ಹಾಸನ: ಯು ಟಿ ಖಾದರ್ಗೆ 70 ವರ್ಷದ ಇತಿಹಾಸದ ಪ್ರಜ್ಞೆ ಇಲ್ಲ. ಅದಕ್ಕೆ ಹಾಗೇ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮೀಸಲಾತಿ ತೆಗೆಯುವುದಿಲ್ಲ. ₹2 ಲಕ್ಷಕ್ಕೂ ಅಧಿಕ ಹಣವನ್ನು ಮೀಸಲಾತಿಗಾಗಿ ನೀಡಿ. ಆ ಜನರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ದುರಾಡಳಿತ, ದೌರ್ಜನ್ಯವೆಸಗಿದೆ. ಇದರ ಬಗ್ಗೆ ಅವರಿಗೆ ಅರಿವಿಲ್ಲ. ಮೀಸಲಾತಿಯನ್ನು ಬಲಪಡಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟತೆ ನೀಡಿದರು.
ಕುಮಾರಸ್ವಾಮಿಗೆ ಯಾವಾಗ ಕನಸು ಬಿತ್ತು: ಮಾಜಿ ಸಿಎಂ ಹೆಚ್ಡಿಕೆ ಅವರಿಗೆ ಯಾವಾಗ ಕನಸು ಬಿತ್ತು ಎಂಬುದು ಗೊತ್ತಿಲ್ಲ. ಇನ್ನೂ ಮೂರು ವರ್ಷ ಬಿಎಸ್ವೈ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರು ಪ್ರಯತ್ನಿಸಬಹುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ? ನ್ಯಾಯಾಲಯವೇ ಅವರನ್ನು ಅರ್ಹರು ಎಂದು ಹೇಳಿದೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿದ್ದಾರೆ. ಅನರ್ಹಗೊಳಿಸಿದವರು ಅನರ್ಹರು ಎಂದು ಖಾರವಾಗಿ ಉತ್ತರಿಸಿದರು.