ETV Bharat / state

ಸೋಮಶೇಖರ್ ಹೇಳಿದ್ರೆ, ನಾನು ಸ್ಪಷ್ಟೀಕರಣ ಕೊಡಬೇಕಾ? : ಸಚಿವ ಜಗದೀಶ್ ಶೆಟ್ಟರ್ - Minister Jagdish Shetter

ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ಘಟಕವೊಂದಕ್ಕೆ ಭೇಟಿ ನೀಡಲು ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಈ ವೇಳೆ ಅವರಿಗೆ‘ರೆಸಾರ್ಟ್ ರಾಜಕೀಯ’ದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ರು.

ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್
author img

By

Published : Jul 2, 2020, 9:24 PM IST

ಹಾಸನ: ಯಾವ ಬರ್ತ್‌ ಡೇನೂ ಗೊತ್ತಿಲ್ಲ, ನನಗೆ ಏನೂ ಅರ್ಥ ಆಗುತ್ತಿಲ್ಲ, ಹಾಗಂತ ಎಲ್ಲೂ ಅಡ್ಡಾಡದೇ ಮನೇಲಿ ಇರಬೇಕಾ?’ಇದು ಗುರುವಾರ ಹಾಸನಕ್ಕೆ ಭೇಟಿ ನೀಡಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು “ರೆಸಾರ್ಟ್ ರಾಜಕೀಯ”ದ ಕುರಿತು ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ರೂಪದ ಪ್ರಶ್ನೆಯಾಗಿತ್ತು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

ನಗರದ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ಘಟಕವೊಂದಕ್ಕೆ ಭೇಟಿ ನೀಡಲು ಗುರುವಾರ ಇಲ್ಲಿಗೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಚಿಕ್ಕಮಗಳೂರಿನ ರೆಸಾರ್ಟ್‌ವೊಂದರಲ್ಲಿ ಮಂಗಳವಾರ ಸಚಿವ ಆರ್. ಅಶೋಕ್ ಅವರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಕೆಲ ಶಾಸಕರು ಹಾಗೂ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ರು. ‘ರೆಸಾರ್ಟ್ ರಾಜಕೀಯ’ದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಆಕ್ರೋಶ ವ್ಯಕ್ತಪಡಿಸಿ, ‘ಚಿಕ್ಕಮಗಳೂರಿನಲ್ಲಿ ಸಭೆ ಮಾಡಲಾಗಿದೆ ಎಂದು ಯಾರು ಹೇಳಿದ್ದು?, ನೀವು ಅಲ್ಲಿಗೆ ಬಂದಿದ್ರಾ?, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರವಾಸ ಮಾಡಿ ಈಗ ಹಾಸನಕ್ಕೆ ಬಂದಿದ್ದೇನೆ. ಇದೆಲ್ಲಾ ಮಾಧ್ಯಮಗಳು ಸೃಷ್ಠಿ ಮಾಡಿರುವುದು. ಇದಕ್ಕೆ ನಾನು ಸ್ಪಷ್ಟೀಕರಣ ಕೊಡಬೇಕಾದ ಪರಿಸ್ಥಿತಿ ಬಂದಿದೆ’ಎಂದು ಕೆಂಡ ಕಾರಿದರು.

‘ಇದು ಬಹಳ ಗಂಭೀರವಾದ ಸಮಸ್ಯೆ. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು. ನಾವು ಅಲ್ಲಿ ಹೋದಾಗ ಮಂತ್ರಿಗಳೇ ಬರ್ತಾರೆ, ಮೀಟಿಂಗ್ ಮಾಡ್ತಾರೆ. ಅವರು ಅಲ್ಲಿ ಅಡ್ಡಾಡಿದಾಗ ಅದನ್ನು ಸಭೆ ಅನ್ನೋದಾದ್ರೆ. ನಾ ಏನು ಹೇಳಲಿ? ಅಶೋಕ್ ನಮ್ಮನ್ನು ಭೇಟಿ ಕೂಡ ಆಗಿಲ್ಲ, ಯಾವ ಸಭೆಯೂ ಮಾಡಿಲ್ಲ’ಎಂದರು.

ರೆಸಾರ್ಟ್ ಸಭೆ ಕುರಿತು ಸಚಿವ ಸೋಮಶೇಖರ್ ಬಾಯಿಬಿಟ್ಟಿರುವ ಕುರಿತು ಕೇಳಿದಾಗ, ‘ಸೋಮಶೇಖರ್ ಹೇಳಿದ್ರೆ, ನಾನು ಸ್ಪಷ್ಟೀಕರಣ ಕೊಡಬೇಕಾ? ಸ್ವತಃ ನಾನೇ ಹೇಳುತ್ತಿದ್ದೇನೆ. ಮಾಧ್ಯಮದವರು ಇದನ್ನು ಅರ್ಥ ಮಾಡಿಕೊಳ್ಳಬೇಕು’ಎಂದು ಶೆಟ್ಟರ್ ನುಣುಚಿಕೊಂಡರು.

ಕೈಗಾರಿಕೆಗಳನ್ನು ಬಲ ಪಡಿಸುವ ಸಲುವಾಗಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರಲಾಗಿದ್ದು, ನಿಯಮ 79 ಎ ಮತ್ತು 79 ಬಿ ಯನ್ನು ರದ್ದು ಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅದೇ ರೀತಿ ಕೈಗಾರಿಕೆಗಳ ಸೌಕರ್ಯ ಅಭಿವೃದ್ಧಿ ಕಾಯ್ದೆ ತಿದ್ದುಪಡಿಗೂ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.