ಹಾಸನ: ನಿನ್ನೆಯಿಂದ ಹಾಸನಾಂಬೆಯ ದರ್ಶನ ಆರಂಭವಾಗಿದೆ. ಈ ಹಿನ್ನೆಲೆ ನಗರದ ಹೊರವಲಯದಲ್ಲಿ ನಿರ್ಮಿಸಲಾಗಿದ್ದ ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಾಗತ ಕಮಾನು ಬೆಳಗ್ಗೆ ಮುರಿದುಬಿದ್ದಿದೆ.
ನಗರದ ಹೊರವಲಯದಲ್ಲಿನ ಭೂವನಹಳ್ಳಿ ಬೈಪಾಸ್ ಮತ್ತು ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸ್ವಾಗತ ಕಮಾನು ಏಕಾಏಕಿ ಮುರಿದುಬಿದ್ದಿದೆ. ಬೆಳಗ್ಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಜೋರಾದ ಗಾಳಿ ಜೊತೆಗೆ ತುಂತುರು ಮಳೆ ಆಗಿದೆ. ಗಾಳಿಯ ರಭಸಕ್ಕೆ ಸ್ವಾಗತ ಕಮಾನು ಮುರಿದುಬಿದ್ದಿದೆ.
ಈ ಅವಘಡದ ವೇಳೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಇದಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಮಾಡಿರುವುದೇ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.