ಹಾಸನ: ಚಂದ್ರಗಿರಿಯ ತಪ್ಪಲಿನಲ್ಲಿ ಇಂದು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆ ಕೂಡ ಬೆಟ್ಟದ ತಪ್ಪಲಿನಲ್ಲಿ ಎರಡು ಚಿರತೆಗಳು ತಮ್ಮ ಮರಿಗಳೊಂದಿಗೆ ಕಾಣಿಸಿಕೊಂಡಿದ್ದವು. ಬಳಿಕ ಮಸ್ತಕಾಭಿಷೇಕದ ಸಂದರ್ಭದಲ್ಲಿ ಆ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಅದಾದ ಬಳಿಕ ಶ್ರವಣಬೆಳಗೊಳದ ಸುತ್ತಮುತ್ತ ಮತ್ತೆ ಮೂರು ಚಿರತೆಗಳನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆಗೆ, ಇವತ್ತು ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದು ತಲೆನೋವಾಗಿದೆ.
ಶ್ರವಣ ಬೆಳಗೊಳದ ಸುತ್ತಮುತ್ತ ಹೆಚ್ಚಾಗಿ ಕುರುಚಲು ಪ್ರದೇಶ ಇರುವುದರಿಂದ ಚಿರತೆಗಳು ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, 2 ಚಿರತೆಗಳನ್ನ ಆದಷ್ಟು ಬೇಗ ಸೆರೆಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.