ETV Bharat / state

ಅನಗತ್ಯ ಸಂಚಾರಕ್ಕೆ ಕಠಿಣ ಕ್ರಮ.. ಸಕಲೇಶಪುರ ತಹಶೀಲ್ದಾರ್‌ ವಾರ್ನಿಂಗ್‌! - ಕೊರೊನಾ ಸೋಂಕಿನ ಭೀತಿ

ಜನ ಸಾಮಾನ್ಯರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕೆಲವರು ಮನೆಯಿಂದ ಸುಖಾಸುಮ್ಮನೆ ಹೊರಗಡೆ ತಿರುಗಾಡುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

unnecessary travelling band in sakaleshpur
ಅನಗತ್ಯ ಸಂಚಾರಕ್ಕೆ ಕಠಿಣ ಕ್ರಮ
author img

By

Published : Mar 29, 2020, 9:44 PM IST

ಸಕಲೇಶಪುರ: ನಿಗದಿತ ಕಾಲಮಿತಿಯೊಳಗೆ ಗುಂಪು ಸೇರದೆ ವ್ಯಾಪಾರ ವಹಿವಾಟು ನಡೆಸಬೇಕು. ಅನಗತ್ಯ ಸಂಚಾರಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಾಲೂಕು ದಂಡಾಧಿಕಾರಿ ಮಂಜುನಾಥ್ ಎಚ್ಚರಿಸಿದರು.

ಅನಗತ್ಯ ಸಂಚಾರಕ್ಕೆ ಕಠಿಣ ಕ್ರಮ..

ಪಟ್ಟಣದ ವಿವಿಧೆಡೆ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು‌ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅಗತ್ಯ ವಸ್ತುಗಳಾದ ಸಾನಿಟೈಸರ್, ಮಾಸ್ಕ್, ತರಕಾರಿ, ಹಣ್ಣು ಸೇರಿ ದಿನಸಿ ವಸ್ತುಗಳನ್ನು ಹೆಚ್ಚಿನ‌ ದರದಲ್ಲಿ ಮಾರಾಟ ಮಾಡಿದವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜನ ಸಾಮಾನ್ಯರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕೆಲವರು ಮನೆಯಿಂದ ಸುಖಾಸುಮ್ಮನೆ ಹೊರಗಡೆ ತಿರುಗಾಡುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಿನಸಿ, ಹಣ್ಣು ಕೊಳ್ಳುವವರು 3-4 ಅಡಿ ಅಂತರದಲ್ಲಿ ನಿಂತು ವ್ಯಾಪಾರ ಮಾಡಬೇಕು. ಅಂಗಡಿ ಮಾಲೀಕರು ಸಹ ಅಂಗಡಿ ಮುಂದೆ ಚೌಕ ಹಾಕಿ ವಹಿವಾಟು ನಡೆಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.