ETV Bharat / state

ಆಸ್ಪತ್ರೆಯ ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ರೋಗಿ ಪತಿಗೆ ಥಳಿಸಿದ ಸೆಕ್ಯುರಿಟಿ ಗಾರ್ಡ್.. ವಿಡಿಯೋ ವೈರಲ್​​ - The security guard who beat the patient's husband

ಹಾಸನದ ಸರ್ಕಾರಿ ಹೈಟೆಕ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಸೆಕ್ಯುರಿಟಿ ಗಾರ್ಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

the-security-guard-who-beat-the-patients-husband
author img

By

Published : Sep 9, 2019, 3:27 PM IST

ಹಾಸನ: ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಪತಿಗೆ ಹಾಸನದ ಸರ್ಕಾರಿ ಹೈಟೆಕ್ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾನೆ.

ಸಿಬ್ಬಂದಿ ಹಾಗೂ ರೋಗಿ ಸಂಬಂಧಿಗೆ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೋಗಿ‌‌ ಸಂಬಂಧಿ‌ಗೆ ಸುಮಾರು‌ 4-5 ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಿಬ್ಬಂದಿ ಹಲ್ಲೆ ಮಾಡಿರುವುದು ಮೊಬೈಲ್​ನಲ್ಲಿ ಸೆರೆಯಾಗಿದೆ.

ರೋಗಿಯ ಪತಿಗೆ ಥಳಿಸಿದ ಸೆಕ್ಯುರಿಟಿ ಗಾರ್ಡ್..

ಪತ್ನಿ‌‌ ಹೆರಿಗೆ ವಾರ್ಡಿನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ನನ್ನ‌ ಮೇಲೆ ಹಲ್ಲೆ ‌ಮಾಡಿದ್ದಾರೆ ಎಂದು ಹಾಸನದ ಹೆಚ್.ಮೈಲಾನಹಳ್ಳಿ ನಿವಾಸಿ ಸಂದೀಪ್ ಎಂಬುವರು ಅಳಲು ತೋಡಿಕೊಂಡಿದ್ದಾರೆ. ಸದ್ಯ ಆಸ್ಪತ್ರೆ ಸಿಬ್ಬಂದಿ ರೋಗಿ ಪತಿ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ವೈರಲ್​​ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಹಾಸನ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದ ರೋಗಿಯ ಪತಿ ಸೆಕ್ಯೂರಿಟಿ ಗಾರ್ಡ್ ಗಳು‌ ಹಲ್ಲೆ ಮಾಡಿರುವ ಘಟನೆ ನಡೆದಿದೆ.

Body:ಹಾಸನದ ಸರ್ಕಾರಿ ಹೈಟೆಕ್ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿ ಸಂಬಂಧಿಗೆ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾತಿನ ಚಕಾಮಕಿ ನಡೆದು ರೋಗಿ‌‌ ಸಂಬಂಧಿ‌ ಮೇಲೆ ಆಸ್ಪತ್ರೆ ಸಿಬ್ಬಂದಿಗಳು ಹಲ್ಲೆ ಮಾಡಿರುವುದು‌ ಸಿಸಿ ಕ್ಯಾಮರಾ ದಲ್ಲಿ ‌ಸೆರೆಯಾಗಿದೆ. ನನ್ನ ಪತ್ನಿ‌‌ಹೆರಿಗೆ ವಾರ್ಡಿನಲ್ಲಿ‌ ಚಿಕಿತ್ಸೆಗೆ ದಾಖಲಾಗಿದ್ದು, ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ‌ ನನ್ನ‌ ಮೇಲೆ ಹಲ್ಲೆ ‌ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಹಾಸನ ತಾಲ್ಲೂಕಿನ ಹೆಚ್ ಮೈಲಾನಹಳ್ಳಿಯ ಸಂದೀಪ್ ತಿಳಿಸಿದ್ದಾರೆ.
ಸುಮಾರು‌ನಾಲ್ಕೈದು‌ ಸಿಬ್ಬಂದಿಗಳು‌ ಸೇರಿಕೊಂಡು ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದರು ಎಂದು ಅಳಲು ತೋಡಿಕೊಂಡಿರುವ ಸಂದೀಪ್ ಗುತ್ತಿಗೆ ಆಧಾರಿತ ಸಿಬ್ಬಂದಿಗಳು ರೋಗಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Conclusion:ಸದ್ಯ ಆಸ್ಪತ್ರೆ ಸಿಬ್ಬಂದಿ ರೋಗಿ ಮೇಲೆ ದಬ್ಬಾಳಿಕೆ ಮಾಡಿದ ವಿಡಿಯೋ ಭಾರೀ ವೈರಲ್​​ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

-ಅರಕೆರೆ ಮೋಹನಕುಮಾರ, ಈಟಿವಿಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.