ETV Bharat / state

ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾದ ಸರ್ಕಾರ, ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ: ಈಟಿವಿ ಭಾರತ ಇಂಪ್ಯಾಕ್ಟ್‌ - ಮೂಲ ಸೌಕರ್ಯಗಳ ಕೊರತೆ

ಹಾಸನದ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡಕ್ಕೆ ಪರ್ಯಾಯವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

Hasana District library
ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾದ ಸರ್ಕಾರ
author img

By

Published : Dec 27, 2019, 10:19 AM IST

ಹಾಸನ: ನಗರದ ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾಗಿರುವ ಸರ್ಕಾರ, ಇಲ್ಲಿರುವ ಹಳೆಯ ಕಟ್ಟಡಕ್ಕೆ ಪರ್ಯಾಯವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಗ್ರಂಥಾಲಯದ ಅವ್ಯವಸ್ಥೆಗೆ ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಮೂಲಸೌಕರ್ಯಗಳ ಸಮಸ್ಯೆಗಳ ಕೊರತೆಗೆ ನಲುಗಿದ್ದ ಈ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಸಾವಿರಾರು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಾ ವಯೋಮಾನದವರು ಬರುತ್ತಾರೆ. ಆದರೆ, ಓದಲು ಕೊಠಡಿ ಸಮಸ್ಯೆ, ಪೂರಕ ವಾತಾವರಣ ಇಲ್ಲವಾಗಿತ್ತು. ಅಲ್ಲದೆ, ಪುಸ್ತಕಗಳ ಕೊರತೆಯೂ ಹೆಚ್ಚಿತ್ತು.

ಶಂಕುಸ್ಥಾಪನೆ ನೆರವೇರಿಸಿದ ಸಚಿವ ಮಾಧುಸ್ವಾಮಿ

ಇದನ್ನೂ ಓದಿ...ಪ್ರಾಚೀನ ಕೇಂದ್ರ ಗ್ರಂಥಾಲಯಕ್ಕಿಲ್ಲ ಅಭಿವೃದ್ಧಿ...ಶಾಪ ಹಾಕುತ್ತಿರುವ ಸ್ಪರ್ಧಾರ್ಥಿಗಳು

ಈ ಕುರಿತು 'ಈಟಿವಿ ಭಾರತ' 'ಪ್ರಾಚೀನ ಕೇಂದ್ರ ಗ್ರಂಥಾಲಯ ಅಭಿವೃದ್ಧಿ...ಶಾಪ ಹಾಕುತ್ತಿರುವ ಸ್ಪರ್ಧಾರ್ಥಿಗಳು' ಎಂಬ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಮೊದಲ ಹಂತವಾಗಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. ಇದಕ್ಕಾಗಿ ₹ 4 ಕೋಟಿ ಅನುದಾನದಲ್ಲಿ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ. ಓದುಗರ ಹಿತದೃಷ್ಟಿಯಿಂದ ಜಿಲ್ಲಾ ಗ್ರಂಥಾಲಯವನ್ನು‌ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿರುವುದು ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ಸಂತಸ ತಂದಿದೆ.

Intro:ಹಾಸನ: ನಗರ ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಸಲು ರಾಜ್ಯ ಸರ್ಕಾರ ಮುಂದಾಗಿದ್ದು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಮಾಧುಸ್ವಾಮಿಯವರು ಸುಮಾರು 2 ಕೋಟಿ ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದರು.

ಇದು ಗ್ರಂಥಾಲಯ ಅಭಿವೃದ್ಧಿಯ ಪ್ರಥಮ ಹೆಜ್ಜೆಯಾಗಿದೆ. ಗ್ರಂಥಾಲಯದ ‌ಅಭಿವೃದ್ದಿಗೆ 4 ಕೋಟಿ ಅನುದಾನದಲ್ಲಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗೆ ಸರಕಾರದ ಅಯವ್ಯಯದಿಂದ ಡಿಜಟಲೀಕರಣ ಮಾಡಲು ಅನುದಾನ ಬಿಡುಗಡೆ ಮಾಡಿದೆ. ನಗರ ಹೃಯಯ ಭಾಗದಲ್ಲಿದ್ದಂತ ಜಿಲ್ಲಾ ಗ್ರಂಥಾಲಯ ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದ್ದು, ಈ ಬಗ್ಗೆ ಓದುಗರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಲೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದು ಓದುತ್ತಿದ್ದಾರೆ ಆದರೆ ಓದಲು ಕೊಠಡಿ ಸಮಸ್ಯೆ ಎದುರಾಗಿದೆ ಪರ್ಯಾಯ ವಾಗಿ ಬೇರೆ ಕೊಠಡಿ ಇದ್ದರೂ ಪೂರಕ ವಾತಾವರಣ ಇಲ್ಲದೆ ಓದುಗರು‌ ಸಮಸ್ಯೆ ಎದುರಿಸುವಂತಾಗಿದೆ. ದಿನಪತ್ರಿಕೆ, ವಾರ ಪತ್ರಿಕೆ, ವಿವಿಧ ವಿಷಯಗಳ ಪುಸ್ತಕ ಓದಲು ವಿದ್ಯಾರ್ಥಿಗಳು ಸೇರಿದಂತೆ ವಯೋಮಾನದ ವರು ಸಾಕಷ್ಟು ಮಂದಿ ಕೂಡ ತಿಳಿಸುತ್ತಿದ್ದರು.

ಈ ಬಗ್ಗೆ ಈಟಿವಿ ಭಾರತ ಕೂಡ ಪ್ರಾಚೀನ ಕೇಂದ್ರ ಗ್ರಂಥಾಲಯ ಅಭಿವೃದ್ಧಿ... ಶಾಪ ಹಾಕುತ್ತಿರುವ ಸ್ಪರ್ಧಾರ್ಥಿಗಳು ಎಂಬ ಸುದೀರ್ಘ ವರದಿಯನ್ನು ಬಿತ್ತರಿಸಿತ್ತು. ಇದರ ಬಗ್ಗೆ ಸರ್ಕಾರವೇ ಎಚ್ಚೆತ್ತುಕೊಂಡು ಮೊದಲ ಹಂತವಾಗಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದು ಎಂದೇ ಹೇಳಬಹುದು.

ಹಳೆಯ ಕಟ್ಟಡವನ್ನು ಪರಂಪರೆಯಲ್ಲಿ ಇದರ ಪರ್ಯಾಯವಾಗಿ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿದೆ ಓದುಗರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೊಠಡಿ ಹಾಗೂ ಪುಸ್ತಕಗಳಿಗೆ ಯಾವುದೇ ರೀತಿ ಕೊರತೆಯಾಗದಂತೆ ಗ್ರಂಥಾಲಯ ಅಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಿದೆ.

ಒಟ್ಟಿನಲ್ಲಿ‌ ಹಾಸನದ ಹೃದಯಭಾಗದಲ್ಲಿ ಓದುಗರ‌ ದಾಹ ತೀರಿಸುತ್ತಿರುವ ಜಿಲ್ಲಾ ಗ್ರಂಥಾಲಯವನ್ನು‌ ಓದುಗರ ಹಿತದೃಷ್ಟಿಯಿಂದ ಮೇಲ್ದರ್ಜೆಗೆ‌ ಏರಿಸಲು ರಾಜ್ಯ ಸರಕಾರ ಮುಂದಾಗಿರುವುದು ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ಸಂತಸತಂದಿದೆ.

ಬೈಟ್ 1 : ಜೆ.ಸಿ. ಮಾಧುಸ್ವಾಮಿ, ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ.

ಬೈಟ್ 2 : ಡಾ. ಸತೀಶ್‌ಕುನಾರ್.ಎಸ್‌. ಹೊಸಮನಿ, ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.