ಹಾಸನ/ಅರಕಲಗೂಡು: ಅಜ್ಜಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಇಳಿಸಿ ಚಿನ್ನಾಭರಣ ಕಿತ್ತುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅರಸೀಕೆರೆ ಜೇನುಕಲ್ ಸಿದ್ದೇಶ್ವರ ಸ್ವಾಮಿ ಜಾತ್ರೆಗೆ ಹೋಗಲು ಅರಕಲಗೂಡು ಬಸ್ ನಿಲ್ದಾಣದ ಬಳಿ ಕುಳಿತ್ತಿದ್ದ ಹೊನ್ನಮ್ಮ (75) ವಂಚನೆಗೆ ಒಳಗಾದ ವೃದ್ಧೆ. ಅಪರಿಚಿತ ವ್ಯಕ್ತಿಗಳು ಪುಸಲಾಯಿಸಿ ಕಾರಿನಲ್ಲಿ ಕೂರಿಸಿಕೊಂಡು ಹೆರಗು ಬಳಿ ಇರುವ ಎರೆಬಾರೆ ಕಾಡು ಪ್ರದೇಶದಲ್ಲಿ ಕಾರಿನಿಂದ ಕೆಳಗಿಳಿಸಿ ಕಿವಿಯಲ್ಲಿದ್ದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.