ETV Bharat / state

ಬೈಕಿಗೆ ಆಟೋ ಡಿಕ್ಕಿ ಸ್ಥಳದಲ್ಲೇ ಅಜ್ಜ - ಮೊಮ್ಮಗಳು ಸಾವು

ಬೈಕಿಗೆ ಆಟೋ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಅಜ್ಜ ಮತ್ತು ಮೊಮ್ಮಗಳು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

Two died, Two died in road accident, Two died in road accident in hassan, Hassan accident, Hassan accident news, ಇಬ್ಬರು ಸಾವು, ಅಪಘಾತದಲ್ಲಿ ಸ್ಥಳದಲ್ಲೇ ಅಜ್ಜಿ ಮತ್ತು ಮೊಮ್ಮಗಳು ಸಾವು, ಹಾಸನದಲ್ಲಿ ಅಪಘಾತದಲ್ಲಿ ಸ್ಥಳದಲ್ಲೇ ಅಜ್ಜಿ ಮತ್ತು ಮೊಮ್ಮಗಳು ಸಾವು, ಹಾಸನ ಅಪಘಾತ, ಹಾಸನ ಅಪಘಾತ ಸುದ್ದಿ,
ಬೈಕಿಗೆ ಆಟೋ ಡಿಕ್ಕಿ ಸ್ಥಳದಲ್ಲೇ ಅಜ್ಜಿ ಮತ್ತು ಮೊಮ್ಮಗಳು ಸಾವು
author img

By

Published : Nov 10, 2021, 9:41 AM IST

ಅರಸೀಕೆರೆ (ಹಾಸನ): ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬೈಕಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಅಜ್ಜ ಹಾಗೂ ಮೊಮ್ಮಗಳು ಸಾವಿಗೀಡಾದ ಘಟನೆ ಜಿಲ್ಲೆಯ ಕಮಲಾಪುರ ಸಮೀಪ ಸಂಭವಿಸಿದೆ.

ತಾಲೂಕಿನ ಜಾವಗಲ್ ಹೋಬಳಿ ಕಲ್ಯಾಡಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಒಂದನೇ ತರಗತಿಯಲ್ಲಿ ಓದುತ್ತಿದ್ದ ನಾಗಲಕ್ಷ್ಮಿ (7) ತನ್ನ ಅಜ್ಜ ನಾಗರಾಜ್ (62) ಜೊತೆ ಬೈಕಿನಲ್ಲಿ ತೆರಳುತ್ತಿದ್ದಳು. ಈ ವೇಳೆ ಎದುರಿನಿಂದ ಬಂದ ಆಟೋ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜ್​ರನ್ನು ನಗರದ ಸರ್ಕಾರದ ಜೆ.ಸಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆ ಹಾಸನಕ್ಕೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.

ಬಾಲಕಿಯ ಸಾವಿಗೆ ಬಿಇಓ ಮೋಹನ್, ಬಿಆರ್‌ಸಿ ಬಳೂಟಿಗಿ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸದಾನಂದಮೂರ್ತಿ ಹಾಗೂ ಕಲ್ಯಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಸಮಿತಿ ಹಾಗೂ ಶಿಕ್ಷಕರ ವೃಂದ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಕುರಿತು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.