ETV Bharat / state

ಹಾಸನ ಸಣ್ಣ ಕೈಗಾರಿಕೆಗಳ ಸಂಘ ಪದಾಧಿಕಾರಿಗಳ ಪದಗ್ರಹಣ ಆ.26 ರಂದು - Hassan

ಆ. 26ರ ಬುಧವಾರ ಮಧ್ಯಾಹ್ನ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ, ಸಣ್ಣ ಕೈಗಾರಿಕೆಗಳ ಸಂಘದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಹೆಚ್.ಎ. ಕಿರಣ್ ತಿಳಿಸಿದರು.

Hassan
ಪತ್ರಿಕಾಗೋಷ್ಠಿ
author img

By

Published : Aug 24, 2020, 8:41 PM IST

ಹಾಸನ: ನಗರ ಹೊರವಲಯದ ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದ ಸಮೀಪ ಆ. 26ರ ಬುಧವಾರ ಮಧ್ಯಾಹ್ನ ನೂತನ ಕೈಗಾರಿಕಾ ನೀತಿ 2020-25, ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಹೆಚ್.ಎ. ಕಿರಣ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಹೆಚ್.ಎ. ಕಿರಣ್

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಹಾಸನ ಜಿಲ್ಲೆಯ ಸಣ್ಣ ಕೈಗಾರಿಕೆಗಳ ಸಂಘದ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ನೂತನ ಹೂಡಿಕೆದಾರರು, ಮಹಿಳಾ ಉದ್ಯಮಿಗಳು, ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿ ಇರುವವರು ಸೇರಿದಂತೆ ಎಲ್ಲಾ ಉದ್ದಿಮೆದಾರರಿಗೆ ಸಲಹೆ ಸೂಚನೆಗಳನ್ನು ಕೊಡಲು ಬೆಂಗಳೂರಿನಿಂದ ಎಂಎಸ್​ಎಂಇ ನಿರ್ದೇಶನಾಲಯದ ನಿರ್ದೇಶಕಿ ಶ್ರೀಮತಿ ಆರ್.ಎ. ಸುಪ್ರಿಯ ಆಗಮಿಸಲಿದ್ದಾರೆ. ರಾಜ್ಯ ಸರ್ಕಾರದ ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದ ಇನ್ನಿತರ ಅಧಿಕಾರಿ ಗಣ್ಯರು ಭಾಗವಹಿಸುವರು ಎಂದರು.

ಜಿಲ್ಲೆಯಲ್ಲಿರುವ ಎಲ್ಲಾ ತಾಲ್ಲೂಕು ಮತ್ತು ಕೆ.ಐ.ಎ.ಡಿ.ಬಿ. ಇರುವ ಕೈಗಾರಿಕೆಗಳ ಮಾಲೀಕರು, ಎಸ್​ಸಿ, ಎಸ್.ಟಿ., ಸಾಮಾನ್ಯ, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದ ಉದ್ದಿಮೆದಾರರು, ಕೆ.ಎಸ್.ಎಸ್.ಐ.ಡಿ.ಸಿ.ಯಲ್ಲಿರುವ ಎಲ್ಲಾ ಉದ್ದಿಮೆಯ ಬಂಧು ಬಳಗದವರು ಆಗಮಿಸಿ ಇದರ ಅನುಕೂಲತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.