ಹಾವೇರಿ : ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರೋದು ಪತ್ತೆಯಾಗಿದ್ದರಿಂದ ಸೋಂಕಿತ ವಾಸವಿದ್ದ ಸವಣೂರು ಪಟ್ಟಣದ ಎಸ್ ಎಂ ಕೃಷ್ಣನಗರವನ್ನ ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.
ಏಪ್ರೀಲ್ 28 ರಂದು ಗೂಡ್ಸ್ ಲಾರಿಯಲ್ಲಿ ಮೂವರು ಮುಂಬೈನಿಂದ ಸವಣೂರು ಪಟ್ಟಣಕ್ಕೆ ಬಂದಿದ್ದರು. ಅವರನ್ನ ತಪಾಸಣೆಗೊಳಪಡಿಸಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್‌ಗೆ ಕಳುಹಿಸಿದ ನಂತರ ಮೂವರಲ್ಲಿ 32 ವರ್ಷದ ಓರ್ವನಿಗೆ ಕೊರೊನಾ ಸೋಂಕು ಇರೋದು ನಿನ್ನೆ ದೃಢಪಟ್ಟಿತ್ತು. ಇನ್ನಿಬ್ಬರ ವರದಿ ಇವತ್ತು ಜಿಲ್ಲಾಡಳಿತದ ಕೈ ಸೇರುವ ಸಾಧ್ಯತೆ ಇದೆ.
ಓರ್ವನಲ್ಲಿ ಕೊರೊನಾ ಸೋಂಕು ಇರೋದು ದೃಢಪಡ್ತಿದ್ದಂತೆ ಸೋಂಕಿತ ವಾಸವಿದ್ದ ಪ್ರದೇಶವನ್ನ ಜಿಲ್ಲಾಡಳಿತ ಬ್ಯಾರಿಕೇಡ್ ಹಾಕಿ ಸಂಪೂರ್ಣ ಸೀಲ್‌ಡೌನ್ ಮಾಡಿದೆ. ಆ ಪ್ರದೇಶದಿಂದ ಐದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನ ಬಫರ್ ಝೋನ್ ಪ್ರದೇಶವೆಂದು ಘೋಷಿಸಿದೆ. ಸೀಲ್‌ಡೌನ್ ಆಗಿರೋ ಪ್ರದೇಶದಿಂದ ಯಾರೂ ಹೊರ ಹೋಗದಂತೆ ಮತ್ತು ಆ ಪ್ರದೇಶದಲ್ಲಿ ಯಾರೂ ಒಳಗೆ ಬರದಂತೆ ಜಿಲ್ಲಾಡಳಿತ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.