ETV Bharat / state

ಮಳೆ ಕೊರತೆಯಿಂದ ಬರಿದಾದ ಹೇಮಾವತಿ ಒಡಲು: ಆತಂಕದಲ್ಲಿ ಹಾಸನ ಜನತೆ

ಮೇಲಿಂದ ಮೇಲೆ ಆವರಿಸುತ್ತಿರುವ ಬರಗಾಲ ನಾಡಿನ ಜನರನ್ನು ಚಿಂತೆಗೆ ತಳ್ಳಿದ್ದು ಸುಳ್ಳಲ್ಲ. ಭೀಕರ ಬಲಗಾಲದಿಂದ ಜಲಾಶಯದ ನೀರಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಗುಟುಕು ನೀರಿಗೂ ಪ್ರಾಣಿ-ಪಕ್ಷಿಗಳು, ಜಾನುವಾರುಗಳು, ಜಲಚರಗಳು ಅಷ್ಟೇ ಅಲ್ಲದೆ ಜನರು ಕೂಡ ಪರಿತಪಿಸುತ್ತಿದ್ದಾರೆ.

ಬರದ ಭೀಕರತೆಗೆ ಬರಿದಾಗುತ್ತಿರುವ ಹೇಮಾವತಿ ಒಡಲು
author img

By

Published : May 3, 2019, 1:18 PM IST

Updated : May 3, 2019, 1:46 PM IST

ಹಾಸನ: ಬರದ ಭೀಕರತೆ ಎಷ್ಟಿದೆ ಅಂತ ತಿಳಿಯಲು ಈ ದೃಶ್ಯಗಳನ್ನ ನೋಡಿದ್ರೆ ಸಾಕು..! ಸರಿಯಾಗಿ ಮಳೆಯಾಗದ ಹಿನ್ನೆಲೆ ಜಿಲ್ಲೆಯ ಜೀವನದಿಯ ಒಡಲು ಕೂಡ ಬರಿದಾಗುತ್ತಿದೆ. ವರುಣ ಕೈ ಕೊಟ್ಟಿದ್ದರಿಂದ ಜಿಲ್ಲೆಯ ರೈತಾಪಿ ವರ್ಗ ಕೂಡ ಚಿಂತೆಗೀಡಾಗಿದೆ. ಇನ್ನು ಜಲಾಶಯದ ನೀರಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಿಲ್ಲೆಯ ಜನರು ನೋವು ತೋಡಿಕೊಳ್ಳಲಾಂಭಿಸಿದ್ದಾರೆ.

ಕಾವೇರಿಯ ಉಪ ನದಿಗಳಲ್ಲಿ ಒಂದಾದ ಹೇಮಾವತಿಯ ಒಡಲು ಇದೀಗ ಬರಿದಾಗುತ್ತಾ ಹೋಗುತ್ತಿದೆ. ಜಾವಳಿ ಎಂಬ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಹುಟ್ಟುವ ಈ ನದಿ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹರಿದು ಕೆಆರ್​ಎಸ್​ ಹಿನ್ನೀರಿನ ಕಾವೇರಿ ನದಿಯನ್ನು ಸೇರುತ್ತೆ. ಸುಮಾರು 245 ಕಿ.ಮೀ. ಉದ್ದ ಹರಿಯುವ ಈ ನದಿಗೆ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಅಡ್ಡವಾಗಿ ಅಣೆಕಟ್ಟೆಯೊಂದನ್ನು ಕಟ್ಟಿದ್ದು, ಇದೀಗ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯಲಾಂಭಿಸಿದೆ ಅನ್ನೋದು ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ.

ನಮಗೇ ಇಲ್ಲ; ಇನ್ನು ನಿಮಗೆಲ್ಲಿ?

ಅಣೆಕಟ್ಟು ನಿರ್ಮಾಣದ ಬಳಿಕ ಜಿಲ್ಲೆಗೆ ನಾಲ್ಕು ಬಾರಿ ಜಲಕ್ಷಾಮ ಎದುರಾಗಿದೆ. 1987, 2003, 2005, ಬಿಟ್ಟರೆ ಈ ಬಾರಿ ಕೂಡ ಜಲಾಶಯಕ್ಕೆ ಭೀಕರ ಬರ ತಟ್ಟಿದೆ. ಜಲಾಶಯಕ್ಕೆ ಇಷ್ಟೊತ್ತಿಗಾಗಲೇ 5.8 ಟಿಎಂಸಿ ನೀರು ಸಂಗ್ರಹಣೆಯಾಗಬೇಕಾಗಿತ್ತು. ಆದ್ರೆ ಈ ಬಾರಿ ಕೇವಲ ಜಲಾಶಯಕ್ಕೆ 1.5 ಟಿಎಂಸಿ ನೀರು ಬಂದಿದ್ದು, ಡೆಡ್ ಸ್ಟೋರೆಜ್​​ ಸೇರಿ ಜಲಾಶಯದಲ್ಲಿ 5.67 ಟಿಎಂಸಿ ನೀರಿದೆ. ಜಲಾಶಯದಲ್ಲಿ 6 ಕ್ರೆಸ್ಟ್ ಗೇಟ್​​​ಗಳಿದ್ದು ಅವುಗಳಿಗೂ ನಿಲುಕದಂತೆ ನೀರು ಕೆಳಗೆ ಇಳಿದು ಹೋಗಿದೆ. ಹೀಗಾಗಿ ನದಿಪಾತ್ರವನ್ನ ನಂಬಿರುವ ರೈತರ ಪಾಡು ಹೇಳತೀರದಾಗಿದೆ. ಇಡೀ ಹಾಸನವೇ ಇಂದು ಕುಡಿಯುವ ನೀರಿಗೆ ಪರಿತಪಿಸುತ್ತಿದೆ. ಇನ್ನು ತಮಿಳುನಾಡಿಗೆ ಬಿಡುವುದಾದರೂ ಹೇಗೆ ಹೇಳಿ ಎಂದು ಪ್ರಶ್ನಿಸುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್.

ನೀರುಣಿಸುವ ಹೇಮಾವತಿ:

ಹೇಮಾವತಿಯ ಜಲಾಶಯವನ್ನ ಕಟ್ಟಿ ನಾಲ್ಕೂವರೆ ದಶಕಗಳು ಕಳೆದವು. ಈ ಹಿಂದೆ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದರಿಂದ 37.103 ಸಾಮಾರ್ಥ್ಯದ ನೀರು ಸಂಗ್ರಹ ಮಾಡೋ ಹೇಮಾವತಿ ಜಲಾಶಯ ಲೋಕಾರ್ಪಣೆಯಾಗಿದ್ದು ಇದೀಗ ಇತಿಹಾಸ. ಈ ಹೇಮಾವತಿ ಜಲಾಶಯ ಒಟ್ಟು 6.55 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ. ಇನ್ನು ಹಾಸನ ನಗರಕ್ಕೆ ಪ್ರತಿ ವರ್ಷ ಕುಡಿಯುವ ನೀರಿಗಾಗಿ 4 ಟಿಎಂಸಿ ನೀರು ಬೇಕಾಗುತ್ತದೆ. ಇಷ್ಟೇ ಅಲ್ಲದೇ ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕೂಡ ಕುಡಿಯುವ ನೀರಿಗಾಗಿ ಈ ಜಲಾಶಯವನ್ನೇ ನಂಬಿವೆ.

ಬರದ ಭೀಕರತೆಗೆ ಬರಿದಾಗುತ್ತಿರುವ ಹೇಮಾವತಿ ಒಡಲು

1987, 2001, 2002, 2003, 2004, 2005, 2016 ಹಾಗೂ 2017 ಸೇರಿದಂತೆ ಈ ಬಾರಿಯೂ ಜಲಾಶಯ ತುಂಬದೇ ಖಾಲಿಯಾಗಿದೆ. ಒಳ ಹರಿವು ಕಡಿಮೆಯಾದಂತೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಜಲಾಶಯದಿಂದ ಸರಬರಾಜಾಗುವ ಕುಡಿಯುವ ನೀರನ್ನು ನಂಬಿರುವ ಪಟ್ಟಣ ಮತ್ತು ನಗರ ಪ್ರದೇಶಗಳ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ವರ್ಷಗಳಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಸಕಾಲಕ್ಕೆ ನಾಲೆಗಳಲ್ಲಿ ನೀರು ಬರದೇ, ಬೆಳೆ ಬೆಳಲಾಗದೇ ಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ.

ಇನ್ನು ಜಿಲ್ಲೆಯಲ್ಲಿ ಗುಟುಕು ನೀರಿಗೂ ಪ್ರಾಣಿ-ಪಕ್ಷಿಗಳು, ಜಾನುವಾರುಗಳು, ಜಲಚರಗಳು ಅಷ್ಟೇ ಅಲ್ಲದೇ ಜಿಲ್ಲೆಯ ಜನರು ಕೂಡ ಪರಿತಪಿಸುತ್ತಿದ್ದಾರೆ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ ಸೇರಿದಂತೆ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್​ ಮೂಲಕ ನೀರನ್ನ ಪೂರೈಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಸದ್ಯ ವರುಣ ಅಲ್ಪ ಮಳೆಯಾಗಿದ್ದರಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಶ್ರೀನಿವಾಸ್.

ಸಕಾಲಕ್ಕೆ ಮಳೆ ಬರದೇ ಸಮಸ್ಯೆ ಆದ್ರೆ ಈ ಎಲ್ಲಾ ಯೋಜನೆಗಳಗೂ ಸದ್ಯದ ನೀರಿನ ಲಭ್ಯತೆ ಆಧಾರಿಸಿ ಸಮ ಪ್ರಮಾಣದಲ್ಲಿ ಸರಾಸರಿ ಅಧಾರದಲ್ಲಿ ನೀರು ಹರಿಸುತ್ತಾರೆ. ನಾಲೆಗಳ ಮೂಲಕ ನೀರು ಹರಿಯುವಾಗ ಬಲಾಡ್ಯ ರೈತರಷ್ಟೇ ಅಲ್ಲದೇ ಸಾಮಾನ್ಯ ರೈತಾಪಿ ವರ್ಗದವರು ನಾಲೆಗಳಿಗೆ ಪಂಪ್​ ಸೆಟ್ ಹಾಕಿ ತಮಗೆ ಬೇಕಾದಷ್ಟು ನೀರು ಕದಿಯುತ್ತಾರೆ. ಇವರಲ್ಲಿ ರಾಜಕೀಯ ಪಕ್ಷಗಳ ಪುಡಾರಿಗಳೇ ಹೆಚ್ಚು ಎನ್ನಲಾಗುತ್ತಿದೆ.

ಅಣೆಕಟ್ಟೆಯಲ್ಲಿ ಈಗಿರುವ ನೀರಿನ ಪ್ರಮಾಣ 5.67ಟಿಎಂಸಿ. ಇದರಲ್ಲಿ ಬಳಕೆಗೆ ಸಿಗುವುದು ಕೇವಲ 3.5 ಟಿಎಂಸಿ ನೀರು ಮಾತ್ರ. ಈ ಜಲಾಶಯ ತುಂಬಿದ್ರೆ ಹಾಸನ, ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳ ಹಲವು ತಾಲೂಕುಗಳಿಗೆ ರೈತರು ಬೆಳೆದಿರುವ ಭತ್ತ, ಕಬ್ಬು, ಜೋಳ ಇತ್ಯಾದಿ ಬೆಳೆಗಳಿಗೆ ನೀರು ಕೊಡಬೇಕು. ಅಲ್ಲದೆ ನದಿ ಪಾತ್ರಕ್ಕೂ ನೀರು ಬಿಡಬೇಕು. ಇದರ ಜೊತೆಗೆ ಹಲವು ನಗರಗಳಿಗೆ ಕುಡಿಯುವ ನೀರು ಸಹ ಕೊಡಬೇಕು. ಹೇಮಾವತಿ ಜಲಾಶಯ ಪ್ರದೇಶದಲ್ಲಿ ಈ ಸಲ ಸಕಾಲಕ್ಕೆ ಮಳೆ ಪ್ರಾರಂಭವಾಗದೇ ಬರದ ಛಾಯೆ ಆವರಿಸಿದೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೆ ಈ ಬಾರಿಯೂ ನೀರಿನ ಕೊರತೆ ಕಾಡಲಿದೆ ಎನ್ನುತ್ತಾರೆ ತಜ್ಞರು.

ನೀರಿನ ಒಳಹರಿವು ಬಹುತೇಕ ಕಡಿಮೆಯಾಗಿದ್ದು, ಕೇವಲ 300 ಕ್ಯೂಸೆಕ್ ಮಾತ್ರ ಬರುತ್ತಿದೆ. ಇನ್ನು ನದಿಗೆ 120 ಕ್ಯೂಸೆಕ್ ಬಿಡಲಾಗಿದ್ದು, ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡದ ಸ್ಥಿತಿ ನಿರ್ಮಾಣವಾಗಿದೆ. ಹಾಸನ ನಗರಕ್ಕೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುವ ಪರಿಸ್ಥಿತಿ ಇದೆ. ಕೆಲವೇ ದಿನದಲ್ಲಿ ಅದು ಬಂದಾಗಬಹುದು ಎನ್ನುತ್ತಾರೆ ಸ್ಥಳೀಯರು.

ಜಲಾಶಯದ ನೀರಿನ ಮಟ್ಟ:

  • ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂಸಿ.
  • ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 5.67 ಟಿಎಂಸಿ.
  • ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ.
  • ನದಿ ಮೂಲಕ ಪ್ರತಿನಿತ್ಯ 150 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.

ಜಲಾಶಯದ ನೀರು ಉಪಯೋಗದ ವಿವರ ಇಂತಿದೆ.

  • ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ.
  • ಶ್ರೀರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ ನೀರು.
  • ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನಿರು.
  • ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು, ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು ಬೇಕಾಗುತ್ತೆ.

ಒಟ್ಟಾರೆ ಮಳೆ ಕೊರತೆಯಿಂದ ರೈತ ಕಂಗಾಲಾಗುವುದರ ಜೊತೆಗೆ ಚಿಂತಾಕ್ರಾಂತನಾಗಿರುವು ಸತ್ಯ. ಸದ್ಯ ಅಲ್ಪಾವಧಿ ಸಾಲಮನ್ನಾ ಮಾಡಿರುವ ಸರ್ಕಾರದಿಂದ ಜನ ಕೊಂಚ ನಿರಾಳರಾಗಿದ್ದು, ನಿಜವಾದ್ರೂ ಸಾಲ ಮನ್ನಾವೇ ಎಲ್ಲದ್ದಕ್ಕೂ ಪರಿಹಾರವಲ್ಲ. ವರುಣನ ಕೃಪೆಯಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯ.

Intro:==== ಸ್ಪೇಷಲ್ ಪ್ಯಾಕೇಜ್ ====

ಬಹುಶಃ ಈ ದೃಶ್ಯಗಳನ್ನ ನೋಡಿದ್ರೆ ನಿಮಗೆ ಅನಿಸುತ್ತೆ. ಬರದ ಬೀಕರತೆ ಎಷ್ಟಿದೆ ಅಂತ. ಸರಿಯಾದ ಮಳೆ ಬಾರದ ಹಿನ್ನಲೆಯಲ್ಲಿ ಜಿಲ್ಲೆಯ ಜೀವನದಿಯ ಒಡಲು ಕೂಡಾ ಬರಿದಾಗಿದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ವರುಣ ಕೈ ಕೊಟ್ಟಿದ್ರಿಂದ ಜಿಲ್ಲೆಯ ಜನ ಚಿಂತೆಗೀಡಾಗಿದ್ದಾನೆ. ಹಾಗಿದ್ರೆ ಯಾವುದೀ ಜಲಾಶಯ, ಸದ್ಯ ಇಲ್ಲಿರುವ ನೀರಿನ ಪ್ರಮಾಣವಾದ್ರು ಎಷ್ಟು ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ರೀಪೊರ್ಟ...

ಕಾವೇರಿಯ ಉಪನದಿಗಳಲ್ಲಿ ಒಂದು ಈ ಹೇಮಾವತಿ. ಚಿಕ್ಕಮಗಳೂರಿನ ಜಾವಳಿ ಎಂಬ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಹುಟ್ಟುವ ನದಿ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೆ.ಆರ್.ಎಸ್. ಹಿನ್ನಿರಿನ ಕಾವೇರಿ ನದಿಯನ್ನು ಸೇರುತ್ತೆ. ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಗೊರೂರು ಗ್ರಾಮದಲ್ಲಿ ಅಡ್ಡವಾಗಿ ಅಣೆಕಟ್ಟೆಯನ್ನು ಕಟ್ಟಲಾಗಿದೆ. ಬೇಲೂರಿನ ಯಗಚಿ ನದಿ ಹೇಮಾವತಿ ನದಿಯ ಮುಖ್ಯ ಉಪನದಿ. ಈ ನದಿಯು ಸುಮಾರು 245 ಕಿ.ಮೀ ಉದ್ದ ಹಾಗು 5140 ಕಿ.ಮೀ ಕಾಲುವೆ ಪ್ರದೇಶವನ್ನು ಒಳಗೊಡಿದೆ. ಹೇಮಾವತಿ ಅಣೆಕಟ್ಟನ್ನು 1979 ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲು ಶುರುಮಾಡಿದರು.ಶೆಟ್ಟಿಹಳ್ಳಿಯ ರೋಸರಿ ಚರ್ಚ್ ಅಣೆಕಟ್ಟಿನ್ನು ನಿರ್ಮಿಸುವ ಸಂಧರ್ಭದಲ್ಲಿ ಅದು ಪೂರ್ತಿಯಾಗಿ ಮುಚ್ಚಿಹೋಗಿತ್ತು. ಚರ್ಚ್ ನ್ನು ನಾವು ಬೇಸಿಗೆಯ ಸಂಧರ್ಭದಲ್ಲಿ ಕಾಣಬಹುದು.

ಗ್ರಾಫೀಕ್ಸ್: 4 ಬಾರಿ ಆವರಿಸಿದ ಭೀಕರ ಬರಗಾಲ:
ಕಾವೇರಿಯ ಉಪನದಿಗಳಲ್ಲಿ ಒಂದು ಈ ಹೇಮಾವತಿ. ಅಣೆಕಟ್ಟು ನಿರ್ಮಾಣದ ಬಳಿಕ 4 ಬಾರಿ ಜಲಕ್ಷಾಮ ಎದುರಾಗಿದೆ. 1987, 2003, 2005, ಬಿಟ್ಟರೇ, ಈ ಬಾರಿಯೂ ಕೂಡಾ ಜಲಾಶಯಕ್ಕೆ ಭೀಕರ ಬರ ಆವರಿಸಿದೆ. ಇಷ್ಟೊತ್ತಿಗಾಗಲೇ 5-8 ಟಿಎಂಸಿ ನೀರು ಸಂಗ್ರಹಣೆಯಾಗಬೇಕಾಗಿತ್ತು. ಆದ್ರೆ ಈ ಬಾರಿ ಕೇವಲ ಜಲಾಶಯಕ್ಕೆ 1.5 ಟಿ.ಎಂ.ಸಿ. ನೀರು ಬಂದಿದ್ದು, ಡೆಡ್ ಸ್ಟೋರೆಜ್ ಸೇರಿ ಜಲಾಶಯದಲ್ಲಿ 5.67 ಟಿ.ಎಂ.ಸಿ.ನೀರಿದೆ. ಜಲಾಶಯದಲ್ಲಿ 6 ಕ್ರೇಸ್ಟ್‌ಗಳಿವೆ. ಕ್ರೆಸ್ಟ್‌ಗಳಿಗೂ ನಿಲುಕದಂತೆ ನೀರು ಕೆಳಗೆ ಇಳಿದು ಹೋಗಿದೆ. ಹೀಗಾಗಿ ನದಿಪಾತ್ರವನ್ನ ನಂಬಿರುವ ರೈತರ ಪಾಡು ಹೇಳತೀರದಾಗಿದೆ. ಹಾಸನವೇ ಇಂದು ಕುಡಿಯುವ ನೀರಿಗೆ ಪರಿತಪಿಸುತ್ತಿದೆ. ಇನ್ನು ತಮಿಳುನಾಡಿಗೆ ಬಿಡುವುದಾದ್ರು ಹೇಗೆ ಹೇಳಿ...? ಎನ್ನುವುದು ಜಿಲ್ಲೆಯ ರೈತರ ಪ್ರಶ್ನೆ.

ಬೈಟ್: ಕೊಟ್ಟೂರು ಶ್ರೀನಿವಾಸ್, ಜಿಲ್ಲಾಧ್ಯಕ್ಷ, ರೈತ ಸಂಘ

ಗ್ರಾಪಿಕ್ಸ್ ಪ್ಲೇಟ್:

•         ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂ.ಸಿ.

•         ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 5.67 ಟಿ.ಎಂ.ಸಿ.

•         ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ.

•         ನೀರು ಹರಿಯುವಾಗ ನಾಲೆಗಳಿಂದ ನೀರು ಕದಿಯುವ ಬಲಾಡ್ಯರಿಗೇನು ಕಮ್ಮಿಯಿಲ್ಲ.

•         ಜಲಾಶಯದ ಒಳಭಾಗದಲ್ಲಿ ದನ ಕರುಗಳು ಮೇವಿಗಾಗಿ ಪರದಾಡುತ್ತಿವೆ.

•         ಕಳೆದ 13 ವರ್ಷಗಳಲ್ಲಿ 8 ವರ್ಷ ಹೇಮಾವತಿ ಜಲಾಶಯ ತುಂಬಿಲ್ಲ.

•         ಜೂನ್ 1 ರಿಂದ ಇಲ್ಲಿಯ ತನಕ 3.5 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ.

•         ನದಿ ಮೂಲಕ ಪ್ರತಿನಿತ್ಯ 150ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ.
         
ಹೇಮಾವತಿಯ ಜಲಾಶಯವನ್ನ ಕಟ್ಟಿ ಸದ್ಯ ನಾಲ್ಕುವರೆ ದಶಕಗಳೇ ಕಳೆದಿದೆ. ಆ ಸಂದರ್ಭದಲ್ಲಿ ನೂರಾರು ಗ್ರಾಮಗಳು ಮುಳುಗಡೆಯಾಗಿದ್ರಿಂದ 37.103 ಸಾಮಾರ್ಥ್ಯದ ನೀರು ಸಂಗ್ರಹ ಮಾಡೋ ಹೇಮಾವತಿ ಜಲಾಶಯ ಲೋಕಾರ್ಪಣೆಯಾಯ್ತು. ಹೇಮಾವತಿ ಜಲಾಶಯ ಒಟ್ಟು 6.55 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ. ಇನ್ನು ಹಾಸನ ನಗರಕ್ಕೆ ಪ್ರತಿವರ್ಷ ಕುಡಿಯುವ ನೀರಿಗಾಗಿ 4 ಟಿ.ಎಂ.ಸಿ.ನೀರು ಬೇಕಾಗುತ್ತದೆ. ಇಷ್ಟೆಯಲ್ಲದೇ ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕೂಡಾ ಕುಡಿಯುವ ನೀರಿಗಾಗಿ ಜಲಾಶಯವನ್ನ ನಂಬಿಕೊಂಡಿವೆ. ಸದ್ಯದ ನೀರಿನ ಪರಿಸ್ಥಿತಿ ಹೇಗಿದೆ ಎನ್ನೋದಕ್ಕೆ ಹೇಮಾವತಿ ಜಲಾಶಯ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ದೂರದ ಮಂಗಳೂರಿನಿಂದ ಬಂದ ಪ್ರವಾಸಿಗರು ಮೊದಲ ಬಾರಿಗೆ ಜಲಾಶಯ ನೋಡಲು ಬಂದಿದ್ರು. ಡ್ಯಾಂ ನೋಡಿದ ಇವರು ಬೇಸರದಿಂದ ಹಿಂತಿರುಗಿದ್ರು.

1979 ರಿಂದ 2017ರ ತನಕ 4 ಬಾರಿ ಬೀಕರ ಬರಗಾಲದಿಂದ ಜಲಾಶಯ ತತ್ತರಿಸಿದ್ರೆ, ಉಳಿದಂತೆ ಡ್ಯಾಂಗೆ ನೀರು ಬಂದ್ರು ಕ್ರೆಸ್ಟ್ ಗೇಟ್ ಮೂಲಕ ನೀರು ಹರಿಯಲಿಲ್ಲ. ಕಾರಣ ಭರ್ತಿಯಾಗದ ಜಲಾಶಯ. ಯಾವ್ಯಾವ ವರ್ಷ ಜಲಾಶಯ ತುಂಬಿಲ್ಲ ಎಂಬುದನ್ನ ನೋಡುವುದಾದ್ರೆ, 1987, 2001, 2002, 2003, 2004, 2005, 2016, ಹಾಗೂ 2017 ರ ಈ ಬಾರಿಯೂ ಜಲಾಶಯ ತುಂಬದೇ ಖಾಲಿ ಖಾಲಿಯಾಗಿದೆ. ಒಳಹರಿವು ಕಡಿಮೆಯಾದಂತೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಜಲಾಶಯದಿಂದ ಸರಬರಾಜ ಅಗುವ ಕುಡಿಯುವ ನೀರನ್ನು ನಂಬಿರುವ ಪಟ್ಟಣ ಮತ್ತು ನಗರ ಪ್ರದೇಶಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ವರ್ಷಗಳಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಸಕಾಲಕ್ಕೆ ನಾಲೆಗಳಲ್ಲಿ ನೀರು ಬರದೇ, ಬೆಳೆ ಬೆಳಲಾಗದೆ ಕಷ್ಟ ಎದುರಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದ್ರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ.

ಬೈಟ್: ಕೊಟ್ಟೂರು ಶ್ರೀನಿವಾಸ್, ಜಿಲ್ಲಾಧ್ಯಕ್ಷ, ರೈತ ಸಂಘ

ಜಿಲ್ಲೆಯಲ್ಲಿ ಗುಟುಕು ನೀರಿಗೂ ಪ್ರಾಣಿ-ಪಕ್ಷಿಗಳು, ಜಾನುವಾರುಗಳು, ಜಲಚರಗಳು ಅಷ್ಟೆಯಲ್ಲದೇ ಜಿಲ್ಲೆಯ ಜನ ಕೂಡಾ ಪರಿತಪಿಸುತ್ತಿದ್ದಾರೆ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅಷ್ಟೆಯಲ್ಲದೇ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್ ಮೂಲಕ ನೀರನ್ನ ಪೂರೈಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದ್ರೆ ಸದ್ಯ ವರುಣ ಅಲ್ಪ ಪ್ರಮಾಣದಲ್ಲಿ ಧರೆಗಿಳಿದ್ರಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ ರೈತರು ತಲೆಯ ಮೇಲೊಂದು ಟವಲ್ ಹಾಕ್ಕೊಂಡು ಆಕಾಶ ನೋಡುವ ಪರಿಸ್ಥಿತಿ ಮಾತ್ರ ಮುಂದುವರೆದಿದೆ. ಸದ್ಯ ಡ್ಯಾಂನ ಒಳಭಾಗದಲ್ಲಿ ಇರುವ ನೀರಿನ ಪ್ರಮಾಣವಾದ್ರು ಎಷ್ಟು ಎನ್ನುವುದನ್ನ ನೋಡುವುದಾದ್ರೆ,

ಗ್ರಾಫಿಕ್ಸ್ : ಜಲಾಶಯದ ನೀರು ಉಪಯೋಗದ ವಿವರ ಇಂತಿದೆ.

•         ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ.

•         ಮೈಸೂರು ಮಹಾರಾಜರು ಕಟ್ಟಿಸಿದ್ದ ಶ್ರೀ ರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ. ನೀರು.

•         ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನಿರು,

•         ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು, ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು.

ಸಕಾಲಕ್ಕೆ ಮಳೆ ಬರದೇ ಸಮಸ್ಯೆ ಆದ್ರೆ ಈ ಎಲ್ಲಾ ಯೋಜನೆಗಳಗೂ ಸದ್ಯದ ನೀರಿನ ಲಭ್ಯತೆ ಆಧಾರಿಸಿ ಸಮ ಪ್ರಮಾಣದಲ್ಲಿ ಸರಾಸರಿ ಅಧಾರದಲ್ಲಿ ನೀರು ಹರಿಸುತ್ತಾರೆ. ನಾಲೆಗಳ ಮೂಲಕ ನೀರು ಹರಿಯುವಾಗ ಬಲಾಡ್ಯ ರೈತರಷ್ಟೆರಯಲ್ಲದೇ ಸಾಮಾನ್ಯ ರೈತಾಪಿವರ್ಗದವರು ನಾಲೆಗಳಿಗೆ ಪಂಪ್ ಸೆಟ್ ಹಾಕಿ ತಮಗೆ ಬೇಕಾದಷ್ಟು ನೀರು ಕದಿಯುತ್ತಾರೆ. ಇವರಲ್ಲಿ ರಾಜಕೀಯ ಪಕ್ಷಗಳ ಪುಡಾರಿಗಳೇ ಹೆಚ್ಚು.

ಅಣೆಕಟ್ಟೆಯಲ್ಲಿ ಈಗ ಇರುವ ನೀರಿನ ಪ್ರಮಾಣ, 5.67ಟಿಎಂಸಿ. ಇದರಲ್ಲಿ ಬಳಕೆಗೆ ಸಿಗುವುದು ಕೇವಲ 3.5ಟಿಎಂಸಿ ನೀರು ಮಾತ್ರ. ಈ ಜಲಾಶಯ ತುಂಬಿದ್ರೆ, ಹಾಸನ ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳ ಹಲವು ತಾಲ್ಲೂಕುಗಳಿಗೆ ರೈತರು ಬೆಳೆದಿರುವ ಭತ್ತ, ಕಬ್ಬು, ಜೋಳ ಇತ್ಯಾದಿ ಬೆಲೆಗಳಿಗೆ ನೀರು ಕೊಡಬೇಕು. ಅಲ್ಲದೆ ನದಿ ಪಾತ್ರಕ್ಕೆ ನೀರು ಬಿಡಬೇಕು ಮತ್ತು ಹಲವು ನಗರಗಳಿಗೆ ಕುಡಿಯುವ ನೀರು ಕೊಡಬೇಕು. ಹೇಮಾವತಿ ಜಲಾಶಯ ಪ್ರದೇಶದಲ್ಲಿ ಈ ಸಲ ಸಕಾಲಕ್ಕೆ ಮಳೆ ಪ್ರಾರಂಭವಾಗದೇ ಬರದ ಛಾಯೆ ಆವರಿಸಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಿಗೆ ಈ ಬಾರಿಯೂ ನೀರಿನ ತಾತ್ವಾರ ಕಾಡಲಿದೆ.

ನೀರಿನ ಒಳಹರಿವು ಬಹುತೇಕ ಕಡಿಮೆಯಾಗಿದ್ದು, ಕೇವಲ 300 ಕ್ಯೂಸೆಕ್ ಮಾತ್ರ ಬರ್ತಿ ದೆ. ಇನ್ನು ನದಿಗೆ 120ಕ್ಯೂಸೆಕ್ ಬಿಡಲಾಗಿದ್ದು, ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡದ ಸ್ಥೀತಿ ನಿರ್ಮಾಣವಾಗಿದೆ. ಹಾಸನ ನಗರಕ್ಕೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುವ ಪರಿಸ್ಥಿತಿ ಇದೆ ಕೆಲವೇ ದಿನದಲ್ಲಿ ಅದು ಬಂದಾಗಬಹುದು.

ಒಟ್ಟಾರೆ ಈ ಬಾರಿಯೂ ವರುಣ ಅಣೆಕಟ್ಟೆಗೆ ಬಾರದೇ ಮರೆಯಾಗಿದ್ದಾನೆ. ರೈತ ಕಂಗಾಲಾಗುವುದರ ಜೊತೆಗೆ ಚಿಂತಾಕ್ರಾಂತನಾಗಿದ್ದಾನೆ. ಮುಂಗಾರು ಮಳೆ ಇಲ್ಲದೇ ಕೃಷಿ ಚಟುವಟಿಕೆ ಕೃಷಿ ಮಾಡಿರೋ ರೈತನ ಪಾಡು ಹೇಳತೀರದಾಗಿದೆ. ಸದ್ಯ ಅಲ್ಪಾವಧಿ ಸಾಲ ಮನ್ನಾ ಮಾಡಿರೋ ಸರ್ಕಾರದಿಂದ ಜನ ಕೊಂಚ ನಿರಾಳವಾಗಿದ್ದಾರೆ. ಆದ್ರೆ ಸಾಲ ಮನ್ನವೇ ಎಲ್ಲದ್ದಕ್ಕೂ ಪರಿಹಾರವಲ್ಲ. ವರುಣನ ಕೃಪೆಯಿಂದ ಮಾತ್ರ ಪರಿಹಾರ ಸಾಧ್ಯ.

•         ಸುನೀಲ್ ಕುಂಭೇನಹಳ್ಳಿ, ಈ ಟಿವಿ ನ್ಯೂಸ್, ಹಾಸನ.

Body:0

Conclusion:0
Last Updated : May 3, 2019, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.