ETV Bharat / state

ಪೋಲೀಸರ ಯಶಸ್ವಿ ಕಾರ್ಯಾಚರಣೆ: ಕುರಿ, ಟಗರು ಕಳ್ಳತನ ಮಾಡಿದ್ದ ಆರೋಪಿ ಬಂಧನ - ಕುರಿ, ಟಗರು ಕಳ್ಳತನ ಮಾಡಿ

ಅರಕಲಗೂಡು ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಕುರಿ, ಟಗರು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಸಿದ್ದಾರೆ.

Theft arrest
ಆರೋಪಿ ಬಂಧನ
author img

By

Published : Sep 10, 2020, 10:37 PM IST

ಅರಕಲಗೂಡು: ಅರಕಲಗೂಡು ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ 1.5 ಲಕ್ಷ ಬೆಲೆ ಬಾಳುವ 15 ಕುರಿ ಹಾಗೂ 4 ಟಗರು ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಅಸ್ಲಂ ಪಾಷ ಎಂಬುವರು ಅರಕಲಗೂಡು ಬೈಪಾಸ್ ರಸ್ತೆಯ ಉರ್ದು ಶಾಲೆಯ ಹಿಂಬಾಗ ಕುರಿ ಹಾಗೂ ಟಗರುಗಳನ್ನು ಶೆಡ್ ಮುಂಬಾಗ ಮೇಯಲು ಬಿಟ್ಟು ಕೆಲಸದ ನಿಮಿತ್ತ ಸ್ವಲ್ಪ ಸಮಯ ಹೊರಗಡೆ ಹೋಗಿದ್ದಾರೆ‌. ಇದನ್ನೇ ಹೊಂಚು ಹಾಕಿ ಕಾದು ಕುಳಿತ್ತಿದ್ದ ಕಳ್ಳ ಅವಕಾಶ‌ ಮಾಡಿಕೊಂಡು ಶೆಡ್​ನಲ್ಲಿದ್ದ ಎಲ್ಲಾ 15 ಕುರಿಗಳು ಹಾಗೂ 4 ಟಗರುಗಳನ್ನು ದಿನಾಂಕ 20/08/2020 ರಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.

ಕುರಿ, ಟಗರು ಕಳ್ಳತನ ಮಾಡಿದ್ದ ಆರೋಪಿ ಬಂಧನ

ಈ ಬಗ್ಗೆ ಅಸ್ಲಂಪಾಷ ಅರಕಲಗೂಡು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿ ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಜಾಬಗೆರೆ ಗ್ರಾಮದ ರಮೇಶ ನಾಯಕ‌.ಜೆ.ಪಿ. ಎಂಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು, ಅರಕಲಗೂಡು ವೃತ್ತ ಕಚೇರಿಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆಗೆ
ಒಳಪಡಿಸಿ 15 ಲಕ್ಷ ಬೆಲೆಬಾಳುವ 15 ಕುರಿ ಹಾಗೂ 2 ಟಗರುಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ಒಂದು ಆಟೋವನ್ನು ವಶಪಡಿಸಿಕೊಂಡು ಮಾಲೀಕರಿಗೆ ಕುರಿಗಳನ್ನು ಮರಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.