ETV Bharat / state

14 ಮಂದಿಗೆ ಸೋಂಕು.. ಹಾವೇರಿಯಲ್ಲಿ ಓರ್ವ ಮಹಿಳೆ ಸಾವು

author img

By

Published : Jul 12, 2020, 8:36 PM IST

ಜುಲೈ 8ರಂದು ಮೃತಪಟ್ಟಿದ್ದ ರಾಣೇಬೆನ್ನೂರು ನಗರದ 42 ವರ್ಷದ ಮಹಿಳೆಯಲ್ಲಿ ನಿನ್ನೆ ಸೋಂಕು ದೃಢಪಟ್ಟ ವರದಿ ಬಂದಿದೆ. ಜ್ವರದಿಂದ ಬಳಲ್ತಿದ್ದ ಮಹಿಳೆಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆ ನೀಡಲಾಗಿತ್ತು..

haveri
ಹಾವೇರಿ

ಹಾವೇರಿ: ಜಿಲ್ಲೆಯಲ್ಲಿ ಇವತ್ತು 14 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಅದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರ ಕುರಿತು ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ

ಜುಲೈ 8ರಂದು ಮೃತಪಟ್ಟಿದ್ದ ರಾಣೇಬೆನ್ನೂರು ನಗರದ 42 ವರ್ಷದ ಮಹಿಳೆಯಲ್ಲಿ ನಿನ್ನೆ ಸೋಂಕು ದೃಢಪಟ್ಟ ವರದಿ ಬಂದಿದೆ. ಜ್ವರದಿಂದ ಬಳಲ್ತಿದ್ದ ಮಹಿಳೆಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ‌ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸೋ ವೇಳೆ ಮಾರ್ಗಮಧ್ಯೆ ಮಹಿಳೆ ಮೃತಪಟ್ಟಿದ್ದಳು.

ಅದೇ ದಿನ ಮೃತ ಮಹಿಳೆಯ ಸ್ವ್ಯಾಬ್ ಮಾದರಿಯನ್ನ ಲ್ಯಾಬ್​ಗೆ ಆರೋಗ್ಯ ಇಲಾಖೆ ಕಳುಹಿಸಿತ್ತು. ಬಳಿಕ ನಿನ್ನೆ ಮಹಿಳೆಯಲ್ಲಿ ಸೋಂಕು ದೃಢಪಟ್ಟಿರೋ ಮಾಹಿತಿ ಜಿಲ್ಲಾಡಳಿತ ನೀಡಿದೆ. ಹಾವೇರಿ ಮತ್ತು ಹಿರೇಕೆರೂರು ತಾಲೂಕಿನಲ್ಲಿ ತಲಾ ಐವರಿಗೆ, ಶಿಗ್ಗಾಂವಿ, ರಾಣೇಬೆನ್ನೂರು, ಹಾನಗಲ್ ಮತ್ತು ಬ್ಯಾಡಗಿ ತಾಲೂಕಿನಲ್ಲಿ ತಲಾ‌ ಒಬ್ಬರಿಗೆ ಇಂದು ಸೋಂಕು ದೃಢಪಟ್ಟಿದೆ. ಈ ಪ್ರಕರಣ ಸೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 302ಕ್ಕೆ ಏರಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಅಸಿಸ್ಟೆಂಟ್ ಸಬ್ ಇನ್ಸ್​ಪೆಕ್ಟರ್​ಗೆ ಸೋಂಕು ಕಾಣಿಸಿದೆ. ಜಮ್ಮು-ಕಾಶ್ಮೀರದಿಂದ ಬಂದಿದ್ದ ಸಿಆರ್​ಪಿಎಫ್ ಕಾನ್ಸ್​ಸ್ಟೇಬಲ್ ಒಬ್ಬರಲ್ಲಿ ಸೋಂಕು‌ ಪತ್ತೆಯಾಗಿದೆ. ಇವರು ಹಾವೇರಿ ತಾಲೂಕಿನ‌ ಹೊಸರಿತ್ತಿ ಗ್ರಾಮದ ನಿವಾಸಿ. ಬೆಂಗಳೂರಿನಿಂದ ಬಂದಿದ್ದ ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ‌ ಓರ್ವ ಹಾಗೂ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದ ನಿವಾಸಿಯೊಬ್ಬರಿಗೆ ಸೋಂಕು ಕಾಣಿಸಿದೆ. ಹಾವೇರಿ ನಗರದ ನಾಗೇಂದ್ರನಮಟ್ಟಿಯ 25 ವರ್ಷದ ಗರ್ಭಿಣಿಯಲ್ಲಿ ಸೋಂಕು ಕಾಣಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.