ETV Bharat / state

ಹಾಸನ: ರಾತ್ರೋರಾತ್ರಿ ಜಮೀನಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ

ಟೊಮೆಟೊ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗುತ್ತಿದೆ. ರಾತ್ರೋರಾತ್ರಿ ಹಾಸನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದಾರೆ.

tomato
ಟೊಮೆಟೊ
author img

By

Published : Jul 6, 2023, 10:38 AM IST

Updated : Jul 6, 2023, 12:44 PM IST

ಹಾಸನದಲ್ಲಿ ಟೊಮೆಟೊ ಕಳ್ಳತನ

ಹಾಸನ : ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಸದ್ಯಕ್ಕೆ ಟೊಮೆಟೊ ಬೆಳೆದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಭಾರಿ ಡಿಮ್ಯಾಂಡ್‌ ಬಂದಿದೆ. ಇನ್ನೊಂದೆಡೆ, ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಬೆಳೆ ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದ್ದು, ಕಳ್ಳರ ಹಾವಳಿ ಹೆಚ್ಚಾಗಿದೆ.

ಹಾಸನ ಜಿಲ್ಲೆಯ ಜಮೀನಿನಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನವಾಗಿದೆ ಎಂದು ರೈತ ಕುಟುಂಬವೊಂದು ಹೇಳಿದೆ. ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೆಟೊ ಕಳ್ಳತನ ಮಾಡಲಾಗಿದ್ದು, ರಾತ್ರೋರಾತ್ರಿ 2 ಎಕರೆ ಜಮೀನಿನಲ್ಲಿದ್ದ ತರಕಾರಿಯನ್ನು ವಾಹನದಲ್ಲಿ ಕಳ್ಳರು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

"ಹುರುಳಿ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿದ ಬಳಿಕ ಸಾಲ ಮಾಡಿ ಟೊಮೆಟೊ ಬೆಳೆ ಬೆಳೆದಿದ್ದೆವು. ಬೆಂಗಳೂರಿನಲ್ಲಿ ಕೆಜಿ ಟೊಮೆಟೊ 120 ರೂ. ತಲುಪಿದ್ದರಿಂದ ಬೆಳೆ ಕತ್ತರಿಸಿ ಮಾರುಕಟ್ಟೆಗೆ ಸಾಗಿಸಲು ಮುಂದಾಗಿದ್ದೆವು. ಈ ಬಾರಿ ಉತ್ತಮ ಫಸಲು ಬಂದಿದ್ದು, ಬೆಲೆಯೂ ಹೆಚ್ಚಿತ್ತು. ಆದ್ರೆ, ರಾತ್ರಿ ಕಳ್ಳರು 50-60 ಚೀಲ ಟೊಮೆಟೊ ತೆಗೆದುಕೊಂಡು ಹೋಗಿದ್ದಲ್ಲದೆ, ಉಳಿದ ಬೆಳೆಯನ್ನೂ ನಾಶಪಡಿಸಿದ್ದಾರೆ. ಕೆಳಗಡೆ ಹೊಲದಲ್ಲಿ ಸಂಪೂರ್ಣ ಲೂಟಿ ಮಾಡಿ ಹೋಗಿದ್ದಾರೆ" ಎಂದು ರೈತ ಮಹಿಳೆ ಧರಣಿ ಕಣ್ಣೀರು ಹಾಕಿದರು.

ಇದನ್ನೂ ಓದಿ : ನಾಳೆಯಿಂದ ಚೆನ್ನೈನ ಪಡಿತರ ಅಂಗಡಿಗಳಲ್ಲಿ ಟೊಮೆಟೊ ಮಾರಾಟ : ಸಚಿವ ಪೆರಿಯಕರುಪ್ಪನ್

"ನಮ್ಮ ತೋಟದಲ್ಲಿ ತರಕಾರಿ ಲೂಟಿ ಮಾಡಿರೋದು ಇದೇ ಮೊದಲು. ಈ ಹಿಂದೆ ಶುಂಠಿ ಕಳ್ಳತನ ಮಾಡಿದ್ರು. ಬೆಲೆ ಜಾಸ್ತಿ ಆಗಿದೆ ಅಂತ ತರಕಾರಿ ಕದ್ದು ತೆಗೆದುಕೊಂಡು ಹೋಗಿದ್ದಾರೆ. ರಾತ್ರಿ ಹೊಲದಲ್ಲೇ ಕುಡಿದು, ಪಾರ್ಟಿ ಮಾಡಿ ಕಳ್ಳರು ಪರಾರಿಯಾಗಿದ್ದಾರೆ. ಈ ಬಾರಿ ಬೆಳೆ ಕೂಡ ಚೆನ್ನಾಗಿ ಬಂದಿತ್ತು, ತುಂಬಾ ಸಾಲ ಕೂಡ ಮಾಡಿಕೊಂಡಿದ್ದೆ. ಆದ್ರೆ, ಎಲ್ಲ ಹಣ ಕಳ್ಳರ ಪಾಲಾಗಿದೆ" ಎಂದು ಧರಣಿ ಅವರ ಪುತ್ರ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : Tomato price : ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆ; ಕಂಗಾಲಾದ ಗ್ರಾಹಕರಿಗೆ ಗುಡ್​ ನ್ಯೂಸ್​

ಇಂದು ಬೆಳಗ್ಗೆ ಧರಣಿ ಅವರು ತಮ್ಮ ಜಮೀನಿನ ಬಳಿ ಹೋದಾಗ ಟೊಮೆಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : Tomato price : ಸೇಬಿಗಿಂತ ದುಬಾರಿಯಾದ ಟೊಮೆಟೊ !

ಇನ್ನು ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತರಕಾರಿ ಇಳುವರಿ ತೀವ್ರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ಇದು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ : Tomato rate : ಗಗನಕ್ಕೇರಿದ ತರಕಾರಿ ಬೆಲೆ , 120ರ ಗಡಿ ದಾಟಿದ ಟೊಮೆಟೋ.. ಹುಬ್ಬಳ್ಳಿ ಮಂದಿ ಕಂಗಾಲು

Last Updated : Jul 6, 2023, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.