ETV Bharat / state

ಎತ್ತಿನಹೊಳೆ ಬಗ್ಗೆ ಏನೇ ಮಾತಾಡ್ಲಿ, ಬಯಲು ಸೀಮೆಗೆ ನೀರು ಹರಿದರೆ ಸಾಕು: ಸ್ಪೀಕರ್​ - ಆಡಿಕೊಳ್ಳುವವರು ಆಡಿಕೊಳ್ಳಿ ನಮಗೆ ನೀರು ಬಂದರೆ ಸಾಕು.

ಸ್ಪೀಕರ್​ ರಮೇಶ್​ ಕುಮಾರ್​ ಅವರು ಬಯಲುಸೀಮೆಯ ರೈತರ ನಿಯೋಗವನ್ನು ಕರೆತಂದು ಪರಿಶೀಲನೆ ನಡೆಸಿದರು. ತಾಲೂಕಿನ ಕೆಸಗಾನಹಳ್ಳಿ, ಹೆಬ್ಬನಹಳ್ಳಿ, ದೊಡ್ಡನಾಗರ ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಬೃಹತ್‌ ಕಾಮಗಾರಿ ವೀಕ್ಷಣೆ ಮಾಡಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ ಸ್ಪೀಕರ್​
author img

By

Published : Jun 16, 2019, 9:05 AM IST

ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆಗೆ ಬಂದಿರೋದು ರಾಜಕೀಯ ಗಿಮಿಕ್‌ ಅಲ್ಲ. ಮಾತನಾಡುವವರು ಎಷ್ಟೇ ಮಾತನಾಡಲಿ ಆದರೆ ಬಯಲುಸೀಮೆಗೆ ನೀರು ಹರಿದರೆ ಸಾಕು ಎಂದು ವಿಧಾನ ಸಭೆ ಸ್ಪೀಕರ್‌ ರಮೇಶ್‌ಕುಮಾರ್‌ ಹೇಳಿದ್ರು.

ಬಯಲುಸೀಮೆಯ ರೈತರ ನಿಯೋಗವನ್ನು ಕರೆತಂದು ಪರಿಶೀಲನೆ ನಡೆಸಿದರು. ತಾಲೂಕಿನ ಕೆಸಗಾನಹಳ್ಳಿ, ಹೆಬ್ಬನಹಳ್ಳಿ, ದೊಡ್ಡನಾಗರ ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಬೃಹತ್‌ ಕಾಮಗಾರಿ ವೀಕ್ಷಣೆ ಮಾಡಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ ಸ್ಪೀಕರ್​

ಕೋಲಾರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾನೆ ತಲೆದೂರಿದೆ. ಆ ಭಾಗದ ಜನರು ನೀರು ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಮಗಾರಿ ಯಾವ ಹಂತದಲ್ಲಿ ಇದೆ, ಏನಾದರೂ ಅಡ್ಡಿ ಆತಂಕಗಳಿವೆಯೋ ಈ ಎಲ್ಲವನ್ನೂ ಪರಿಶೀಲನೆ ಮಾಡುವ ಸಲುವಾಗಿ ಭೇಟಿ ನೀಡಿದ್ದೇನೆ ಎಂದವರು ತಿಳಿಸಿದರು.

ರಮೇಶ್‌ ಕುಮಾರ್‌ ಅವರೊಂದಿಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಿಂದ ಸುಮಾರು 200ಕ್ಕೂ ಹೆಚ್ಚು ರೈತರು ಬಸ್ ಗಳಲ್ಲಿ ಆಗಮಿಸಿ ಕಾಮಗಾರಿ ವೀಕ್ಷಣೆ ಮಾಡಿದ್ರು. ಇದು ನಮ್ಮ ಭಾಗದ ಕನಸು. ಅದನ್ನು ನೋಡಲು ನಾವು ಬಂದಿದ್ದೇವೆ. ನಮ್ಮ ಭಾಗದಲ್ಲಿ ಈಗಾಗಲೇ 1500ಕ್ಕೂ ಹೆಚ್ಚು ಆಳಕ್ಕೆ ಅಂತರ್ಜಲ ಕುಸಿದಿದೆ. ಕುಡಿಯುವುದಕ್ಕೆ ಈಗಾಗಲೇ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ ಆದ್ರೆ, ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.

Intro:ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆಗೆ ಬಂದಿರೋದು ರಾಜಕೀಯ ಗಿಮಿಕ್‌ ಅಲ್ಲ. ಮಾತನಾಡುವವರು ಎಷ್ಟೇ ಮಾತನಾಡಲಿ ಆದರೆ ಬಯಲುಸೀಮೆಗೆ ನೀರು ಹರಿದರೆ ಸಾಕು ಎಂದು ವಿಧಾನ ಸಭೆ ಸ್ಪೀಕರ್‌ ರಮೇಶ್‌ಕುಮಾರ್‌ ಹೇಳಿದ್ರು.

ಖುದ್ದು ಭೇಟಿ ಮೂಲಕ ಕಾಮಗಾರಿ ಪ್ರಗತಿ ವೀಕ್ಷಣೆ ಮಾಡಿದ ಸ್ಪೀಕರ್ ಬಯಲುಸೀಮೆಯ ರೈತರ ನಿಯೋಗವನ್ನು ಕರೆತಂದು ಖುದ್ದು ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಕೆಸಗಾನಹಳ್ಳಿ, ಹೆಬ್ಬನಹಳ್ಳಿ, ದೊಡ್ಡನಾಗರ ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಬೃಹತ್‌ ಕಾಮಗಾರಿ ವೀಕ್ಷಣೆಗಾಗಿ ತಮ್ಮ ಕ್ಷೇತ್ರದ ಕೆಲವು ಗ್ರಾಮಗಳ ರೈತರೊಂದಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಕೋಲಾರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳಲು ಸಹ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದೆ. ಆ ಭಾಗದ ಜನರು ನೀರು ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಮಗಾರಿ ಯಾವ ಹಂತದಲ್ಲಿ ಇದೆ, ಏನಾದರೂ ಅಡ್ಡಿ ಆತಂಕಗಳಿವೆಯೋ ಈ ಎಲ್ಲವನ್ನೂ ಪರಿಶೀಲನೆ ಮಾಡುವ ಸಲುವಾಗಿ ಭೇಟಿ ನೀಡಿದ್ದೇನೆ ಎಂದ ಅವರು, ಯೋಜನೆಗೆ ಸ್ವಾಧೀನಪಡಿಸಿರುವ ಭೂಮಿಯ ಹಿಡುವಳಿದಾರರ ಸಮಸ್ಯೆಗೂ ಸಹ ಸ್ಪಂದಿಸುವುದು ಭೇಟಿಯ ಉದ್ದೇಶಗಳಲ್ಲಿ ಒಂದು ಎಂದ್ರು.

ಬೈಟ್: ರಮೇಶ್ ಕುಮಾರ್, ಸ್ಪೀಕರ್.

ಈಗಾಗಾಲೇ ಯೋಜನೆಯ ಮೊದಲ ಹಂತದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಶೇಕಡಾ 80ರಷ್ಟು ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ ಕಾಮಗಾರಿ ಶೇಕಡಾ 46 ರಷ್ಟು ಆಗಿದ್ದು, ಕಾಮಗಾರಿ ತ್ವರಿತವಾಗಿ ನಡೆಸಲಾಗುತ್ತಿದೆ ಎಂಬುದು ಎತ್ತಿನಹೊಳೆ ಎಂಜಿನೀಯರ್ ಮಾತು.

ರಮೇಶ್‌ ಕುಮಾರ್‌ ಅವರೊಂದಿಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಿಂದ ಸುಮಾರು 200ಕ್ಕೂ ಹೆಚ್ಚು ರೈತರು ಬಸ್ ಗಳಲ್ಲಿ ಆಗಮಿಸಿ ಕಾಮಗಾರಿ ವೀಕ್ಷಣೆ ಮಾಡಿದ್ರು.

ಇದು ನಮ್ಮ ಭಾಗದ ಕನಸು ಅದನ್ನು ನೋಡಲು ನಾವು ಬಂದಿದ್ದೇವೆ ನಮ್ಮ ಭಾಗದಲ್ಲಿ ಈಗಾಗಲೇ 1500ಕ್ಕೂ ಹೆಚ್ಚು ಆಳದಲ್ಲಿ ಅಂತರ್ಜಲ ಕುಸಿದಿದೆ. ಕುಡಿಯುವುದಕ್ಕೆ ಈಗಾಗಲೇ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ ಆದ್ರೆ, ಜಾನುವಾರುಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಖುಷಿಯ ವಿಚಾರ ನಮಗೆ ನೀರುಣಿಸಲು ತಮ್ಮ ಜಮೀನನ್ನ ನೀಡಿರುವುದಕ್ಕೆ ನಾವು ಚಿರಋಣಿಯಾಗಿರುತ್ತೇನೆ. ಆದರೆ ಕಾಮಗಾರಿ ಇನ್ನಷ್ಟು ತ್ವರಿತಗತಿಯಲ್ಲಿ ಆದರೆ ಒಳಿತು ನಾವು ಇರುತ್ತೇವೆ ಎಂದ್ರು.

ಬೈಟ್: ಕೆ.ಕೆ.ಮಂಜು, ತಾ.ಪಂ.ಸದಸ್ಯರು, ಶ್ರೀನಿವಾಸಪುರ

ಒಟ್ಟಾರೆ ಎತ್ತಿನಹೊಳೆ ಯೋಜನೆ ಬಯಲುಸೀಮೆಯ ಭಗೀರಥ. ಕಳೆದ ಐದು ವರ್ಷಗಳಿಂದ ಯೋಜನೆ ಕಾಮಗಾರಿ ಸಾಗುತ್ತಾ ಬಂದಿದೆ. ಮಲೆನಾಡು ಕೂಡ ಈಗ ಬರಗಾಲದ ರೀತಿಯಲ್ಲಿ ನೀರಿಗಾಗಿ ಪರಿತಪಿಸುತ್ತಿದೆ ಆದರೆ ಯೋಜನೆ ಮಾತ್ರ ಖಂಡಿತ ಆಗುತ್ತೆ ಎಂಬ ಕನಸನ್ನ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರು ಹೊತ್ತಿದ್ದಾರೆ. ಎತ್ತಿನಹೊಳೆ ಕಾಮಗಾರಿ ಮುಗಿದು ಆದಷ್ಟು ಬೇಗ ಬಯಲುಸೀಮೆಗೆ ನೀರು ಹರಿಯುವ ಕಾದುನೋಡಬೇಕಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.