ಹಾಸನ: ಸರ್ಕಾರಿ ಜಾಗದಲ್ಲಿ ಅಕ್ರವಾಗಿ ಶೆಡ್ ನಿರ್ಮಿಸಿ, ಜಾನುವಾರುಗಳ ಮೂಳೆ ಹಾಗೂ ಕೊಂಬುಗಳನ್ನ ಸಾಗಿಸುತ್ತಿದ್ದ ಲಾರಿ ಓರ್ವ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಅರಸೀಕೆರೆ ನಗರಸಭೆ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಅಗ್ಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ, ಟನ್ಗಟ್ಟಲೇ ಜಾನುವಾರುಗಳ ಮೂಳೆ ಮತ್ತು ಕೊಂಬನ್ನ ಶೇಖರಣೆ ಮಾಡಿ ಇಡಲಾಗಿತ್ತು. ಅದನ್ನ ಮಂಡ್ಯ ಮೂಲದ ವಾಹನದ ಮೂಲಕ ಬೇರೆಡೆಗೆ ಸಾಗಿಸಲು ಮುಂದಾಗಿದ್ರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸಾವಿರಾರು ರೂಪಾಯಿ ಮೌಲ್ಯದ ಜಾನುವಾರುಗಳ ಮೂಳೆ ಹಾಗೂ ಕೊಂಬುಗಳನ್ನ ವಶಕ್ಕೆ ಪಡೆದು, ವಾಹನ ಚಾಲಕನನ್ನ ಬಂಧಿಸಿದ್ದಾರೆ.
ಕಳೆದ 10 ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಗೂಡ್ಸ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.