ಹಾಸನ: ದರೋಡೆಕೋರರೆ ಪ್ರೀ ವೆಡ್ಡಿಂಗ್ ಬುಕ್ಕಿಂಗ್ ಮಾಡಿ, ಶೂಟಿಂಗ್ ತಂಡದೊಂದಿಗೆ ಶೂಟ್ಗೆ ಹೋಗುವಾಗ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಶಂಕರನಹಳ್ಳಿ ಸಮೀಪ ಇಂದು ಬೆಳಗ್ಗೆ 6.20ರ ಸುಮಾರಿಗೆ ನಡೆದಿದೆ.
ಜಸ್ಟ್ ಡಯಲ್ ಮೂಲಕ ಪ್ರೀ ವೆಡ್ಡಿಂಗ್ ಬುಕ್ಕಿಂಗ್ ಮಾಡಿದ ದರೋಡೆಕೋರರು ಬಳಿಕ ಕಾರಿನಲ್ಲಿ ಹಾಸನದ ಶೆಟ್ಟಿಹಳ್ಳಿ ಚರ್ಚ್ಗೆ ಶೂಟ್ ತಂಡದೊಂದಿಗೆ ಹೋಗುತ್ತಿದ್ದರು. ಆಗ ಕ್ಯಾಮರಾ ಮೆನ್ಗಳಾದ ಉಮೇಶ್ ಹಾಗೂ ವಿಕ್ಕಿ ಎಂಬುವರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಲಾಂಗು ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಹಲ್ಲೆ ಮಾಡಿದ್ದಲ್ಲದೆ, ದರೋಡೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶೂಟ್ಗಾಗಿ ಕೊಂಡೊಯ್ಯುತ್ತಿದ್ದ ಸುಮಾರು 6 ರಿಂದ 7ಲಕ್ಷ ಮೌಲ್ಯದ ಒಂದು ಕ್ಯಾಮರಾ, ಒಂದು ಡ್ರೋಣ್ ಹಾಗೂ ಮೊಬೈಲ್ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.