ETV Bharat / state

ಮೇಲಾಧಿಕಾರಿಗಳ ಕಿರುಕುಳ ಆರೋಪ: ಯುವಕ ಆತ್ಮಹತ್ಯೆ

ಕಂಪನಿಯ ಅಕೌಂಟ್‍ನಲ್ಲಿ60 ಸಾವಿರ ಕಳವು ಮಾಡಿದ್ದೀಯ. ಅದನ್ನು ಕೊಟ್ಟರೆ ಸರಿ, ಇಲ್ಲವಾದಲ್ಲಿ ದೂರು ದಾಖಲಿಸಲಾಗುವುದು ಎಂದು ಪ್ರಮೋದ್‍ ಎಂಬಾತನಿಗೆ ಕಿರಣ್ ಸೇರಿ ಮೂವರು ಪೀಡಿಸುತ್ತಿದ್ದರಂತೆ. ಇದರಿಂದ ಮನನೊಂದು ಪ್ರಮೋದ್ ವಿಷ ಸೇವಿಸಿದ್ದ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಯುವಕ ಆತ್ಮಹತ್ಯೆ
author img

By

Published : Apr 23, 2019, 9:57 PM IST

ಹಾಸನ: ಮಾನಸಿಕ ಕಿರುಕುಳ ಹಿನ್ನೆಲೆಯಲ್ಲಿ ನನ್ನ ಮಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ನ್ಯಾಯ ಒದಗಿಸಬೇಕೆಂದು ನಗರದ ವಿಶಾಲ್ ಮಾರ್ಟ್ ವಿರುದ್ಧ ಮೃತನ ತಂದೆ ರಮೇಶ್ ನಗರ ಠಾಣೆಗೆ ದೂರು ನೀಡಿದ್ದಾರೆ.

ನಗರದ ಉದಯಗಿರಿ ನಿವಾಸಿಯಾದ ರಮೇಶ್ ಹಾಗೂ ಯಶೋಧ ಎಂಬುವರ ಒಬ್ಬನೇ ಮಗನಾದ ಪ್ರಮೋದ್ (19) ಮೃತ ಯುವಕ. ಕಳೆದ ಹಲವು ತಿಂಗಳಿಂದ ಖಾಸಗಿ ಕಂಪನಿ ವಿಶಾಲ್ ಮಾರ್ಟ್‍ನಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್, ನವೀನ್ ಹಾಗೂ ನಾಝೀರ್ ಎಂಬುವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಾಯಿ ಯಶೋಧ ದೂರಿದ್ದಾರೆ.

ಪ್ರಮೋದ್ ಆಸ್ಪತ್ರೆಯಲ್ಲಿ ಮಾತನಾಡಿರುವ ವಿಡಿಯೋ

ಕೆಲ ದಿನಗಳ ಹಿಂದೆ ಕಂಪನಿಯ ಅಕೌಂಟ್‍ನಲ್ಲಿ ನಾಲ್ಕು ಲಕ್ಷ ಹಣದಲ್ಲಿ ಅರವತ್ತು ಸಾವಿರ ಕಳವು ಮಾಡಿದ್ದೀಯ. ಅದನ್ನು ಕೊಟ್ಟರೆ ಸರಿ, ಇಲ್ಲವಾದಲ್ಲಿ ಠಾಣೆಯಲ್ಲಿ ನಿನ್ನ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಪ್ರಮೋದ್‍ಗೆ ಕಿರಣ್ ಸೇರಿ ಮೂವರು ಪೀಡಿಸುತ್ತಿದ್ದರಂತೆ.

ಇದರಿಂದ ಮನನೊಂದು ಪ್ರಮೋದ್ ಏಪ್ರಿಲ್ 21 ರಂದು ವಿಶಾಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್‌ 22ರ ರಾತ್ರಿ ಪ್ರಮೋದ್ ಮೃತಪಟ್ಟಿದ್ದು, ಸೂಕ್ತ ನ್ಯಾಯ ಒದಗಿಸಬೇಕೆಂದು ಹಾಗೂ ಘಟನೆಗೆ ಕಾರಣರಾದವರನ್ನು ಬಂಧಿಸಬೇಕೆಂದು ತಂದೆ ರಮೇಶ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಪ್ರಮೋದ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಆರೋಪಿಗಳ ಕುರಿತು ನೀಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

Intro:ಅಧಿಕಾರಿಗಳ ಕಿರುಕುಳ: ಯುವಕ ಆತ್ಮಹತ್ಯೆ

ಹಾಸನ: ಮಾನಸಿಕ ಕಿರುಕುಳ ಹಿನ್ನೆಲೆಯಲ್ಲಿ ನನ್ನ
ಮಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು ನ್ಯಾಯ ಒದಗಿಸಬೇಕೆಂದು ನಗರದ
ವಿಶಾಲ್ ಮಾರ್ಟ್ ವಿರುದ್ಧ ಮೃತನ ತಂದೆ ರಮೇಶ್ ನಗರ ಠಾಣೆಗೆ ದೂರು ನೀಡಿದ್ದಾರೆ.
ನಗರದ ಉದಯಗಿರಿ ವಾಸಿಯಾದ ರಮೇಶ್ ಹಾಗೂ ಯಶೋಧ ಅವರ ಒಬ್ಬನೆ
ಮಗನಾದ ಪ್ರಮೋದ್ (19) ಮೃತ ಯುವಕ.
ಕಳೆದ ಹಲವು ತಿಂಗಳಿಂದ ಖಾಸಗಿ ಕಂಪನಿ
ವಿಶಾಲ್ ಮಾರ್ಟ್‍ನಲ್ಲಿ ಕ್ಯಾಷಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತನಿಗೆ ಕಂಪನಿಯಲ್ಲಿ
ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್, ನವೀನ್, ನಾಝೀರ್ ಎಂಬುವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಾಯಿ
ಯಶೋಧ ದೂರಿದ್ದಾರೆ.
ಕೆಲದಿನಗಳ ಹಿಂದೆ ಕಂಪನಿಯ ಅಕೌಂಟ್‍ನಲ್ಲಿ ನಾಲ್ಕು ಲಕ್ಷ ಹಣದಲ್ಲಿ ಅರವತ್ತು ಸಾವಿರ
ಕಳವು ಮಾಡಿದ್ದೀಯ ಅದನ್ನು ಕೊಟ್ಟರೆ ಸರಿ ಇಲ್ಲವಾದಲ್ಲಿ ಠಾಣೆಯಲ್ಲಿ ನಿನ್ನ ವಿರುದ್ಧ
ದೂರು ದಾಖಲಿಸಲಾಗುವುದು
ಎಂದು ಪ್ರಮೋದ್‍ಗೆ ಕಿರಣ್ ಪೀಡುಸುತ್ತಿದ್ದರು. ಇದರಿಂದ ಮನನೊಂದು ಪ್ರಮೋದ್
ಏಪ್ರಿಲ್ 21 ರಂದು ವಿಶಾಲ್ ಕಂಪನಿ
ಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ವಿಷ ಸೇವಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್‌
22 ರ ರಾತ್ರಿ ಪ್ರಮೋದ್ ಮೃತ ಪಟ್ಟಿದ್ದು
ಸೂಕ್ತ ನ್ಯಾಯ ಒದಗಿಸಬೇಕೆಂದು ಹಾಗೂ ಘಟನೆಗೆ ಕಾರಣರಾದವರನ್ನು ಬಂದಿಸ
ಬೇಕೆಂದು ತಂದೆ ರಮೇಶ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ‌.
Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.