ಅರಕಲಗೂಡು/ಹಾಸನ: ಹಿಮಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ತಾಲೂಕಿನ ಬಾಣದಹಳ್ಳಿ ಮೂಲದ ಯೋಧ ರಾಕೇಶ್ ಬಿ.ಆರ್. ತೀವ್ರ ಅನಾರೋಗ್ಯ ಹಿನ್ನೆಲೆ ಶನಿವಾರ ಚಂಡೀಗಢದ ವೆಸ್ಟರ್ನ್ ಕಮಾಂಡೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ಆಗಮಿಸಿದ್ದು, ಈ ವೇಳೆ ಶಾಸಕರಾದ ಎ.ಟಿ. ರಾಮಸ್ವಾಮಿ ಆಗಮಿಸಿ ರಾಕೇಶ್ ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮೃತ ರಾಕೇಶ್ ಜಮೀನಿನ ಬಳಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಇದೇ ವೇಳೆ ತಾಲೂಕು ಆಡಳಿತ ಮೃತ ಯೋಧನಿಗೆ ಸರ್ಕಾರಿ ಗೌರವ ಸಲ್ಲಿಸಿದ ನಂತರ ಕುಟುಂಬಕ್ಕೆ ಹಸ್ತಾಂತರಿಸಲಿದೆ. ನಂತರ ಮಧ್ಯಾಹ್ನದ ವೇಳೆಗೆ ಮೃತ ಯೋಧನ ಅಂತ್ಯಕ್ರಿಯೆ ಬಾಣದಹಳ್ಳಿಯ ಜಮೀನಿನಲ್ಲಿ ನೆರವೇರಲಿದೆ.

ರಾಕೇಶ್ ಅವರು ಬೆಳಗಾವಿ ಸೈನಿಕ ಶಾಲೆಯಲ್ಲಿ 2018ರಲ್ಲಿ ಮಿಲಿಟರಿ ಸೇನೆ ತರಬೇತಿ ಪಡೆದು ಹಿಮಾಚಲ ಪ್ರದೇಶದಲ್ಲಿ ದೇಶಸೇವೆ ಸಲ್ಲಿಸುತ್ತಿದ್ದರು.