ಸಕಲೇಶಪುರ (ಹಾಸನ): ತಾಲೂಕಿನ ಮಠಸಾಗರ ಗ್ರಾಮದ ಬಳಿ ಕೊಲೆಯಾದ ರೀತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಅದೇ ಗ್ರಾಮದ ಎ.ಸ್ವಾಮಿ (53) ಎಂಬಾತನ ಶವ ಇದಾಗಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸುಮಾರು 25 ವರ್ಷಗಳಿಂದ ಕಾಫಿ ಮಂಡಳಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾಮಿ, ಕಳೆದ ರಾತ್ರಿ ಅದೇ ಗ್ರಾಮದ ವ್ಯಕ್ತಿಯೊಬ್ಬರ ಶವ ಸಂಸ್ಕಾರಕ್ಕೆ ತೆರಳಿದ್ದರು. ಆದರೆ, ಶವಸಂಸ್ಕಾರಕ್ಕೆ ಹೋದ ವ್ಯಕ್ತಿ ಈಗ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಠಸಾಗರದಿಂದ ಬಾಳ್ಳುಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿರುವುದು ಕಂಡುಬಂದಿದೆ. "ಮುಂಜಾನೆ ದಾರಿಹೋಕರೊಬ್ಬರು ನೋಡಿ ವಿಷಯ ಮುಟ್ಟಿಸಿದ್ದಾರೆ. ನಮ್ಮ ತಂದೆ ತುಂಬಾ ಸೌಮ್ಯ ಸ್ವಭಾವದವಾರಗಿದ್ದು, ಯಾರೋ ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ" ಎಂದು ಮಗ ಪ್ರವೀಣ್ ಆರೋಪ ಮಾಡಿದ್ದಾರೆ. ಪಟ್ಟಣ ಠಾಣಾ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧ ಶಂಕಿಸಿ ಜೋಡಿ ಕೊಲೆ: ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ ಚಿಕ್ಕೋಡಿ ಕೋರ್ಟ್