ಹಾಸನ: ಆಶ್ವೀಜ ಮತ್ತು ಕಾರ್ತಿಕ ಮಾಸದಲ್ಲಿ ಗ್ರಾಮೀಣ ಭಾಗಕ್ಕೂ ಕೊರೊನಾ ವಕ್ಕರಿಸಲಿದೆ. ಹಳ್ಳಿಗಾಡಿನಲ್ಲೂ ಮರಣ ಮೃದಂಗ ಬಾರಿಸಲಿದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಆಚಾರ-ವಿಚಾರ ಜೊತೆಗೆ ಸಾಮಾಜಿಕ ಅಂತರ, ಮಡಿ, ಸಂಪ್ರದಾಯ ಪಾಲಿಸಿದರೆ ಯಾವ ಮಾರಕ ಕಾಯಿಲೆಗಳು ಕೂಡ ನಮ್ಮ ಹತ್ತಿರ ಸುಳಿಯುವುದಿಲ್ಲ. ಸರ್ಕಾರ ಈಗ ಹೇಳಿರುವ ಹಾಗೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಗ ಹೆಚ್ಚೆಚ್ಚು ಹರಡುವ ಸಾಧ್ಯತೆ ಇದ್ದು, ಹಾಗಾಗಿ ಆರೋಗ್ಯ ಕಾಪಾಡುವ ದೃಷ್ಟಿಯಲ್ಲಿ ತಾವು ಎಚ್ಚರವಹಿಸಬೇಕು ಎಂದು ಕೋಡಿಶ್ರೀ ಹೇಳಿದರು.