ETV Bharat / state

8 ಜನರಲ್ಲಿ ಕೊರೊನಾ ಪತ್ತೆ.. ಕೋವಿಡ್​ ಸಂಖ್ಯೆ ಶೂನ್ಯಕ್ಕಿಳಿದಿದ್ದ ಹಾವೇರಿ ಜಿಲ್ಲೆಗೆ ಮತ್ತೆ ಶಾಕ್​ - Corona virus infection detected in Haveri

ಹಾವೇರಿ ಜಿಲ್ಲೆಯಲ್ಲಿ ಭಾನುವಾರ ಎಂಟು ಜನರಲ್ಲಿ ಸೋಂಕು ಪತ್ತೆಯಾಗಿದೆ. ಶಿಗ್ಗಾವಿ ತಾಲೂಕಿನಲ್ಲಿ ನಾಲ್ಕು ಪ್ರಕರಣಗಳು, ರಾಣೆಬೆನ್ನೂರು ತಾಲೂಕಿನಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರು ಹಾಗೂ ಹಾವೇರಿ ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ತಲಾ ಓರ್ವರಿಗೆ ಕೊರೊನಾ ತಗುಲಿದೆ.

Haveri infected by corona
ಜಿಲ್ಲಾಸ್ಪತ್ರೆ
author img

By

Published : Jan 9, 2022, 8:07 PM IST

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಎಂಟು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಡಿಸೆಂಬರ್ 29 ರಂದು ಓರ್ವ ಸೋಂಕಿತ ಪತ್ತೆಯಾಗಿದ್ದು, ಬಿಟ್ಟರೆ ಇದುವರೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೂನ್ಯವಾಗಿತ್ತು.

ಶಿಗ್ಗಾವಿ ತಾಲೂಕಿನಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ರಾಣೆಬೆನ್ನೂರು ತಾಲೂಕಿನಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 12 ಸಾವಿರ ಕೋವಿಡ್​ ಕೇಸ್ ಪತ್ತೆ: ಬೆಂಗಳೂರಲ್ಲೇ 9 ಸಾವಿರ ಪ್ರಕರಣ ದೃಢ!

ಹಾವೇರಿ ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ತಲಾ ಓರ್ವರಿಗೆ ಕೊರೊನಾ ತಗುಲಿದೆ. ಇವತ್ತು ಒಂದೇ ದಿನ ಎಂಟು ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಜಿಲ್ಲೆಯಲ್ಲಿ ಪ್ರಸ್ತುತ ಎಂಟು ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಹೆಚ್.ಎಸ್. ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.