ETV Bharat / state

ಪ್ರೀತಿಸಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ - ಮಣಿಕಂಠ ಬಿನ್ ಮಲ್ಲೇಶ

ಪ್ರೀತಿ ಮಾಡಲು ನಿರಾಕರಿಸಿದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿದ ಯುವಕ ಚಾಕುವಿನಿಂದ ಇರಿದಿರುವ ಪ್ರಕರಣ ಹಾಸನ‌ ಜಿಲ್ಲೆ ಹೊಳೆನರಸೀಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಪ್ರೀತಿ ಮಾಡಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ
author img

By

Published : Oct 11, 2019, 5:02 PM IST

ಹಾಸನ‌ : ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದಿರುವ ಪ್ರಕರಣ ಹೊಳೆನರಸೀಪುರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

Manikanta
ಪ್ರೀತಿ ಮಾಡಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ

ಪಟ್ಟಣದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ರಮ್ಯ (18, ಹೆಸರು ಬದಲಿಸಲಾಗಿದೆ) ‌ಚಾಕುವಿನಿಂದ ಇರಿತಕ್ಕೊಳಗಾದ ಯುವತಿ.

ಪಡುವಲ ಹಿಪ್ಪೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಎ ಓದುತ್ತಿರುವ ಅರಕಲಗೂಡು ತಾಲೂಕು ಕಸಬಾ ಹೋಬಳಿಯ ನೆಲಬಳ್ಳಿ ಗ್ರಾಮದ ಮಣಿಕಂಠ ಬಿನ್ ಮಲ್ಲೇಶ (19) ಯುವತಿಗೆ ಚಾಕುವಿನಿಂದ ಇರಿದ ಆರೋಪಿ.

ಈತ ಕಳೆದ ಕೆಲ ದಿನಗಳಿಂದ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು, ಇಂದು ಕಾಲೇಜು ಮುಗಿಸಿ ಮನೆಗೆ ಹೊರಟಿದ್ದ ವೇಳೆ ಆಕೆಯನ್ನು ಹೊಳೆನರಸೀಪುರ ಬೈಪಾಸ್ ನಲ್ಲಿ ಅಡ್ಡ ಗಟ್ಟಿ ಚಾಕುವಿನಿಂದ ಇರಿದಿದ್ದಾನೆ.

ಇದರಿಂದ ಯುವತಿಯ ಕುತ್ತಿಗೆ, ಕೈಗೆ ತೀವ್ರವಾಗಿ ಗಾಯವಾಗಿದ್ದು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ದಾರಿ ಹೋಕರು ಆರೋಪಿ ಮಣಿಕಂಠನನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

Intro:ಹಾಸನ‌ : ಪ್ರೀತಿ ಮಾಡಲು ನಿರಾಕರಿಸಿದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದಿರುವ ಪ್ರಕರಣ ಹೊಳೆನರಸೀಪುರದಲ್ಲಿ ಶುಕ್ರವಾರ ಮದ್ಯಾಹ್ನ ನಡೆದಿದೆ.
ಪಟ್ಟಣದಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿನಿ ಮೇಘನಾ (18) ‌ಚಾಕುವಿನಿಂದ ಇರಿತಕ್ಕೆ ಒಳಗಾದ ಯುವತಿಯಾಗಿದ್ದು ..
ಪಡುವಲ ಹಿಪ್ಪೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಎ ಓದುತ್ತಿರುವ
ಅರಕಲಗೂಡು ತಾಲೂಕು ಕಸಬಾ ಹೋಬಳಿಯ ನೆಲಬಳ್ಳಿ ಗ್ರಾಮದ ಮಣಿಕಂಠ ಬಿನ್ ಮಲ್ಲೇಶ 19 ವರ್ಷ ಇತ ಕಳೆದ ಕೆಲ ದಿನಗಳಿಂದ ಮೇಘನಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದು ಇಂದು ಕಾಲೇಜು ಮುಗಿಸಿ ಮನೆಗೆ ಹೊರಟಿದ್ದ ಮೇಘನಾಳನ್ನು‌ ಹೊಳೆನರಸೀಪುರ ಬೈಪಾಸ್ ನಲ್ಲಿ ಅಡ್ಡ ಗಟ್ಟಿ ಚಾಕುವಿನಿಂದ ಇರಿದಿದ್ದಾನೆ.
ಇದರಿಂದ ಮೇಘನಾಳ‌ ಕುತ್ತಿಗೆ, ಕೈಗೆ ತೀವ್ರ ಪೆಟ್ಟಾಗಿದ್ದು ಆಕೆಯನ್ನು ಹೊಳೆನರಸೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವೇಳೆ ದಾರಿ ಹೋಕರು ಆರೋಪಿ ಮಣಿಕಂಠನನ್ನು ಹಿಡಿದು ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ್ದಾರೆ.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ,ಹಾಸನ.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.