ETV Bharat / entertainment

ಪ್ರಶಾಂತ್​​ ನೀಲ್​ - ಜೂ.NTR ಸಿನಿಮಾ ಶೂಟಿಂಗ್​ ಯಾವಾಗ? ಇಲ್ಲಿದೆ ಅಪ್ಡೇಟ್ಸ್ - NTR31 - NTR31

''ದೇವರ'' ಸಿನಿಮಾ ಪ್ರಮೋಶನ್​ ವೇಳೆ ಜೂನಿಯರ್ ಎನ್‌ಟಿಆರ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

NTR31 Film Poster
ಪ್ರಶಾಂತ್​​ ನೀಲ್​​-ಜೂ.ಎನ್‌ಟಿಆರ್ ಸಿನಿಮಾ (Photo: Film Poster)
author img

By ETV Bharat Karnataka Team

Published : Sep 20, 2024, 7:50 PM IST

Updated : Sep 20, 2024, 7:55 PM IST

ಹೈದರಾಬಾದ್: ತೆಲುಗು ಸೂಪರ್‌ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಿತ್ರ ''ದೇವರ'' ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರಚಾರ ಜೋರಾಗೇ ಸಾಗಿದೆ. ಸಿನಿಮಾ ಪ್ರಮೋಶನ್​​ ವೇಳೆ ನಟ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ತಾತ್ಕಾಲಿಕವಾಗಿ ಎನ್​​​ಟಿಆರ್​​31 ಮತ್ತು ಎನ್​ಟಿಆರ್​ ನೀಲ್​ ಹೆಸರಿನಿಂದ ಉಲ್ಲೇಖಿಸಲಾಗುತ್ತಿದೆ.

ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದ್ದು, ಅಪ್​ಡೇಟ್ಸ್​​ಗಾಗಿ ಅಪಾರ ಸಂಖ್ಯೆಯ ಸಿನಿಪ್ರಿಯರು ಕಾತರರಾಗಿದ್ದಾರೆ. ಬರುವ ತಿಂಗಳು ಅಕ್ಟೋಬರ್ 21ರಂದು ಚಿತ್ರೀಕರಣ ಪ್ರಾರಂಭಿಸಲು ನೀಲ್ ಸಜ್ಜಾಗುತ್ತಿದ್ದಾರೆ ಎಂದು ಎನ್​ಟಿಆರ್​​ ಬಹಿರಂಗಪಡಿಸಿದರು. ನಿರ್ದೇಶಕರು ಚಿತ್ರದ ಇತರ ಪಾತ್ರವರ್ಗದೊಂದಿಗೆ ಚಿತ್ರೀಕರಣ ಪ್ರಾರಂಭಿಸುವ ನಿರೀಕ್ಷೆಯಿದ್ದು, ಜೂನಿಯರ್ ಎನ್‌ಟಿಆರ್ 2025ರ ಜನವರಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್, ಸಿನಿಮಾದ ಆರಂಭಿಕ ಘೋಷಣೆಯ ಸುಮಾರು ಎರಡು ವರ್ಷಗಳ ನಂತರ ಆಗಸ್ಟ್‌ನಲ್ಲಿ ಅಪ್ಡೇಟ್ ಹಂಚಿಕೊಂಡಿತು. ಚಿತ್ರ ತಯಾರಕರು ಕುತೂಹಲಕಾರಿ ಪೋಸ್ಟರ್ ಅನಾವರಣಗೊಳಿಸಿ ಸಿನಿಮಾ ರಿಲೀಸ್​ ಡೇಟ್​ ಅನೌನ್ಸ್ ಮಾಡಿದ್ರು. ಎನ್​ಟಿಆರ್​​ನೀಲ್ ಜನವರಿ 9, 2026ರಂದು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲಕಾರಿ ಕ್ಯಾಪ್ಷನ್​ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: 'ದೊಡ್ಮನೆಗಳ ದೊಡ್ಡತನ'ವೆಂದ ನೆಟ್ಟಿಗರು - Aaradhya Touches Shivrajkumar Feet

ಸೆಪ್ಟೆಂಬರ್ 10 ರಂದು ಜೂನಿಯರ್ ಎನ್‌ಟಿಆರ್ ಅವರು ನಿರ್ದೇಶಕರುಗಳಾದ ಅಯಾನ್ ಮುಖರ್ಜಿ, ಕೊರಟಾಲ ಶಿವ ಮತ್ತು ಪ್ರಶಾಂತ್ ನೀಲ್ ಅವರೊಂದಿಗಿನ ಗ್ರೂಪ್​​ ಫೋಟೋ ಹಂಚಿಕೊಂಡಿದ್ದರು. ಈ ಮೂಲಕ ಇವರುಗಳೊಂದಿಗೆ ನಡೆಯುತ್ತಿರುವ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದರು. ಈ ಪೋಸ್ಟ್ ಅವರ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಮಗು ಯಾರನ್ನು ಹೋಲುತ್ತದೆ? ದೀಪಿಕಾ ರಣ್​​​ವೀರ್​​ ಬಾಲ್ಯದ ಫೋಟೋಗಳು ವೈರಲ್​​​ - Deepika Ranveer

ಪ್ರಸ್ತುತ, ಜೂನಿಯರ್ ಎನ್​​ಟಿಆರ್​ ಅವರು ಕೊರಟಾಲ ಶಿವ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1'ರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸೆಪ್ಟೆಂಬರ್ 27 ರಂದು ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ. ಈ ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಸೈಫ್ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2022ರಲ್ಲಿ ಬಂದ ಆರ್​ಆರ್​ಅರ್​​ ವಿಶ್ವಮಟ್ಟದಲ್ಲಿ ಗಮನ ಸೆಳೆದು, ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಆರ್​ಆರ್​ಆರ್​ ಬಳಿಕ ಬಿಡುಗಡೆ ಆಗುತ್ತಿರುವ ನಟನ ಮೊದಲ ಸಿನಿಮಾವಾದ ಹಿನ್ನೆಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

Last Updated : Sep 20, 2024, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.