ಹಾಸನ: ಇಡೀ ಭಾರತವೇ ಕೊರೊನಾ ಪ್ರಕರಣದಿಂದ ಲಾಕ್ಔಟ್ ಆಗಿದೆ. ಆದರೆ ಹಾಸನದ ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ ಮಾತ್ರ ಲಾಕ್ಡೌನ್ ಮಾಡದೆ ಕಾರ್ಮಿಕರಿಂದ ನಿತ್ಯ ದುಡಿಸಿಕೊಳ್ಳುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಸ್ ತಯಾರಿಕ ಘಟಕ ಅಂದರೆ ಪ್ರಾದೇಶಿಕ ಕಾರ್ಯಾಗಾರ ಕಳೆದ ಭಾನುವಾರದಿಂದಲೂ ಕೂಡ ಕಾರ್ಮಿಕರಿಗೆ ರಜೆ ಘೋಷಣೆ ಮಾಡದೆ ದುಡಿಸಿಕೊಳ್ಳುತ್ತಿದೆ.
ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ ಈ ಬಗ್ಗೆ ವರದಿ ಮಾಡಲು ತೆರಳಿದ ಈಟಿವಿ ಭಾರತ ವಾಹಿನಿಯಿಂದ ಹಿಂಬಾಲಿಸಿಕೊಂಡು ಬಂದ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸರ್ಕಾರದ ಆದೇಶವನ್ನು ಪಾಲಿಸದೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದ ಅಧಿಕಾರಿ ವರ್ಗದವರ ತರಾಟೆಗೆ ತೆಗೆದುಕೊಂಡಿದ್ದಾರೆ.ಅಲ್ಲದೇ ಮಹಾಮಾರಿ ಕೊರೊನಾದಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು ನೀವು ಮಾತ್ರ ಕೇವಲ ಸಂಸ್ಥೆಯ ಲಾಭಕ್ಕಾಗಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿ ರಜೆ ನೀಡಬೇಕೆಂದು ಆಗ್ರಹಿಸಿ ಎಚ್ಚರಿಸಿದರು.
ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ ಸಂಸ್ಥೆಗೆ ಮೂವತ್ತರಿಂದ ನಲವತ್ತು ಲಕ್ಷ ನಷ್ಟ ...ಆದರೆ ಸಂಸ್ಥೆಯ ಮೇಲ್ವಿಚಾರಕರು ಹೇಳುವ ಮಾತೇ ಬೇರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ ಎಂಥವರಿಗೂ ಕೂಡ ಸಿಟ್ಟು ಬಾರದೇ ಇರದು. ಮಾರ್ಚ್ 31ರೊಳಗೆ ಬಿಎಸ್4 ಬಸ್ಸುಗಳನ್ನು ನೋಂದಣಿ ಮಾಡಿಸದಿದ್ದರೆ ಅವುಗಳನ್ನು ಗುಜರಿ ಅಂಗಡಿಗೆ ಹಾಕಬೇಕಾಗುತ್ತದೆ. ಇದರಿಂದ ಸಂಸ್ಥೆಗೆ ಮೂವತ್ತರಿಂದ ನಲವತ್ತು ಲಕ್ಷ ನಷ್ಟ ಉಂಟಾಗುತ್ತದೆ. ಹಾಗಾಗಿ ಉಳಿದಿರುವ ಎರಡು-ಮೂರು ಬಸ್ಗಳನ್ನು ತಯಾರಿಸಿ ನೋಂದಣಿ ಮಾಡಬೇಕಾಗಿರುವುದರಿಂದ ನಾವು ಈ ಕ್ರಮವನ್ನು ಕೈಗೊಂಡೆವು ಎಂಬ ಉಡಾಫೆ ಉತ್ತರ ನೀಡುತ್ತಾರೆ.