ETV Bharat / state

ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.. ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿಕೆ! - ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರ ಸ್ಥಾಪನೆ

ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷ
author img

By

Published : Aug 11, 2019, 6:03 PM IST

Updated : Aug 11, 2019, 6:09 PM IST

ಹಾಸನ‌: ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜಿಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟೋಪಚಾರ, ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ಆಹಾರ ಇಲಾಖೆ‌ ಮೂಲಕ ಸಲ್ಲಿಸಿದ್ದ ಮನವಿಯ ಮೇರೆಗೆ ಮೈಸೂರಿನ ಸಿಎಫ್‌ಟಿಅರ್‌ಐನಿಂದ 5000 ನಿರಾಶ್ರಿತರಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ಪೂರೈಕೆಯಾಗಿದ್ದು, ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆಶ್ರಯ ತಾಣಗಳಿಗೆ‌ ರಾವಾನಿಸಲಾಗಿದೆ ಎಂದರು. ಸಿಎಫ್‌ಟಿಆರ್‌ಐನಿಂದ ಚಪಾತಿ, ಗೊಜ್ಜು ಹಾಗೂ ಕುಡಿಯುವ ನೀರನ್ನು ಪೂರೈಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಆಹಾರ ಪೊಟ್ಟಣಗಳನ್ನು ತೆರೆದ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಿ ನಂತರ ರವಾನಿಸಲಾಯಿತು.

ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ: ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷ

ಅಲ್ಲದೆ ಆಹಾರ ಮತ್ತು ನಾಗರಿಕ ಸರಬರಾಜು‌ ಇಲಾಖೆ ವತಿಯಿಂದ 5000 ವಿಶೇಷ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಇದರಲ್ಲಿ 10kg ಅಕ್ಕಿ ,1ಕೆಜಿ ತೊಗರಿಬೇಳೆ,1ಕೆಜಿ ಉಪ್ಪು,1ಕೆಜಿ‌ ಸಕ್ಕರೆ, 1ಕೆಜಿ ಎಣ್ಣೆ, 5 ಲೀಟರ್ ಸೀಮೆಎಣ್ಣೆಯನ್ನೂ ಸಂತ್ರಸ್ತರ ಕುಟುಂಬಗಳಿಗೆ ವಿತರಿಸಲಾಗುತ್ತಿದೆ. ಹಾಸನ ಡೈರಿಯಿಂದಲೂ ನಿರಾಶ್ರಿತರ ಬಳಕೆಗೆ ತಕ್ಷಣಕ್ಕೆ 10,000 ಟೆಟ್ರಾ ಪ್ಯಾಕ್ ಸುವಾಸಿತ ಹಾಲು ಪೂರೈಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Intro:ಹಾಸನ‌ : ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜಲ್ಲೆಯ ವಿವಿಧೆಡೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಊಟೋಪಚಾರ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು
ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

Body:ಆಹಾರ ಇಲಾಖೆ‌ ಮೂಲಕ ಸಲ್ಲಿಸಿದ್ದ ಮನವಿಯ ಮೇರೆಗೆ ಮೈಸೂರಿನ ಸಿ.ಎಫ್.ಟಿ.ಅರ್.ಐ ನಿಂದ 5000 ನಿರಾಶ್ರಿತರಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ಪೂರೈಕೆಯಾಗಿದ್ದು, ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆಶ್ರಯ ತಾಣಗಳಿಗೆ‌ರಾವಾನಿಸಲಾಗಿದೆ ಎಂದರು.

ಸಿ.ಏಫ್.ಟಿ.ಆರ್.ಐ ನಿಂದ ಚಪಾತಿ ,ಗೊಜ್ಜು ಹಾಗೂ ಕುಡಿಯುವ ನೀರನ್ನು ಪೂರೈಸಲಾಗಿದ್ದು, ಸುರಕ್ಷಿತೆ ದೃಷ್ಟಿಯಿಂದ ಆಹಾರ ಪೊಟ್ಟಣಗಳನ್ನು ತೆರೆದ ಗುಣಮಟ್ಟದ ಮಾದರಿ ಪರೀಕ್ಷೆ ನಡೆಸಿ ನಂತರ ರವಾನಿಸಲಾಯಿತು.

ಇದಲ್ಲದೆ ಆಹಾರ ಮತ್ತು ನಾಗರೀಕ ಸರಬರಾಜು‌ ಇಲಾಖೆ ವತಿಯಿಂದ 5000 ವಿಶೇಷ ಆಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ.
ಇದರಲ್ಲಿ 10kg ಅಕ್ಕಿ ,1ಕ.ಜೆ‌ ತೊಗರಿಬೇಳೆ,1ಕೆ.ಜಿ .ಉಪ್ಪಿ,1ಕೆ.ಜಿ‌ ಸಕ್ಕರೆ .1ಕೆ.ಜಿ.ಎಣ್ಣೆ 5ಲೀಟರ್ ಸೀಮೆಎಣ್ಣೆ ಯನ್ನು ಸಂತ್ರಸ್ತರ ಕುಟುಂಬಗಳಿಗೆ ವಿತರಿಸಲಾಗುತ್ತಿದೆ.

ಹಾಸನ ಡೈರಿ ಯಿಂದಲೂ ನಿರಾಶ್ರಿತರ ಬಳಕೆಗೆ ತಕ್ಷಣಕ್ಕೆ 10,000 ಟೆಟ್ರಾ ಪ್ಯಾಕ್ ಸುವಾಸಿತ ಹಾಲು ಪೂರೈಕೆ ಮಾಡಲಾಗಿದೆ.

Conclusion:ಅಪರ ಜಿಲ್ಲಾಧಿಕಾರಿ ವೈಶಾಲಿ .ಡಿ.ಹೆಚ್.ಓ ಡಾ ಸತೀಶ್, ಆಹಾರ ಇಲಾಖೆ ಉಪನಿ ರ್ದೇಶಕಿ ಸವಿತ , ವಿಶೇಷ ಭೂ ಸ್ವಾಧಿನಾಧಿಕಾರಿ ಗಿರೀಶ್ ನಂದನ್,ಶ್ರೀನಿವಾಸ ಗೌಡ, ಹಾಸನ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ‌ಕಲ್ಪಶ್ರಿ,ಮುಜರಾಯಿ ತಹಶಿಲ್ದಾರ್ ಶಾರದಾಂಬ, ಕಲ್ಯಾಣ ಅಧಿಕಾರಿ ಹರ್ಷ, ತಹಶಿಲ್ದಾರ ಮೆಘನಾ, ಶಿರಿನ್ ತಾಜ್, ಸಕಲೇಶಪುರ ‌ಪಟ್ಟಣ ಪಂಚಾಯತ್ ಎಂಜಿನಿಯರ್ ಪ್ರವೀಣ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕಿ ಜಾನಕಿ ಮತ್ತಿತರರು ಹಾಜರಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Last Updated : Aug 11, 2019, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.