ಹಾಸನ: ವಿಶ್ವ ಪರಿಸರ ದಿನದ ನಿಮಿತ್ತ ಹಗರೆ ಗ್ರಾಮದ ಈಶ್ವರ ದೇವಾಲಯದ ಮುಂಭಾಗ ಶ್ರೀ ದೇವಿರಮ್ಮ ವನಸಿರಿ ಟ್ರಸ್ಟ್ ನಿಂದ ನವಗ್ರಹ ಗಿಡಗಳಾದ ಎಕ್ಕದ, ಕಗ್ಗಲಿ, ಉತ್ತರಾಣಿ, ಅರಳಿ, ಅತ್ತಿ, ಬನ್ನಿ, ಗರಿಕೆ, ಮುತ್ತುಗ, ದರ್ಬೆ ನೆಡಲಾಯಿತು.
ಇನ್ನು ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ಚಂದ್ರ, ಉಪ ತಹಶೀಲ್ದಾರ್ ಗಂಗಾಧರ, ಬಿಜೆಪಿ ಮುಖಂಡ ಶಾಂತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಲಲಿತಾ ಲಕ್ಷಣ್, ಸಾಲು ಮರದ ಸದಾಶಿವಯ್ಯ, ಗ್ರಾಮಸ್ಥರಾದ ಧರ್ಮ ಸೇರಿದಂತೆ ಇತರರಿದ್ದರು.