ETV Bharat / state

ಲಾಕ್​ಡೌನ್​​ ನಡುವೆ ರಾಣೆಬೆನ್ನೂರು ತಾಲೂಕಿನಲ್ಲಿ ಶೇ.100 ರಷ್ಟು ನರೇಗಾ ಕಾಮಗಾರಿ ಯಶಸ್ವಿ

ಲಾಕ್​ಡೌನ್​ ಸಮಯದಲ್ಲಿ ಕೆಲಸವಿಲ್ಲದಿದ್ದ ಜನಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಎರೇಹುಳ ಗೊಬ್ಬರ ಘಟಕದಂತಹ ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಉದ್ಯೋಗ ಬಯಸುವ ಕೂಲಿಕಾರರಿಗೆ ಪ್ರತಿ ದಿನ ರೂ.275 ನೀಡಲಾಗಿದ್ದು, ಈ ಸಮಯದಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಕಾರ್ಮಿಕರು.

author img

By

Published : May 28, 2020, 7:13 PM IST

100% Narega works success in Ranebennur  amid  Lockdown,
ನರೇಗಾ ಕಾಮಗಾರಿ

ರಾಣೆಬೆನ್ನೂರು: ಲಾಕ್​​ಡೌನ್​​​​ ನಡುವೆ ಗ್ರಾಮೀಣ ಜನರಿಗೆ ನರೇಗಾದಡಿ ಕೆಲಸ ನೀಡುವ ಮೂಲಕ ತಾಲೂಕಿನಲ್ಲಿ ಶೇ.100ರಷ್ಟು ಕಾಮಗಾರಿಗಳನ್ನು ಯಶಸ್ವಿಗೊಳಿಸಲಾಗಿದೆ.

ತಾಲೂಕಿನ ಸುಮಾರು 40 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತಾಲೂಕು ಪಂಚಾಯತ್​ ವರದಿಯ ಪ್ರಕಾರ, 2020-21 ನೇ ಸಾಲಿನಲ್ಲಿ ಸುಮಾರು 7,69,430 ಮಾನವ ದಿನಗಳ ಗುರಿಯನ್ನು ಹೊಂದಲಾಗಿತ್ತು. ಕಳೆದ ಎರಡು ತಿಂಗಳಲ್ಲಿ 78,662 ಮಾನವ ದಿನಗಳ ಬಳಕೆ ಮಾಡಿಕೊಂಡು ಈ ಸಾಧನೆ ಮಾಡಲಾಗಿದೆ.

ಶ್ಯಾಮಸುಂದರ ಕಾಂಬಳೆ

ಸದ್ಯ ತಾಲೂಕಿನಾದ್ಯಂತ ನರೇಗಾ ಕಾಮಗಾರಿಗಳು ನಡೆಯುತ್ತಿದ್ದು, 2,684 ಕೂಲಿಕಾರರು ಪ್ರತಿ ನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ ತಾಲೂಕು ಪಂಚಾಯತ್​ ಈಗಾಗಲೇ 2,290 ಕಾಮಗಾರಿಗೆ ಎನ್.ಎಂ.ಆರ್ ಮೂಲಕ ಕೂಲಿಕಾರರಿಗೆ ದಿನಗೂಲಿ ನೀಡಲಾಗಿದೆ ಎನ್ನುತ್ತಾರೆ ತಾಲೂಕು ಪಂಚಾಯತ್​ ನಿರ್ವಾಹಣಾಧಿಕಾರಿ ಶ್ಯಾಮಸುಂದರ ಕಾಂಬಳೆ.

ಲಾಕ್​ಡೌನ್​ ಸಮಯದಲ್ಲಿ ಕೆಲಸವಿಲ್ಲದಿದ್ದ ಜನಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬದು ನಿರ್ಮಾಣ, ಕೃಷಿಹೊಂಡ, ಎರೇಹುಳ ಗೊಬ್ಬರ ಘಟಕದಂತಹ ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಉದ್ಯೋಗ ಬಯಸುವ ಕೂಲಿಕಾರರಿಗೆ ನಿತ್ಯ ರೂ.275 ನೀಡಲಾಗಿದ್ದು, ಈ ಸಮಯದಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಕಾರ್ಮಿಕರು.

ಸದ್ಯ ಈ ಕಾಮಗಾರಿ ತಾಲೂಕಿನ ಎಲ್ಲ ಪಂಚಾಯಿತಿಯಲ್ಲಿ ನಡೆಯುತ್ತಿದ್ದು, ಕೆಲಸ ಹುಡುಕಿ ಬಂದಂತಹ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಲಾಗುತ್ತಿದ್ದು, ತಾಲೂಕಿನಲ್ಲಿ ಕೇವಲ ಎರಡು ತಿಂಗಳಲ್ಲಿ ಶೇ.100 ರಷ್ಟು ಸಾಧನೆ ಮಾಡಿರುವುದು ವಿಶೇಷವಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.