ETV Bharat / state

ಕೊರೊನಾ ತಡೆಯಲು ವೈದ್ಯರ ನಡೆ ಗ್ರಾಮೀಣ ಭಾಗದ ಕಡೆ ಎಂಬ ಯೋಜನೆಗೆ ಮಣೆ - ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ

ಕೊರೊನಾ ಮಹಾಮಾರಿ ಹಳ್ಳಿಗಳಿಗೂ ಕಾಲಿಟ್ಟಿದ್ದು, ಜನರು ಭಯ ಪಡುವಂತಾಗಿದೆ. ಹಾಗಾಗಿ ಹಳ್ಳಿಯಲ್ಲಿ ಹರಡುತ್ತಿರುವ ಕೊರೊನಾ ತಡೆಯಲು ಹಾಸನ ವೈದ್ಯರು ಉಪಾಯವೊಂದನ್ನು ಮಾಡಿದ್ದಾರೆ. ವೈದ್ಯರ ನಡೆ ಗ್ರಾಮೀಣ ಭಾಗದ ಕಡೆ ಎಂಬ ಯೋಜನೆಗೆ ಮಣೆ ಹಾಕಿದ್ದಾರೆ.

hassan
ಹಾಸನ
author img

By

Published : May 27, 2021, 9:52 AM IST

Updated : Sep 16, 2022, 7:43 PM IST

ಹಾಸನ: ಸೋಂಕು ತಗುಲಿದ ವ್ಯಕ್ತಿಗಳನ್ನು ತಕ್ಷಣ ಕೋವಿಡ್ ಕೇರ್ ಸೆಂಟರ್​ಗೆ ಸೇರಿಸಲೇಬೇಕು. ಜೊತೆಗೆ ಸ್ಥಳದಲ್ಲಿಯೇ ಕೊರೊನಾ ಪರೀಕ್ಷೆ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕಲಾ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯರ ನಡೆ ಗ್ರಾಮೀಣ ಭಾಗದ ಕಡೆ ಎಂಬ ಯೋಜನೆಗೆ ಚಾಲನೆ ನೀಡಿ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಮ್ಮ ಹಾಸನ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಮ್ಲಜನಕದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿಗಳ ಆಶಯದಂತೆ ಇವತ್ತು ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ವೈದ್ಯರ ನಡೆ ಗ್ರಾಮೀಣ ಭಾಗದ ಕಡೆ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಯಲ್ಲಿಯೂ ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಹಳ್ಳಿಯ ಕಡೆ ವೈದ್ಯರ ನಡೆ

ಸೋಂಕಿತರಿಗೆ ಸ್ಥಳದಲ್ಲಿಯೇ ಕೆಲವು ಚಿಕಿತ್ಸೆಗಳನ್ನು ನೀಡುವಂತಹ ಕಾರ್ಯ ಮಾಡುವ ಜೊತೆಗೆ 47 ವಾಹನಗಳ ಮೂಲಕ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಂಕಿತರ ಪತ್ತೆ ಹಚ್ಚಲಾಗುವುದು. ಇಂದಿನಿಂದ ಮತ್ತಷ್ಟು ವಾಹನಗಳನ್ನು ಗ್ರಾಮೀಣ ಭಾಗದೆಡೆಗೆ ಕಳುಹಿಸಲಾಗುವುದು ಎಂದರು.

ಇನ್ನು ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯನ್ನು ಈಗಾಗಲೇ ಸರಿಪಡಿಸಲಾಗಿದೆ. ಜಿಲ್ಲೆಗೆ 10 ಕೋಟಿ ಹಣ ಬಿಡುಗಡೆಯಾಗಿದ್ದು, 40 ವೆಂಟಿಲೇಟರ್ ಕೊಡಲಾಗಿದೆ. ಹಿಮ್ಸ್​ನಲ್ಲಿ ಮತ್ತೊಂದು ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಕಾರ್ಯ ಈಗಾಗಲೇ ಆರಂಭವಾಗಿದೆ. ಕೇಂದ್ರ ಸರ್ಕಾರದಿಂದ ಚನ್ನರಾಯಪಟ್ಟಣ ಮತ್ತು ಸಕಲೇಶಪುರಕ್ಕೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ. ಉಳಿದಂತೆ ಎಲ್ಲಾ ತಾಲೂಕಿನಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:'ಅರೆರೆ..ಕೊರೊನಾ ಬಂದೈತಿ, ಪುಣ್ಯಕ್ಕೆ ಉಳಿಗಾಲ ಎಲ್ಲೈತಿ': ಪೊಲೀಸ್​ ಸಿಬ್ಬಂದಿಯ ಜಾಗೃತಿ ಹಾಡು ಕೇಳಿ..

​ವೈದ್ಯರ ತಂಡ ಗ್ರಾಮಗಳಿಗೆ ಹೋಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲಿದೆ ಎಂಬ ನಂಬಿಕೆ ಇದೆ. ಇಡೀ ತಾಲೂಕಿಗೆ ಒಟ್ಟು 54 ಜನ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಜೊತೆಯಲ್ಲಿ 150 ಮಂದಿ ದಾದಿಗಳು ಸೇರಿದಂತೆ ಡೇಟಾ ಎಂಟ್ರಿ ಆಪರೇಟರ್ ಒಳಗೊಂಡ ತಂಡ ಒಂದು ವಾಹನದಲ್ಲಿ ಇರುತ್ತದೆ. ಇಂದಿನಿಂದ ಪ್ರತಿ ಮನೆಯಲ್ಲಿಯೂ ಸೋಂಕಿತರು ಎಷ್ಟು ಇದ್ದಾರೆ ಎಂಬುದು ಗೊತ್ತಾಗಲಿದೆ. ಇನ್ನು 8-10 ದಿನದೊಳಗೆ ಸೊಂಕಿತರ ಪತ್ತೆ ಮಾಡಿ ಚಿಕಿತ್ಸೆ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರದಂದು ಹಾಸನದಲ್ಲಿ ಸ್ಟೆಪ್​​​ ಡೌನ್ ಕೋವಿಡ್ ಸೆಂಟರ್ ಉದ್ಘಾಟನೆಯಾಗಲಿದ್ದು, ಜಿಲ್ಲೆಯಲ್ಲಿ 7 ಬ್ಲಾಕ್ ಫಂಗಸ್ ಪತ್ತೆಯಾಗಿವೆ. ಸೋಂಕಿಗೆ ಓರ್ವ ಮೃತಪಟ್ಟಿದ್ದಾನೆ. ಸೋಂಕಿತರು ಮೈಸೂರು ಮತ್ತು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರನೇ ಅಲೆಗೆ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಶಾಲಾ-ಕಾಲೇಜು ತೆರೆಯುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು. ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

​ಇದೇ ವೇಳೆ ಶಾಸಕ ಪ್ರೀತಮ್ ಜೆ. ಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಉಪವಿಭಾಗದೀಕಾರಿ ಜಗದೀಶ್, ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ನಿಲ್ಲುತ್ತಿಲ್ಲ ಗನ್‌ ರಕ್ತಪಾತ: ಕ್ಯಾಲಿಫೋರ್ನಿಯಾ ಗುಂಡಿನ ದಾಳಿಯಲ್ಲಿ 8 ಮಂದಿ ಬಲಿ, ಹಲವರಿಗೆ ಗಾಯ

Last Updated : Sep 16, 2022, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.