ETV Bharat / state

ಬುದ್ಧಿವಾದ ಹೇಳಿದ ತಂದೆ-ತಾಯಿ: ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿ - ಅಗ್ನಿ ಶಾಮಕದಳದ ಸಿಬ್ಬಂದಿ

ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆಂದು ತಂದೆ-ತಾಯಿ ಬುದ್ಧಿವಾದ ಹೇಳಿದ್ದು, ಇದರಿಂದ ಮನನೊಂದ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮನನೊಂದು ವಿದ್ಯಾರ್ಥಿ ಕೆರೆಗೆ ಹಾರಿ ಆತ್ಮಹತ್ಯೆ..
author img

By

Published : Sep 12, 2019, 8:48 PM IST

ಹಾಸನ: ಯಾವಾಗ್ಲೂ ಮೋಬೈಲ್ ನೋಡುವುದನ್ನ ಬಿಟ್ಟು ಓದ್ಕಳಪ್ಪಾ ಅಂತಾ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮನನೊಂದು ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ..

ನಗರದ ವಿಜಯ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ ಅಮಿತ್ ಮೃತ ವಿದ್ಯಾರ್ಥಿ. ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗಿದ ಅಮಿತ್, ಎಂದಿನಂತೆ ಆಟವಾಡಿ ಮನೆಗೆ ಬಂದಿದ್ದಾನೆ. ಆತ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆಂದು ಆತನ ತಂದೆ-ತಾಯಿ ನೀನು ಮೊಬೈಲ್ ನೋಡುವುದು ಜಾಸ್ತಿಯಾಗಿದೆ. ಓದಿನ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಕಡಿಮೆ ಅಂಕ ತೆಗೆದಿದ್ದೀಯ. ನೀನು ಓದಿ ಒಳ್ಳೆ ಕೆಲಸ ತಗೋತೀಯಾ ಅಂತೆಲ್ಲಾ ಕನಸನ್ನಿಟ್ಟುಕೊಂಡಿದ್ದೀವಿ ಎಂದು ಬುದ್ಧಿಮಾತು ಹೇಳಿದ್ದಾರೆ.

ಇದರಿಂದ ಮನನೊಂದ ಅಮಿತ್ ರಾತ್ರಿಯಾಗುತ್ತಿದ್ದಂತೆ ಲೇಸ್ ತರುತ್ತೇನೆಂದು ₹10 ತೆಗೆದುಕೊಂಡು ಹೋದವನು, ತಂದೆ ಹರೀಶ್‌ಗೆ ಕರೆ ಮಾಡಿ ಸತ್ಯಮಂಗಲ ಕೆರೆಗೆ ಧುಮುಕಿದ್ದಾನೆ. ಕೂಡಲೇ ಗಾಬರಿಯಿಂದ ಮನೆಯವರು ಕೆರೆಯತ್ತ ಓಡಿ ಬಂದು ಎಷ್ಟೇ ಹುಡುಕಿದ್ರು ಅಮಿತ್ ಪತ್ತೆಯಾಗಿಲ್ಲ. ನಂತರ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ದಿನವಿಡೀ ಕಾರ್ಯಾಚರಣೆ ನಡೆಸಿದ್ರೂ ಅಮಿತ್ ಚಪ್ಪಲಿ ಹೊರತುಪಡಿಸಿ ಮತ್ತಾವ ಕುರುಹು ಪತ್ತೆಯಾಗಿಲ್ಲ. ಇಂದು ಸಂಜೆಯ ವೇಳೆಗೆ ಅಮಿತ್‌ನ ಮೃತದೇಹ ತೇಲಿಕೊಂಡು ದಡದತ್ತ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Intro:ಹಾಸನ: ಯಾವಾಗ್ಲೂ ಮೋಬೈಲ್ ನೋಡುವುದನ್ನ ಬಿಟ್ಟು ಓದ್ಕಳಪ್ಪ ಅಂತಾ ಬುದ್ದಿವಾದ ಹೇಳಿದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ನಗರದ ವಿಜಯ ಶಾಲೆಯಲ್ಲಿ ಒಂಬತ್ತನೆ ತರಗತಿ ಓದುತ್ತಿದ್ದ ಅಮಿತ್ ಮೃತ ವಿದ್ಯಾರ್ಥಿ, ಮಂಗಳವಾರ ಸಂಜೆ ಎಂದಿನಂತೆ ಶಾಲೆಯಿಂದ ಮನೆಗೆ ಬಂದ ಅಮಿತ್ ಎಂದಿನಂತೆ ಆಟವಾಡಿ ಮನೆಗೆ ಬಂದಿದ್ಧನೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆಂದು ಅಪ್ಪ-ಅಮ್ಮ ನೀನು ಮೊಬೈಲ್ ನೋಡುವುದು ಜಾಸ್ತಿಯಾಗಿದೆ, ಓದಿನ ಕಡೆ ಗಮನ ಹರಿಸುತ್ತಿಲ್ಲ, ಅದಕ್ಕೆ ಕಡಿಮೆ ಅಂಕ ತೆಗೆದಿದ್ದೀಯ ನೀನು ಓದಿ ಒಳ್ಳೆ ಕೆಸಲ ತಗೋತೀಯಾ ಅಂತೆಲ್ಲಾ ಕನಸನ್ನಿಟ್ಟುಕೊಂಡಿದ್ದಿವಿ ಅದನ್ನ ಉಳಿಸಪ್ಪ ಅಂತ ೪ ಬುದ್ದಿಮಾತು ಹೇಳಿದ್ದಾರೆ, ಇಷ್ಟಕ್ಕೆ ಮನ ನೊಂದ ಅಮಿತ್ ರಾತ್ರಿಯಾಗುತ್ತಿದಂತೆ ಲೇಸ್ ತರುತ್ತೇನೆಂದು ೧೦ರೂಪಯಿ ಇಸ್ಕೊಂಡ್ ಹೋದವ ತಂದೆ ಹರೀಶ್‌ಗೆ ಕರೆ ಮಾಡಿ, ಆಮ್ ಡೈಡ್ ಇನ್ ಸತ್ಯಮಂಗಲ ಕೆರೆ ಅಂತೇಳಿ ಕೆರೆಗೆ ಧುಮಿಕಿದ್ಧಾನೆ, ಕೂಡಲೇ ಗಾಬರಿಯಿಂದ ಮನೆಯವರು ಕೆರೆಯತ್ತಿರ ಓಡಿ ಬಂದು ಎಷ್ಟೇ ಹುಡುಕಿದ್ರು ಅಮಿತ್ ಪತ್ತೆಯಾಗಲಿಲ್ಲ, ಬುಧವಾರ ಪೊಲೀಸರಿಗೆ ದೂರು ನೀಡಿ, ಅಗ್ನಿ ಶಾಮಕದಳದ ಸಿಬ್ಬಂಧಿಗಳು ದಿನವಿಡಿ ಕಾರ್ಯಚರಣೆ ನಡೆಸಿದ್ರೂ ಅಮಿತ್ ಚಪ್ಪಲಿಯನ್ನೊರತುಪಡಿಸಿ ಮತ್ತೇನು ಕುರುಹು ಪತ್ತೆಯಾಗಲೇ ಇಲ್ಲ, ಗುರುವಾರವೂ ಸಂಜೆಯವರೆಗೂ ಕಾರ್ಯಚರಣೆ ನಡೆಸಲಾಯ್ತಾದ್ರೂ ಮೃತದೇಹ ಪತ್ತೆಯಾಗಿರಲಿಲ್ಲ, ಆದ್ರೆ ಸೂರ್ಯ ಮುಳುಗುವ ವೇಳೆಗೆ ಅಮಿತ್‌ನ ಮೃತದೇಹ ತೇಲಿಕೊಂಡು ದಡದತ್ತ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಾಸನ ತಾಲ್ಲೂಕಿನ ದುದ್ದ ಹೋಬಳಿ ಉದ್ದೂರುಹಳ್ಳಿ ಗ್ರಾಮದ ಹರೀಶ್ ವೃತ್ತಿಯಲ್ಲಿ ಛಾಯಗ್ರಹಕರಾಗಿದ್ದು, ಸತ್ಯಮಂಗಲ ಕೆರೆಯ ಸಮೀಪವೇ ವಾಸವಾಗಿದ್ರು. ಎಲ್ಲಾ ಪೋಷಕರಂತೆ ಚೆನ್ನಾಗಿ ಓದು ಅಂತಾ ಬುದ್ದಿ ಹೇಳಿದಕ್ಕೆ ಅಮಿತ್ ಆತ್ಮಹತ್ಯೆಗೆ ಶರಣಾಗಿರೋದು ಮಾತ್ರ ವಿಪರ್‍ಯಾಸವೇ ಸರಿ!

ಬೈಟ್- 1: ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.