ETV Bharat / state

ವಿರಾಟ್‌ ವಿರಾಗಿಯ ಮಹಾಮಸ್ತಕಾಭಿಷೇಕದ ರೂವಾರಿ; ಸರಳ ಸಜ್ಜನಿಕೆಯ ಕರ್ಮಯೋಗಿ

author img

By

Published : Mar 23, 2023, 11:57 AM IST

Updated : Mar 23, 2023, 1:24 PM IST

ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಮಹಾಸ್ವಾಮೀಜಿ ಇಂದು ದೈವಾದೀನರಾಗಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಪೀಠಾಧೀಶರಾಗಿದ್ದ ಶ್ರೀಗಳು ಬೆಳಗೊಳ ಕ್ಷೇತ್ರ ನವನಿರ್ಮಾಣದ ಕಾರಣಕರ್ತರು.

ಶ್ರೀ ಚಾರುಕೀರ್ತಿ ಮಹಾಸ್ವಾಮಿಜಿ ಅಸ್ತಾಂಗತ
ಶ್ರೀ ಚಾರುಕೀರ್ತಿ ಮಹಾಸ್ವಾಮಿಜಿ ಅಸ್ತಾಂಗತ

ಹಾಸನ: ದಕ್ಷಿಣ ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಜೈನ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ (74) ಇಂದು ಬೆಳಗ್ಗೆ ಅಸ್ತಂಗತರಾಗಿದ್ದಾರೆ. ಬೆಳಗಿನ ಜಾವ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ತಲೆಗೆ ಬಲವಾದ ಗಾಯವಾದ ಕಾರಣ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.

ಶ್ರೀಗಳ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ವರಂಗ ಗ್ರಾಮದ ಶ್ರೀಮತಿ ಕಾಂತಮ್ಮ ಮತ್ತು ಚಂದ್ರರಾಜ ದಂಪತಿಯ ಪುತ್ರರಾಗಿ ಮೇ. 03, 1949ರಲ್ಲಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಪ್ರಾರಂಭಿಸಿ ಹೊಂಬುಜ ಹಾಗೂ ವಿವಿಧ ಜೈನ ಮಠಗಳಲ್ಲಿ ಕನ್ನಡ, ಸಂಸ್ಕೃತ, ಪ್ರಾಕೃತ, ಹಿಂದಿ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಪದವಿ ಪಡೆದಿದ್ದಾರೆ. ಸತತವಾಗಿ ಜೈನ ಧರ್ಮದ ತತ್ವಶಾಸ್ತ್ರ ಅಧ್ಯಯನ ಕೈಗೊಂಡಿದ್ದರು. ಡಿ.12, 1963 ರಂದು ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದ ಇವರು 1970ರಲ್ಲಿ ಶ್ರವಣಬೆಳಗೊಳದ ಮಠಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ ಎಂಎ ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ತತ್ವಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಸ್ವಾಮೀಜಿ ಪಡೆದಿದ್ದಾರೆ.

ಶ್ರವಣಬೆಳಗೊಳದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಸ್ಕೃತ ಸಂಸ್ಥೆ ಸ್ಥಾಪಿಸುವ ಮೂಲಕ ಪ್ರಾಕೃತ ಭಾಷೆಗೆ ಮರುಜೀವ ತುಂಬಿದ ಕೀರ್ತಿ ಚಾರುಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ. ಮೊಟ್ಟ ಮೊದಲ ಬಾರಿಗೆ ಪ್ರಾಕೃತ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ ನೀಡುವ ಮೂಲಕ ಗೌರವ ಸಲ್ಲಿಸಿದ ಮೊದಲ ಸ್ವಾಮೀಜಿ ಎಂಬ ಹೆಗ್ಗಳಿಕೆಯೂ ಇವರದ್ದು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪನೆ, ಕನ್ನಡ ಜೈನ ಸಾಹಿತ್ಯ ಸೇವೆಗೆ ಚಾವುಂಡರಾಯ ಪ್ರಶಸ್ತಿ ಸ್ಥಾಪಿಸಿ ವಿಶೇಷ ಸಾಧಕರಿಗೆ ಗೌರವ ನೀಡುತ್ತಾ ಬಂದಿರುವ ಇವರು ದವಲ, ಜಯದವಲ, ಮಹಾದವಲ ಗ್ರಂಥಗಳ 42 ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಅವುಗಳನ್ನು ಪ್ರಕಟಿಸಿ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ.

ಇಂದಿರಾ ಗಾಂಧಿಯಿಂದ ಶ್ರೀಗಳಿಗೆ 'ಕರ್ಮಯೋಗಿ' ಬಿರುದು: ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಆಧ್ಯಾತ್ಮ ಯೋಗಿ, ಭಟ್ಟಾರಕ ಶಿರೋಮಣಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1981ರಲ್ಲಿ ಜರುಗಿದ ಸಹಸ್ರಬ್ದಿ ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಬಹಳ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಭಟ್ಟಾರಕ ಸ್ವಾಮೀಜಿಗೆ 'ಕರ್ಮಯೋಗಿ' ಎಂಬ ಬಿರುದು ನೀಡಿ ಗೌರವಿಸಿದ್ದರು.

ನಾಲ್ಕು ಬಾಹುಬಲಿ ಮಸ್ತಕಾಭಿಷೇಕದ ರೂವಾರಿ: ಜೈನಕ್ಷೇತ್ರ ಶ್ರೀ ಶ್ರವಣಬೆಳಗೊಳದ ಪ್ರಸಿದ್ಧ ಭವ್ಯಮೂರ್ತಿ ಶ್ರೀ ಬಾಹುಬಲಿಗೆ 12 ವರ್ಷಕ್ಕೊಮ್ಮೆ ಜರುಗುವ ವೈಭವದ ಮಹಾಮಸ್ತಕಾಭಿಷೇಕವನ್ನು ವಿಶ್ವವೇ ಕಣ್ತುಂಬಿಕೊಳ್ಳುತ್ತದೆ. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಾಲ್ಕು ಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. 2018ರಲ್ಲೂ ಕೂಡ ಬಹಳ ವಿಜೃಂಭಣೆಯಿಂದ ಮಸ್ತಕಾಭಿಷೇಕ ನೆರವೇರಿಸಿದ ಶ್ರೀಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಬೃಹತ್ ವೇದಿಕೆಯಲ್ಲಿಯೇ ಸ್ವಾಮೀಜಿಯ ಗುಣಗಾನ ಮಾಡಿದ್ದರು.

ಹೆಚ್ಚು ಪ್ರಚಾರಪ್ರಿಯರಲ್ಲದ, ಸರಳ ಸಜ್ಜನಿಕೆಯ ಸ್ವಾಮೀಜಿಯಾಗಿದ್ದ ಇವರು ಮಾಧ್ಯಮಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದು ಮಸ್ತಕಾಭಿಷೇಕದ ಸಂದರ್ಭದಲ್ಲಿ ಮಾತ್ರ. ಜೈನ ಸಂಸ್ಕೃತಿ ಉಳಿಸುವಲ್ಲಿ ತಮ್ಮದೇ ಆದಂತಹ ವಿಶೇಷ ಕೊಡುಗೆ ನೀಡಿರುವ ಇವರು ಅಳಿವಿನಂಚಿನಲ್ಲಿದ್ದ ವಸತಿಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಜೈನ ಸಾಹಿತ್ಯವನ್ನು ಪುನರ್ ಪ್ರಕಟಿಸಿ ಅವುಗಳ ಸಂರಕ್ಷಣೆಗಾಗಿ ಒತ್ತು ನೀಡಿದ ಮೊದಲ ಸ್ವಾಮೀಜಿಯೂ ಹೌದು. 16ಕ್ಕೂ ಹೆಚ್ಚು ವಿದೇಶಗಳಲ್ಲಿ ಜರುಗಿದ ಜೈನ ವಿಚಾರ ಸಂಕೀರ್ಣ ಮತ್ತು ಧರ್ಮ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಸರಳ ಶೈಲಿಯ ಪ್ರವಚನಗಳಿಂದ ಜನಮನ ಗೆದ್ದಿದ್ದ ಭಟ್ಟಾರಕರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಮಾದರಿಯಾಗಿದ್ದಾರೆ.

ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಶ್ರೀಗಳ ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ; ಸಿಎಂ, ಗಣ್ಯರ ಸಂತಾಪ

Last Updated : Mar 23, 2023, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.