ETV Bharat / state

ಕೊನೆಪಕ್ಷ ಇಬ್ಬರಿಂದ ಸಂಪ್ರದಾಯ ಉಳಿಸುವ ಕೆಲಸ... ಕೊರೊನಾ ಭೀತಿಯಲ್ಲಿ ನೆರವೇರಿದ ಯುಗಾದಿ ಹಬ್ಬ

ಹಾಸನ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ನೆ ಜಾರಿ ಮಾಡಿದ್ದು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮೀಣ ಭಾಗದ ಹೊಸವರ್ಷ ಎಂದೇ ಪರಿಗಣಿಸುವ ಯುಗಾದಿ ಹಬ್ಬಕ್ಕೂ ಕೊರೋನಾ ಕಾರ್ಮೋಡ ಕವಿದಿದೆ.

ugadi celebration in hassan
ಇಬ್ಬರಿಂದ ಸಂಪ್ರದಾಯ ಉಳಿಸುವ ಕೆಲಸ
author img

By

Published : Mar 26, 2020, 9:49 AM IST

ಹಾಸನ: ಜಿಲ್ಲೆಯಲ್ಲಿ ಪ್ರತಿವರ್ಷ ಬಹಳ ಅದ್ದೂರಿಯಾಗಿ ನೆರವೇರುತ್ತಿದ್ದ ಈ ಗ್ರಾಮದ ಯುಗಾದಿ ಹಬ್ಬದ ಹೊನ್ನಾರು ಕಟ್ಟುವಿಕೆ ಕೇವಲ ಇಬ್ಬರೇ ಇಬ್ಬರು ಆಚರಿಸುವ ಮೂಲಕ ಸಂಪ್ರಾದಾಯವನ್ನ ಉಳಿಸುವ ಪ್ರಯತ್ನ ಮಾಡಿದ್ದಾರೆ.

ಕೊರೊನಾ ಭೀತಿಯಲ್ಲಿ ನೆರವೇರಿದ ಯುಗಾದಿ ಹಬ್ಬ
ಕೊರೋನಾ ಎಂಬ ಹೆಮ್ಮಾರಿ ವಿಶ್ವವ್ಯಾಪಿ ಹರಡಿದ್ದು, ರಾಜ್ಯದಲ್ಲಿಯೂ ಈಗ 51 ಮಂದಿಗೆ ಸೋಂಕು ಹರಡಿದೆ. ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮೀಣ ಭಾಗದ ಹೊಸವರ್ಷ ಎಂದೇ ಪರಿಗಣಿಸುವ ಯುಗಾದಿ ಹಬ್ಬಕ್ಕೂ ಕೊರೊನಾ ಕಾರ್ಮೋಡ ಕವಿದಿದೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ನಡೆಯಬೇಕಿದ್ದ ಅದ್ದೂರಿ ಯುಗಾದಿ ಹಬ್ಬದ ಚೌಡೇಶ್ವರಿ ದೇವಿಯ ಉತ್ಸವ, ಜಾನುವಾರುಗಳಿಗೆ ಕೆಂಡ ಹಾಯಿಸುವುದು ಸೇರಿ, ಗ್ರಾಮದೇವತೆಯ ದೇವಾಲಯ ಇದೇ ಮೊದಲ ಬಾರಿಗೆ ಬಾಗಿಲು ಹಾಕಿದ್ದು, ಇಡೀ ಊರಿಗೆ ಮೌನ ಆವರಿಸಿದ್ದು, ಹಿಂದಿನಿಂದ ಸಂಪ್ರದಾಯ ನಡೆದುಕೊಂಡು ಬಂದಿದ್ದ ಹಿರಿಯರಿಬ್ಬರು ಹೋನ್ನಾರು ಕಟ್ಟಿ ಈ ವರ್ಷದ ಕೃಷಿ ಚಟುವಟಿಕೆಗೆ ಸಂಪ್ರದಾಯಿಕವಾಗಿ ಮುನ್ನುಡಿ ಬರೆದಿದ್ದಾರೆ. ಇಡೀ ವಿಶ್ವವೇ ಹೆಮ್ಮಾರಿ ಕರುಣಾ ಭೀತಿಯಿಂದ ಹೊರಬರದಂತೆ ಆದೇಶವಾಗಿದ್ದು ಧಾರ್ಮಿಕ ಕಾರ್ಯಗಳಿಗೂ ಇದರ ಭಯ ತಟ್ಟಿದ್ದು ಗ್ರಾಮೀಣ ಭಾಗದ ರೈತಾಪಿ ವರ್ಗದ ಕೃಷಿ ಆರಂಭಿಸುವ ಅದ್ದೂರಿ ಹಬ್ಬ ಯುಗಾದಿಗೂ ಸಂಕಟ ತಂದೊಡ್ಡಿತು ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಸಂಪ್ರದಾಯವನ್ನು ಇಲ್ಲ ಎಂಬುದಕ್ಕೆ ಇಬ್ಬರು ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.