ETV Bharat / state

ಸೂರ್ಯಗ್ರಹಣ ಹಿನ್ನೆಲೆ ಪಂಜ ದೇವಸ್ಥಾನದಲ್ಲಿ ಪೂಜೆ... ಹಾಸನದಲ್ಲಿ ಜಾಗೃತಿ ಕಾರ್ಯ - ಕಂಕಣ ಸೂರ್ಯಗ್ರಹಣ

ಕಂಕಣ ಸೂರ್ಯಗ್ರಹಣ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇತ್ತ ಹಾಸನದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

fsedff
ಸೂರ್ಯಗ್ರಹಣ ಹಿನ್ನಲೆ ಪಂಜ ದೇವಸ್ಥಾನದಲ್ಲಿ ಪೂಜೆ,ಹಾಸನದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ
author img

By

Published : Dec 26, 2019, 8:24 PM IST

ಮಂಗಳೂರು: ಕಂಕಣ ಸೂರ್ಯಗ್ರಹಣ ಪ್ರಯುಕ್ತ ಸುಳ್ಯ ತಾಲೂಕಿನ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ವಿಶೇಷ ಕಂಕಣ ಸೂರ್ಯಗ್ರಹಣ ಶಾಂತಿ ಹೋಮ ನಡೆಯಿತು.

ಪಂಜ ಸೀಮೆಯ ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದು, ಅರ್ಚಕರು, ಸೇವಾ ಕಾರ್ಯಕರ್ತರು ಮತ್ತು ಭಕ್ತಾದಿಗಳು ಸಂಕಲ್ಪ ಪೂಜೆ ನೆರವೇರಿಸಿದರು. ದೇವಳದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್ ಸೇರಿದಂತೆ ಭಕ್ತ ಸಮೂಹ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.

ಸೂರ್ಯಗ್ರಹಣ ಹಿನ್ನೆಲೆ ಪಂಜ ದೇವಸ್ಥಾನದಲ್ಲಿ ಪೂಜೆ

ಇನ್ನು ಹಾಸನ ನಗರದ ಜಿಲ್ಲಾ ಕ್ರೀಡಾಂಗದಲ್ಲಿ ಕಂಕಣ ಸೂರ್ಯಗ್ರಹಣ ಹಿನ್ನೆಲೆ ಜನತೆಯಲ್ಲಿರುವ ಮೌಢ್ಯದ ಬಗ್ಗೆ ಭಾರತೀಯ ಜ್ಞಾನ ವಿಜ್ಞಾನ ಸಮಿತಿಯಿಂದ ವೈಜ್ಞಾನಿಕ ಪ್ರಜ್ಞೆ ಮೂಡಿಸಲಾಯಿತು. ಸೂರ್ಯ ಗ್ರಹಣವನ್ನು ವೀಕ್ಷಿಸಲು ಸೋಲಾರ್ ಕನ್ನಡಕದ ವ್ಯವಸ್ಥೆ ಮಾಡಲಾಗಿತ್ತು. ಶೇ. 90ರಷ್ಟು ಗ್ರಹಣ ಗೋಚರಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಮಂದಿ ಮೌಢ್ಯತೆಯಿಂದ ಒಂದು ಹೆಜ್ಜೆ ಮುಂದೆ ಬಂದು ನಭೋಮಂಡಲದಲ್ಲಿ ಗೋಚರಿಸಿದ ಅದ್ಭುತ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.

Intro:ಪಂಜ/ಸುಳ್ಯ

ಕಂಕಣ ಸೂರ್ಯಗ್ರಹಣ ಪ್ರಯುಕ್ತ ಗುರುವಾರದಂದು ಸುಳ್ಯ ತಾಲೂಕಿನ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ವಿಶೇಷ ಕಂಕಣ ಸೂರ್ಯಗ್ರಹಣ ಶಾಂತಿ ಹೋಮ ನಡೆಯಿತು.Body:ಪಂಜ ಸೀಮೆಯ ಸುಮಾರು 500 ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದು,ಅರ್ಚಕರು ಸೇವಾಕಾರ್ಯಕರ್ತರ ಮತ್ತು ಭಕ್ತಾದಿಗಳ ಸಂಕಲ್ಪ ಪೂಜೆ ಮಾಡಿದರು.ನಂತರ ಭಕ್ತರು ಪೂಜೆಯಲ್ಲಿ ಆಸೀನರಾಗಿದ್ದರು.
ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಸೇರಿದಂತೆ ಭಕ್ತ ಸಮೂಹ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.Conclusion:(ಫೋಟೋ, ಮತ್ತು ಲಭ್ಯವಾದ ವೀಡಿಯೋ ಹಾಕಲಾಗಿದೆ.)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.