ETV Bharat / state

ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರಿಂದ ಶಾಸಕರಿಗೆ ಕ್ಲಾಸ್ - ನೀರಾವರಿ ಯೋಜನೆ

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಬಿರು ಬಿಸಿಲಿನಲ್ಲಿ ಎರಡು ಕಿಲೊಮೀಟರ್ ನಡೆಸಿದ್ದಾರೆ. ಬರಡಾದ ಕೆರೆ ತೋರಿಸಲು ನಡೆಸಿಕೊಂಡೇ ಕರೆದೊಯ್ಧು ಕೆರೆ ಅಂಗಳದಲ್ಲಿ ಕೂರಿಸಿ ನಡೆದು ಸುಸ್ತಾದ ಬಾಲಕೃಷ್ಣರನ್ನು ತರಾಟೆಗೆ ತೆಗದುಕೊಂಡರು.

ಕೆರೆಗೆ ನೀರು ತುಂಬಿಸುವಂತೆ ಶಾಸಕರಿಗೆ ತರಾಟೆ
author img

By

Published : Mar 24, 2019, 10:25 PM IST

ಹಾಸನ/ಚನ್ನರಾಯಪಟ್ಟಣ: ಸತತ ಬರಗಾಲ ಪೀಡಿತ ಗ್ರಾಮಗಳಿಗೆ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ‌.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಬಿರು ಬಿಸಿಲಿನಲ್ಲಿ ಎರಡು ಕಿಲೊಮೀಟರ್ ನಡೆಸಿದ್ದಾರೆ. ಬರಡಾದ ಕೆರೆ ತೋರಿಸಲು ನಡೆಸಿಕೊಂಡೇ ಕರೆದೊಯ್ಧು ಕೆರೆ ಅಂಗಳದಲ್ಲಿ ಕೂರಿಸಿ ನಡೆದು ಸುಸ್ತಾದ ಬಾಲಕೃಷ್ಣರನ್ನು ತರಾಟೆಗೆ ತೆಗದುಕೊಂಡರು.

ಕೆರೆಗೆ ನೀರು ತುಂಬಿಸುವಂತೆ ಶಾಸಕರಿಗೆ ತರಾಟೆ

ನಿಮ್ಮ ಕಾಂಕ್ರಿಟ್ ರಸ್ತೆ ನಮಗೆ ಬೇಡ ಮೊದಲು ಕೆರೆಗೆ ನೀರು ತುಂಬಿಸಿ. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವು ಚಂದಾ ಎತ್ತಿ‌ ಕೊಡ್ತೀವಿ ಶೀಘ್ರವಾಗಿ ಯೋಜನೆ ಜಾರಿಮಾಡಿ ಎಂದು ದಿಡಗ, ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಜನರನ್ನು ಸಮಾಧಾನಪಡಿಸಲು ಮುಂದಾದ ಶಾಸಕ ಹೈರಾಣಾದರು. ಕೆರೆ ತುಂಬಿಸದಿದ್ದರೆ ಇನ್ಮುಂದೆ ಯಾವುದೇ ಚುನಾವಣೆಗೆ ಮತ ಚಲಾಯಿಸಲ್ಲ‌ ಎಂದು ಎಚ್ಚರಿಕೆ ನೀಡಿದರು. ಚುನಾವಣೆ ಮುಗಿದ ಬಳಿಕ ಕೆರೆಗೆ ನೀರು ತುಂಬಿಸೋ ಭರವಸೆ ನೀಡಿ ಶಾಸಕರು ಅಲ್ಲಿಂದ ತೆರಳಿದರು‌‌.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.