ETV Bharat / state

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತೆ : ವಚನಾನಂದ ಶ್ರೀ

ಯಾವುದೇ ಸರ್ಕಾರವಿರಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಅದೇ ರೀತಿ ನಾವು ಏನು ದಾಖಲಾತಿ ನೀಡಬೇಕು ಅವುಗಳನ್ನು ಕೊಟ್ಟಿದ್ದೇವೆ. ನೂರಕ್ಕೆ ನೂರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುತ್ತದೆ ಎಂದು ಪಂಚಮಸಾಲಿಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

2a-reservation-for-panchmasali-community
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತೆ : ವಚನಾನಂದ ಶ್ರೀ
author img

By

Published : Nov 5, 2022, 10:19 PM IST

ಹಾವೇರಿ : ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕುಲಶಾಸ್ತ್ರ ಅಧ್ಯಯನದ ವರದಿ ಬಂದ ಮೇಲೆ ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಮಾತನಾಡುವುದು ತಪ್ಪಾಗುತ್ತದೆ ಎಂದು ಹರಿಹರ ಪಂಚಮಸಾಲಿಪೀಠದ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮಗೆ ಬೇಕಾಗಿರುವುದು ಮೀಸಲಾತಿ. ಅದನ್ನು ನೂರಕ್ಕೆ ನೂರರಷ್ಟು ಪಡೆದುಕೊಳ್ಳುತ್ತೇವೆ. ಈ ಬಗ್ಗೆ ಸಂದೇಹ ಬೇಡ ಎಂದು ತಿಳಿಸಿದರು. ಕೇಂದ್ರದಲ್ಲಿ ಒಬಿಸಿ ಮತ್ತು ರಾಜ್ಯದಲ್ಲಿ 2ಎ ಮೀಸಲಾತಿ ಎರಡು ಸಿಗಬೇಕು ಎಂದು ವಚನಾನಂದ ಸ್ವಾಮೀಜಿ ಒತ್ತಾಯಿಸಿದರು.

ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ : ಇದೇ ವೇಳೆ ಮೀಸಲಾತಿ ಹೋರಾಟದಲ್ಲಿ ಕೂಡಲ ಸಂಗಮ ಮತ್ತು ಹರಿಹರಪೀಠಗಳ ನಡುವಿನ ಭಿನ್ನಾಭಿಪ್ರಾಯವಿಲ್ಲ. ನಮ್ಮಲ್ಲಿ ಒಡಕಿದೆ ಎಂದು ನಿಮಗೆ ಅನ್ನಿಸಿದರೆ ಅವುಗಳ ಉದ್ದೇಶಗಳು ಒಂದೇ ಆಗಿವೆ. ನಮ್ಮ ಹೋರಾಟದ ವಿಧಾನಗಳು ಬೇರೆ ಬೇರೆಯಾಗಿರಬಹುದು ಉದ್ದೇಶಗಳು ಒಂದೇ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತೆ : ವಚನಾನಂದ ಶ್ರೀ

ಪ್ರಾಣ ಬಿಟ್ಟೇವು ಮೀಸಲಾತಿ ಬಿಡೆವು : ಯಾವುದೇ ಸರ್ಕಾರವಿರಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಈ ನಿಟ್ಟಿನಲ್ಲಿ ಸಮಾಜದ ಪ್ರತಿನಿಧಿಗಳ ಸರ್ಕಾರ ಒಳಗಿದ್ದು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ನಾವು ಏನು ದಾಖಲಾತಿ ನೀಡಬೇಕು ಅವುಗಳನ್ನು ಕೊಟ್ಟಿದ್ದೇವೆ.

ನೂರಕ್ಕೆ ನೂರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುತ್ತದೆ. ಮೀಸಲಾತಿ ಸಿಗುವವರೆಗೆ ನಾವು ಬಿಡುವುದಿಲ್ಲ. ಪ್ರಾಣ ಬಿಟ್ಟೇವು ಮೀಸಲಾತಿ ಬಿಡೆವು ಎನ್ನುವದನ್ನ ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಎಂದ ವಚನಾನಂದಶ್ರೀಗಳು ತಿಳಿಸಿದರು.

ಡಿಸೆಂಬರ್ 11 ರಂದು ಬೃಹತ್ ಸಮಾವೇಶ : ಸಮಾಜದ ಹೋರಾಟವನ್ನು ಸ್ವಂತಕ್ಕೆ ಬಳಿಸಿಕೊಳ್ಳುವ ಸಮುದಾಯದ ನಾಯಕರಿಗೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ಭಾವನೆಯಿಂದ ಕೆಲಸ ಮಾಡುವಂತೆ ಶ್ರೀಗಳು ತಿಳಿಸಿದರು. ನ.23 ರಿಂದ ಜನಜಾಗೃತಿಗಾಗಿ ಹಾನಗಲ್‌ ಪಟ್ಟಣದಿಂದ ಯಾತ್ರೆ ಆರಂಭಿಸುವುದಾಗಿ ವಚನಾನಂದಸ್ವಾಮಿಜಿ ತಿಳಿಸಿದರು.

ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾಂವಿ ಸೇರಿದಂತೆ ವಿವಿಧೆಡೆ ಗ್ರಾಮ ದರ್ಶನ ನಡೆಸಲಾಗುವುದು. ಬಳಿಕ ಡಿಸೆಂಬರ್ 11 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಕೇಂದ್ರದ ನಾಯಕರ ಜೊತೆ ಸಹ ಸಂಪರ್ಕದಲ್ಲಿದ್ದು ಅವರು ಸಹ ಮೀಸಲಾತಿ ನೀಡುವ ವಿಚಾರದಲ್ಲಿದ್ದಾರೆ. ಇದೆ ಸರ್ಕಾರದಲ್ಲಿ ನೂರಕ್ಕೆ ನೂರ ನಾವು ಮೀಸಲಾತಿ ಪಡೆಯುತ್ತಿವೆ ಎಂದು ವಚನಾನಂದಶ್ರೀಗಳು ತಿಳಿಸಿದರು.

ಇದನ್ನೂ ಓದಿ :ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಶೀಘ್ರ ನಿರ್ಧಾರ: ಸಿಎಂ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.