನಿಗಳ ಗ್ರೂಪ್ ಮಾಡಲಾಗಿದೆ.
ಇದನ್ನೂ ಓದಿ : ಧಾರವಾಡಕ್ಕೆ ನಮೋ ಆಗಮನ: ಬಸ್ಗಳ ಕೊರತೆ, ಕಳಸಾ ಬಂಡೂರಿ ಹೋರಾಟಗಾರರಿಂದ ಪ್ರತಿಭಟನೆ
ಮನುಷ್ಯರಲ್ಲದೆ ಶ್ವಾನದ ರಕ್ತದ ಕೊರತೆ ನೀಗಿಸಿದ ಗ್ರೂಪ್: ಜಿಪ್ಸಿ ಮತ್ತು ಜಿಮ್ಮಿಯ ಮಾಲೀಕರು ಈ ಗ್ರೂಪ್‌ನ ಸದಸ್ಯರಾಗಿದ್ದಾರೆ. ಈ ಗ್ರೂಪ್ ಕೇವಲ ಮನುಷ್ಯರಲ್ಲದೆ ಶ್ವಾನದ ರಕ್ತದ ಕೊರತೆಯನ್ನ ಸಹ ನೀಗಿಸಿದ್ದು ಗ್ರೂಪ್ ಮಾಡಿರುವುದು ಸಾರ್ಥಕ ಎನ್ನುತ್ತಾರೆ ಗ್ರೂಪ್‌ನ ಸದಸ್ಯರು. ಈ ಅಪರೂಪದ ರಕ್ತದಾನಕ್ಕೆ ಪಶು ಆಸ್ಪತ್ರೆಯ ವೈದ್ಯ ಡಾ ಅಮೀತ್ ಪುರಾಣಿಕರ್, ಡಾ. ಸಂತೋಷ, ರಕ್ತ ಪರೀಕ್ಷಕ ದಾದಾಪೀರ್ ಕಲಾದಗಿ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಮೊದಲ ಪಟ್ಟಿ ವಾರಾಂತ್ಯದಲ್ಲಿ ಬಿಡುಗಡೆ ಸಾಧ್ಯತೆ: 120 ಅಭ್ಯರ್ಥಿಗಳು ಅಂತಿಮ?
ಮಾಲೀಕರ ಪ್ರಾಣಿ ಪ್ರೇಮಕ್ಕೆ ಎಲ್ಲೆಡೆ ಶ್ಲಾಘನೆ : ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳೇ ಹಳಸುತ್ತಿರುವ ಈ ದಿನಗಳಲ್ಲಿ ಮೂಕ ಪ್ರಾಣಿಯ ಜೀವ ಉಳಿಸಲು ತನ್ನ ಮನೆಯ ಸಾಕು ಶ್ವಾನದಿಂದ ರಕ್ತದಾನ ಮಾಡಿಸಿದ ಮಾಲೀಕರ ಪ್ರಾಣಿಪ್ರೇಮ ಶ್ಲಾಘನೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಚುನಾವಣೆಯಲ್ಲಿ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಜನರ ಮುಂದಿಟ್ಟು ಮತ ಕೇಳುತ್ತೇವೆ - ಸಿ ಟಿ ರವಿ