ಹಾಸನ: ಮಂಗಳವಾರದಂದು ಕೇತುಗ್ರಸ್ತ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಾಲಯಕ್ಕೆ ಒಳ ಪ್ರವೇಶ ಮಾಡಲು ಯಾರಿಗೂ ಅವಕಾಶ ಇರುವುದಿಲ್ಲ. ದೇವಸ್ಥಾನದ ಎಲ್ಲ ದ್ವಾರಗಳು ಬಂದ್ ಆಗಲಿವೆ ಎಂದು ಹಾಸನಾಂಬೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜು ತಿಳಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸೂರ್ಯ ಗ್ರಹಣದ ಪ್ರಯಕ್ತ ಹಾಸನಾಂಬ ದೇವಾಲಯದ ಬಂದ್ ಆಗಲಿದೆ. ಎಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕು. ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಮನೆ ದೇವರಿಗೆ ಪ್ರಾರ್ಥನೆ ಮಾಡಿ. ಯಾರೂ ದೇವಸ್ಥಾನಕ್ಕೆ ಬಂದು ತೊಂದರೆ ಮಾಡಿ ನಮ್ಮ ಕಾರ್ಯಕಲಾಪಗಳಿಗೆ ಅಡ್ಡಿ ಮಾಡಬೇಡಿ. ಪೂರ್ಣದಿನ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಮನವಿ ಮಾಡಿದರು.
ನಾವು ನಮ್ಮ ಸಂಪ್ರದಾಯ ವಿಧಿವಿಧಾನದಂತೆ ನಾವು ಕೆಲಸ ಮಾಡಿಕೊಳ್ಳುತ್ತೇವೆ. ನಮ್ಮ ಅನಾದಿಕಾಲದಿಂದ ಏನೇನು ಪೂಜಾಕೈಂಕರ್ಯ ಮಾಡುತ್ತಿದ್ದೇವೋ ಅದನ್ನು ಮಾಡಿಕೊಂಡು ಬರುತ್ತಿದ್ದೇವೆ. ಗ್ರಹಣದ ದಿನ ಏನು ಮಾಡ್ತೀರಾ ಅನ್ನೋ ವಿಚಾರಗಳನ್ನು ಕೆದಕಬೇಡಿ. ಅದಕ್ಕೆಲ್ಲ ನಾವು ಆಸ್ಪದ ಕೊಡುವುದಿಲ್ಲ ಎಂದರು.
ಇದನ್ನೂ ಓದಿ: ಮೈಸೂರು: ಗ್ರಹಣ ದಿನ ಭಕ್ತರಿಗಿಲ್ಲ ಚಾಮುಂಡೇಶ್ವರಿ ದರ್ಶನ