ETV Bharat / state

ಹಣಕಾಸಿನ ವಿಚಾರಕ್ಕೆ ಜೋಡಿ ಕೊಲೆ: 24 ಗಂಟೆಯಲ್ಲೇ ಆರೋಪಿಗಳು ಅಂದರ್ - ಹಾವೇರಿ ಕೊಲೆ

ಹಣಕಾಸಿನ ವಿಚಾರವಾಗಿ ಗಲಾಟೆ ನಡೆದು ಜೋಡಿ ಕೊಲೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.

2 Held for murdering  Couple murder in Haveri
ಹಣಕಾಸಿನ ವಿಚಾರಕ್ಕೆ ಜೋಡಿ ಕೊಲೆ
author img

By

Published : Mar 18, 2021, 5:05 PM IST

ಹಾವೇರಿ: ಇಲ್ಲಿನ ಯತ್ತಿನಹಳ್ಳಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಭೇದಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲಿ ಇಬ್ಬರು ಆರೋಫಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಯತ್ತಿನಹಳ್ಳಿಯ ಶಂಭುಲಿಂಗ ಮತ್ತು ಈತನ ಬಳಿ ಲಾರಿ ಚಾಲಕನಾಗಿದ್ದ ಮಂಜುನಾಥ ಎಂದು ಗುರುತಿಸಲಾಗಿದೆ. ಜೋಡಿ ಕೊಲೆ ಪ್ರಕರಣಕ್ಕೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಎಸ್​​​ಪಿ ಕೆ.ಜಿ. ದೇವರಾಜ್ ತಿಳಿಸಿದ್ದಾರೆ.

24 ಗಂಟೆಯಲ್ಲೇ ಆರೋಪಿಗಳು ಅಂದರ್

ಕೊಲೆಯಾದ ನಿಂಗಪ್ಪ, ಶಂಭುಲಿಂಗನ ಬಳಿ ಹಣ ಪಡೆದುಕೊಂಡಿದ್ದ. ಹಣ ಮರಳಿ ಕೇಳಲು ಹೋದರೆ ಶಂಭುಲಿಂಗನ ಮೇಲೆ ಹಲ್ಲೆ ಮಾಡುತ್ತಿದ್ದ, ಅಷ್ಟೇ ಅಲ್ಲದೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇದರಿಂದ ರೋಸಿಹೋಗಿದ್ದ ಶಂಭುಲಿಂಗ ಮಂಗಳವಾರ ನಿಂಗಪ್ಪನ ಕೊಲೆಗೆ ಸಂಚು ರೋಪಿಸಿದ್ದ. ಅದರಂತೆ ಮಂಗಳವಾರ ರಾತ್ರಿ ನಿಂಗಪ್ಪ ಮಲಗಿದ್ದ ಸ್ಥಳಕ್ಕೆ ಹೋಗಿ ಮಂಜುನಾಥ್ ಮತ್ತು ಶಂಭುಲಿಂಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ವೇಳೆ ಗಣೇಶ್ ಎಂಬಾತ ಕೊಲೆ ಮಾಡಿದ್ದನ್ನು ನೋಡಿ ಕಿರುಚಾಡಿದ್ದ. ಆತ ಬದುಕುಳಿದರೆ ಕೊಲೆ ರಹಸ್ಯ ಹೊರಬರಲಿದೆ ಎಂದು ಆತನನ್ನೂ ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ವ್ಯಕ್ತಿಯ ದರೋಡೆ ಮಾಡಿದ ಖದೀಮರು: ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.