ಹಾಸನ: ಪ್ರಪಂಚದಾದ್ಯಂತ ಕೊರೊನಾ ವೈರಸ್ ಹರಡಿ ದೇಶದಲ್ಲಿ ಲಾಕ್ಡೌನ್ ಇರುವುದರಿಂದ ಸಾರ್ವಜನಿಕರ ಸೇವೆಗೆ ಉಪಯೋಗಿಸಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಮಾಡಲು ಮಲೆನಾಡು ಶಿಕ್ಷಣ ಸಂಸ್ಥೆಯಿಂದ 8 ಲಕ್ಷದ 50 ಸಾವಿರ ರೂಗಳ ಚೆಕ್ನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್ಗೆ ಹಸ್ತಾಂತರಿಸಿದರು.
ಇದಕ್ಕೆ ಮೊದಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಲಾಗಿದ್ದು, ಈಗ ಮುಖ್ಯಮಂತ್ರಿ ನಿಧಿಗೆ ನೀಡಲಾಗಿದೆ ಎಂದು ಶಿಕ್ಷಣ ಸಂಸ್ಥೆಯವರು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕೊರೊನಾದಿಂದ ಜಾಗೃತಿ ಇರಲು ಅಗತ್ಯವಾದ ಮಾಸ್ಕ್, ಸ್ವಾನಿಟೈಸರ್ ಸೇರಿದಂತೆ ಇತರೆ 5 ಲಕ್ಷದ ಪರಿಕರಣವನ್ನು ಕೊಡುವುದಾಗಿ ಹೇಳಿದರು.
ಇದೇ ವೇಳೆ, ಮಲೆನಾಡು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಚೌಡಹಳ್ಳಿ ಪುಟ್ಟರಾಜು, ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಖಜಾಂಚಿ ಆರ್. ಶೇಷಗಿರಿ, ಸಹ ಕಾರ್ಯದರ್ಶಿ ಡಾ. ಡಿ.ಸಿ. ಅರವಿಂದ್, ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಜಯಂತ್, ಕೆ.ಎಂ. ಶಿವಣ್ಣ, ಮ್ಯಾನೇಜರ್ ಶಿವರಾಂ, ನಿರ್ದೇಶಕ ಚೌಡಹಳ್ಳಿ ಜಗದೀಶ್ ಇತರರು ಪಾಲ್ಗೊಂಡಿದ್ದರು.